ಬೇಸಿಗೆ ಇಂಟರ್ನ್ಶಿಪ್ಗೆ ಆಯ್ಕೆಯಾದ ಬೆಂಗಳೂರಿನ ವಿದ್ಯಾರ್ಥಿಗಳು

2 years ago

ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ನಲ್ಲಿ ನಡೆಯುವ ಬೇಸಿಗೆ ಇಂಟರ್ನ್ಶಿಪ್ಗೆ ಆಯ್ಕೆಯಾದ ಬೆಂಗಳೂರಿನ ವಿದ್ಯಾರ್ಥಿಗಳು

ಬೆಂಗಳೂರು, 26 ಜೂನ್ 2024: ಆರ್ಕಿಡ್ಸ್ ದಿ ಇಂಟರ್ನ್ಯಾಷನಲ್ ಸ್ಕೂಲ್ನ ಒಟ್ಟು 28 ವಿದ್ಯಾರ್ಥಿಗಳು ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ನಲ್ಲಿ ನಡೆಯುವ ಬೇಸಿಗೆ ಇಂಟರ್ನ್ಶಿಪ್ಗೆ ಆಯ್ಕೆಯಾಗಿದ್ದು, ಅಲ್ಲಿ ಅವರು ಕಲ್ಪನಾಶಕ್ತಿ, ವೈಜ್ಞಾನಿಕ ಪರಿಶೋಧನೆ ಮತ್ತು ನಾವೀನ್ಯತಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಿದ್ದಾರೆ. ಸಿಎಸ್ಐಆರ್ ಜಿಜ್ಞಾಸ ಇಪಿಐಸಿ ಹ್ಯಾಕಥಾನ್ 2024ಕ್ಕೆ ವಿದ್ಯಾರ್ಥಿಗಳು ತಮ್ಮ ಪ್ರೊಜೆಕ್ಟ್ ಗಳನ್ನು ಸಲ್ಲಿಸಿದ ಕಾರಣದಿಂದ ಈ ಇಂಟರ್ನ್ಶಿಪ್ಗೆ ಆಯ್ಕೆಯಾಗಿದ್ದಾರೆ.

ದೇಶಾದ್ಯಂತ ಒಟ್ಟು 960 ಪ್ರೊಜೆಕ್ಟ್ ಗಳು ಸಲ್ಲಿಕೆಯಾಗಿದ್ದು, ಗ್ರೇಡ್ 7-9 ವಿಭಾಗದಲ್ಲಿ ರಾಷ್ಟ್ರಾದ್ಯಂತ 42 ಪ್ರಾಜೆಕ್ಟ್ ಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳಲ್ಲಿ ಆರ್ಕಿಡ್ಸ್ ಇಂಟರ್ನ್ಯಾಷನಲ್ ಸ್ಕೂಲ್ನ 14 ಪ್ರಾಜೆಕ್ಟ್ ಗಳು ಆಯ್ಕೆ ಆಗಿವೆ. 28 ವಿದ್ಯಾರ್ಥಿಗಳು ಸೇರಿಕೊಂಡು ಇಬ್ಬಿಬ್ಬರ ಗುಂಪು ಮಾಡಿ 14 ಪ್ರೊಜೆಕ್ಟ್ ಗಳನ್ನು ಸಲ್ಲಿಸಿದ್ದರು. ಈ ವಿದ್ಯಾರ್ಥಿಗಳು ಶಾಲೆಯ ಶೈಕ್ಷಣಿಕ ವಿಭಾಗದ ಮಾರ್ಗದರ್ಶನದಲ್ಲಿ ಏಕ ಆರೋಗ್ಯ (ಒನ್ ಹೆಲ್ತ್) ಮತ್ತು ಶುದ್ಧ ಹಾಗೂ ಹಸಿರು ಶಕ್ತಿ (ಕ್ಲೀನ್ ಆಂಡ್ ಗ್ರೀನ್ ಎನರ್ಜಿ) ಎಂಬ ಎರಡು ವಿಭಾಗಗಳ ಅಡಿಯಲ್ಲಿ ಪ್ರೊಜೆಕ್ಟ್ ಗಳನ್ನು ಸಿದ್ಧಪಡಿಸಿದ್ದರು. ಅದರಲ್ಲಿ ಬೆಂಗಳೂರು ನಗರದಿಂದ ಆಯ್ಕೆಯಾದ ವಿದ್ಯಾರ್ಥಿಗಳ ಹೆಸರು ಹೀಗಿವೆ- ಮೈಸೂರು ರಸ್ತೆ ಕ್ಯಾಂಪಸ್ನಿಂದ ಸಮರ್ಥ ಪ್ರೀತಂ, ಸಾತ್ವಿಕ್ ಆಚಾರ್, ಸಂಪ್ರೀತ್ ರಾಘವನ್, ತನವ್ ಶೆಟ್ಟಿ ಮತ್ತು ಜಿತೇನ್ ಆರಾಧ್ಯ, ಕಾಡುಗೋಡಿ ಕ್ಯಾಂಪಸ್ನಿಂದ ಸಾಯಿ ನೇಹಾ ವಲ್ಲೇರು ಮತ್ತು ತನಿಷ್ಕಾ ಲಬ್ಬ ಮತ್ತು ಹೊರಮಾವು ಕ್ಯಾಂಪಸ್ನಿಂದ ವೈಭವ್ ಸುಕುಮಾರ್ ಮತ್ತು ಕೃತಿಕ್ ಎಂ. ಇದು 2024ರ ಜುಲೈಯಲ್ಲಿ ಪ್ರಾರಂಭವಾಗುವ ಹೈಬ್ರಿಡ್ ಮೋಡ್ನಲ್ಲಿ ನಡೆಯುವ ಎರಡು ತಿಂಗಳ ಇಂಟರ್ನ್ಶಿಪ್ ಆಗಿರುತ್ತದೆ.

ಸಿಎಸ್ಐಆರ್ ಶಾಲಾ ವಿದ್ಯಾರ್ಥಿಗಳಿಗಾಗಿ ಸಿಎಸ್ಐಆರ್ ಜಿಜ್ಞಾಸಾ ಕಾರ್ಯಕ್ರಮದ ಅಡಿಯಲ್ಲಿ “ಎಂಪವರಿಂಗ್ ಪ್ಯೂಪಿಲ್ ಇನ್ನೋವೇಶನ್ ಆಂಡ್ ಕ್ರಿಯೇಟಿವಿಟಿ (ಇಪಿಐಸಿ)” ಉಪಕ್ರಮವನ್ನು ಪರಿಚಯಿಸಿದೆ. ಇಪಿಐಸಿಯನ್ನು ವಿದ್ಯಾರ್ಥಿಗಳಲ್ಲಿ ಕುತೂಹಲ, ನಾವೀನ್ಯತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವಂತೆ ವಿನ್ಯಾಸಗೊಳಿಸಲಾಗಿದೆ ಹಾಗೂ ವಿಜ್ಞಾನ -ತಂತ್ರಜ್ಞಾನದ ಮೂಲಕ ರಾಷ್ಟ್ರೀಯ ಸಮಸ್ಯೆಗೆ ಪರಿಹಾರ ಒದಗಿಸುವ ಕುರಿತ ಸವಾಲು ನೀಡುತ್ತದೆ. ಸಿಎಸ್ಐಆರ್ ಜಿಜ್ಞಾಸಾ ಇಪಿಐಸಿ ಹ್ಯಾಕಥಾನ್ 2024, ವಿಜ್ಞಾನ-ತಂತ್ರಜ್ಞಾನ ಬಳಸಿಕೊಂಡು ರಾಷ್ಟ್ರದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ಸೂಕ್ತವಾದ ವೇದಿಕೆಯನ್ನು ಒದಗಿಸುವ ಧ್ಯೇಯವನ್ನು ಹೊಂದಿದೆ.

ಆರ್ಕಿಡ್ಸ್ ದಿ ಇಂಟರ್ನ್ಯಾಷನಲ್ ಸ್ಕೂಲ್ನ ಸೀನಿಯರ್ ವಿಪಿ ಅಕಾಡೆಮಿಕ್ಸ್ ಸಕೀನಾ ಖಾಸಿಮ್ ಜೈದಿ, “ಭಾರತದ ಪ್ರತಿಷ್ಠಿತ ಸಿಎಸ್ಐಆರ್ ಇನ್ಸ್ಟಿಟ್ಯೂಟ್ಗೆ ಆಯ್ಕೆಯಾದ ಎಲ್ಲಾ 28 ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಈ ಇಂಟರ್ನ್ಶಿಪ್ ಮೂಲಕ ವಿದ್ಯಾರ್ಥಿಗಳು ಕಲ್ಪನೆ, ವೈಜ್ಞಾನಿಕ ಪರಿಶೋಧನೆ ಮತ್ತು ನಾವೀನ್ಯತಾ ಶಕ್ತಿಯನ್ನು ತೀವ್ರಗೊಳಿಸುವ ಪ್ರಯಾಣದಲ್ಲಿ ಸಾಗಲಿದ್ದಾರೆ. ಸಮಾಜದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದ ಕಲ್ಪನೆಗಳು, ವಿನ್ಯಾಸಗಳು, ಮೂಲಮಾದರಿಗಳು, ತಂತ್ರಜ್ಞಾನ ಮತ್ತು ಸ್ಮಾರ್ಟ್ ಆಪ್ ಗಳನ್ನು ಪ್ರಸ್ತುತಪಡಿಸಲಿದ್ದಾರೆ” ಎಂದು ಹೇಳಿದರು.

Leave a Reply