ದಲಿತ ಮಹಿಳೆ ಮೇಲೆ ದೌರ್ಜನ್ಯ ಆರೋಪ: ಸುಂದರ ಮಾಸ್ಟರ್ ಖಂಡನೆ

5 years ago

ಉಡುಪಿ: ಲಾಕ್ಡೌನ್ ಸಂಧರ್ಭದಲ್ಲಿ ಜೀವನೋಪಾಯಕ್ಕಾಗಿ ಅನ್ಯ ದಾರಿ ಕಾಣದೆ ಮೀನು ಮಾರಾಟ ಸಹಕಾರ ಸಂಘದಿಂದ ಸಧಸ್ಯತ್ವ ಪಡೆದು ಉಡುಪಿ ನಗರಸಭೆ ವ್ಯಾಪ್ತಿಯ ಬ್ರಹ್ಮಗಿರಿ ಬಳಿ ಮೀನು ಮಾರಾಟ ಮಾಡುತ್ತಿದ್ದರು. ಇವರ ಮೇಲೆ ನಗರ ಸಭೆಯ ಆರೋಗ್ಯ ಅಧಿಕಾರಿ ಕರುಣಾಕರ ತಡೆಯೊಡ್ಡಿ ದಲಿತ ಮಹಿಳೆ ಮೇಳೆ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಉಡುಪಿ ನಗರ ಸಭೆ ವ್ಯಾಪ್ತಿಯಲ್ಲಿ ದಲಿತ ಮಹಿಳೆ ರಾಧ ಎಂಬುವವರು ಲಾಕ್ ಡೌನ್ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ಮೀನು ಮಾರಾಟ ಮಾಡುತ್ತಿದ್ದರು. ನಗರ ಸಭೆ ವ್ಯಾಪ್ತಿಯಲ್ಲಿ ನೂರಾರು ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸುತಿದ್ದರು. ಅದೇ ಮಾದರಿಯಲ್ಲಿ ನೂರಾರು ಅನಧಿಕೃತ ಗೂಡಂಗಡಿಗಳಿವೆ.

ಈ ಗೂಡು ಅಂಗಡಿಗಳಿಗೆ ತಡೆಯೊಡ್ಡದೇ ದಲಿತರು ಉದ್ಧಾರ ಆಗಬಾರದೂ ಎಂಬ ಏಕೈಕ ಕಾರಣಕ್ಕಾಗಿ  ಯಾವುದೇ ನೋಟಿಸ್ ನೀಡದೇ ಗೂಡಂಗಡಿಯನ್ನು ಧ್ವಂಸ ಮಾಡಲು ಜೆಸಿಬಿ ತಂದು ಎಳೆದಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಖಂಸುತ್ತದೆ ಸುತ್ತದೆ ಎಂದು ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ಟರ್ ಹೇಳಿದರು.

ದಲಿತ ಸಂಘರ್ಷ ಸಮಿತಿಯ ನಿಯೋಗದೊಂದಿಗೆ ಘಟನಾ ಸ್ಥಳಕ್ಕೆ ಭೇಟಿನೀಡಿ DYSP ಸುಧಾಕರ ನಾಯ್ಕರೊಂದಿಗೆ ಚರ್ಚೆ ನಡೆಸಿದರು. ಇಡೀ ಉಡುಪಿ ಜಿಲ್ಲೆಯಲ್ಲಿ ಎಲ್ಲ ಸಮುದಾಯದವರು ಬೀದಿ ಬದಿ ವ್ಯಾಪಾರ ಮಾಡುತ್ತಾರೆ. ಅವರಿಗೆ ಯಾವ ಅಧಿಕಾರಿಗಳು ಅಡ್ಡಿಪಡಿಸುವುದಿಲ್ಲ. ಆದರೆ ಬೀದಿ ಬದಿಯಲ್ಲಿ ದಲಿತರು ವ್ಯಾಪಾರಕ್ಕೆ ಕೂತರೆ ಇಲ್ಲಸಲ್ಲದ ಕಿರುಕುಳ ಕೊಟ್ಟು ಮುಚ್ಚಿಸುತ್ತಾರೆ. ಅದರಲ್ಲೂ ಬೀದಿ ಬದಿಯಲ್ಲಿ ಮೀನು ವ್ಯಾಪಾರ ಮಾಡಿದರಂತೂ ಅತೀ ಹೆಚ್ಚು ದೌರ್ಜನ್ಯ ನಡೆಯುತ್ತಿದೆ. ಹಲವು ಕಡೆಗಳಲ್ಲಿ ದಲಿತರ ಮೇಲೆ ಹಲ್ಲೆ ಕೂಡ ನಡೆದಿದೆ ಎಂದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದಲಿತರಿಗೆ ಸೂಕ್ತ ರಕ್ಷಣೆ ಕೊಟ್ಟು ದಲಿತರು ಸಹ ಹೊಟ್ಟೆ ಪಾಡಿಗೆ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನಸಾಗಿಸಲು ಅನುಮಾಡಿಕೊಡಬೇಕು ಎಂದರು.

ಅಲ್ಲದೇ ದಲಿತರ ಮೇಲೆ ದೌರ್ಜನ್ಯ ನಡೆಸಿದ ಆರೋಗ್ಯಾಧಿಕಾರಿ ಕರುಣಾಕರ ಅವರನ್ನು ಈ ಕೂಡಲೇ ಬಂಧಿಸಬೇಕು. ಜಿಲ್ಲಾಧಿಕಾರಿಯವರು ಕರುಣಾಕರ ಅವರನ್ನು ಕೂಡಲೇ  ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಪರಮೇಶ್ವರ್ ಉಪ್ಪೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಮಂಜುನಾಥ್ ಬಾಳ್ಕುದ್ರು, ಶ್ರೀಧರ ಕುಂಜಿಬೆಟ್ಟು,  ಶ್ರೀಪತಿ, ಅಣ್ಣಪ್ಪ ಕೊಲಳಗಿರಿ, ಪುರಂದರ ಕುಂದರ್ ಬಿರ್ತಿ, ಸಂಜೀವ ಬಳ್ಕೂರು ಮೊದಲಾದವರು ಹಾಜರಿದ್ದರು.

Leave a Reply