ಕೊರೊನಾದಿಂದಾಗಿ ಎಲ್ಲರೂ ಆತಂಕಿತರಾಗಿದ್ದೀರಿ. ಅದರಲ್ಲೂ ದಿನಕ್ಕೊಂದು ರೂಪದ ಸುದ್ದಿಗಳನ್ನು ಕೇಳಿ ಕಂಗಾಲಾಗಿದ್ದೀರಿ. ಆತಂಕದಿಂದ ಯಾವುದೇ ಪ್ರಯೋಜನವಿಲ್ಲ.
ಕರ್ನಾಟಕ ಕೊರೊನಾ ವಾಲೆಂಟಿಯರ್ಸ್ ಟೀಮ್ ವತಿಯಿಂದ ರಾಜ್ಯದ ಪ್ರತಿಯೊಬ್ಬರ ನಾಗರಿಕರಿಗೂ ಆತಂಕದಿಂದ ದೂರಮಾಡುವ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಪ್ರತಿಯೊಬ್ಬರೂ ಎಚ್ಚರ ವಹಿಸಿ. ಮುಂಜಾಗ್ರತೆ ಕೈಗೊಳ್ಳಲು ಮುಂದಾಗಿ, ನಿಮ್ಮ ಪರಿಚಯದ ಪ್ರತಿಯೊಬ್ಬರಿಗೂ ತಿಳಿಸಿ.
ನಿಮ್ಮೆಲ್ಲರ ಸಹಕಾರದಿಂದ (ಮರ್ಸಿ ಮಿಷನ್, ಎಚ್.ಬಿ.ಎಸ್ ಆಸ್ಪತ್ರೆ ಮತ್ತು ಬಿಎಂಸಿ-92 ವೈದ್ಯರ ಸಹಭಾಗಿತ್ವದಿಂದ) ಈ ಹೆಲ್ಪ್ ಲೈನ್ ಈಗ ಸಮಗ್ರವಾಗಿ ಕೆಲಸ ಮಾಡಲು ಸನ್ನದ್ಧವಾಗಿದೆ. ಪ್ರತಿಯೊಬ್ಬ ರೋಗಿಯನ್ನು ಕರೆ ಮಾಡಿದ ಸಂದರ್ಭದಿಂದ ಗುಣವಾಗುವವರೆಗೂ ಫಾಲೋಅಪ್ ಮಾಡಲು ಪರಿಣಿತರ ತಂಡ ಇರುತ್ತದೆ.
ಹಾಗಾಗಿ ಕೊರೊನಾ ಲಕ್ಷಣ ಕಂಡ, ಟೆಸ್ಟ್ ಪಾಸಿಟಿವ್ ಅಥವಾ ನೆಗೆಟಿವ್ ಇರುವ, ರೋಗ ಉಲ್ಬಣಗೊಂಡ ಯಾರೇ ಇದ್ದರೂ ಅವರಿಗೆ ಈ ನಂಬರ್ 08047166115 ಕಳಿಸಿ, ಕರೆ ಮಾಡಲು ಹೇಳಬಹುದು. ಬೆಡ್ ಸೌಲಭ್ಯ ಬೆಂಗಳೂರಿನಲ್ಲಿ ಮಾತ್ರ.
ಇನ್ನಿತರೆ ಕೌನ್ಸಿಲಿಂಗ್ ಮತ್ತು ಮಾಹಿತಿಗಾಗಿ ಎಲ್ಲರಿಗೂ ಷೇರ್ ಮಾಡಬಹುದು. ಸುರಕ್ಷಿತವಾಗಿರಿ, ಮನೆಯಲ್ಲೇ ಇರಿ, ನೀವೂ ಉಳಿಯಿರಿ ನಿಮ್ಮವರನ್ನು ಉಳಿಸಿರಿ.
https://youtu.be/M-6wXuF4eWY
ಅನವಶ್ಯಕವಾದ ಸುದ್ದಿ, ಪೊಸ್ಟರ್ ಗಳನ್ನು ಷೇರ್ ಮಾಡುವ ಬದಲು ಜೀವ, ಜೀವನ ಉಳಿಸುವ ಈ ವಿಡಿಯೋ ಲಿಂಕ್ ಅನ್ನು ನಿಮ್ಮ ಸಂಪರ್ಕದಲ್ಲಿರುವವರೊಂದಿಗೆ ಷೇರ್ ಮಾಡಿ.



