ನೂತನ NGO ವತಿಯಿಂದ ಆಹಾರದ ಧಾನ್ಯಗಳ  ಕಿಟ್ ವಿತರಣೆ

5 years ago

ಚಿತ್ರದುರ್ಗ: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ  ಲಾಕ್ ಡೌನ್  ಘೋಷಣೆ  ಮಾಡಲಾಗಿದ್ದು ಬಡವರು, ನಿರ್ಗತಿಕರು, ಅಸಹಾಯಕ ಮಹಿಳೆಯರಿಗೆ ಕಷ್ಟವಾಗಿದ್ದು. ಇಂತಹವರನ್ನು ಗುರುತಿಸಿ ಆಹಾರ ಧಾನ್ಯಗಳ ಕಿಟ್ ಗಳನ್ನು ದಾನಿಗಳ  ನೆರವಿನೊಂದಿಗೆ  ವಿತರಣೆ  ಮಾಡಲಾಗುತ್ತಿದೆ ಜಿಲ್ಲಾ  ಪಂಚಾಯಿತಿ  CEO ಡಾ.ನಂದಿನಿ ದೇವಿ ಹೇಳಿದರು.

ಮನೆ ಕೆಲಸ, ಬಡ ನಿರ್ಗತಿಕ ಮಹಿಳೆಯರಿಗೆ ರೇಷನ್ ಕಿಟ್ ವಿತರಣೆಯನ್ನು ಚಿತ್ರದುರ್ಗ  ಜಿಲ್ಲಾಧಿಕಾರಿಗಳ ಕಛೇರಿ ಸಮೀಪದ ಶಿಲ್ಪ ಭವನದಲ್ಲಿ  ಹಮ್ಮಿಕೊಳ್ಳಲಾಗಿತ್ತು. ಚಿತ್ರದುರ್ಗದ ಬಡ, ನಿರ್ಗತಿಕ, ಕೂಲಿ ಕೆಲಸದ ಮಹಿಳೆಯರಿಗೆ ಆಹಾರದ  ಧಾನ್ಯಗಳ ಕಿಟ್ ಗಳನ್ನು ವಿತರಿಸಿದ ನಂತರ ಮಾತನಾಡಿದ ಅವರು, ಕಷ್ಟಕಾಲದಲ್ಲಿ ನೆರವಿನ ಹಸ್ತ ಚಾಚುವಂತೆ ಸಂಘ, ಸಂಸ್ಥೆಗಳಲ್ಲಿ ಕೋರಲಾಗಿದ್ದು, ಜನರ ನೆರವಿನೊಂದಿಗೆ  ಆಹಾರ  ಧಾನ್ಯಗಳನ್ನು  ವಿತರಿಸಲಾಗುತ್ತದೆ ಎಂದರು.

ಮಹಿಳೆಯರು  ಜಾಗೃತಿ ಆಗಬೇಕು. ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸುವುದು, ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು  ಸಲಹೆ ನೀಡಿದರು.

ನೂತನ NGO  ಅಧ್ಯಕ್ಷ  ರಘು ಮಾತನಾಡಿ ಸಂಕಷ್ಟ  ಕಾಲದಲ್ಲಿ ಬಡವರಿಗೆ ನೆರವು ನೀಡುವುದು  ಮಾನವೀಯ ನಡೆಯಾಗಿದ್ದು, ಜಿಲ್ಲಾ  ಪಂಚಾಯಿತಿ CEO ಡಾ.ನಂದಿನಿ ದೇವಿ ಸ್ವತಃ  ಬಡವರ ಪರವಾಗಿ ಗ್ರೂಪ್ ನಲ್ಲಿ ಬರೆದು ಹಾಕಿ ಜಾಗೃತಿ  ಮೂಡಿಸುತ್ತಿದ್ದಾರೆ. ಇಂತಹ ಒಬ್ಬ ಅಧಿಕಾರಿ ಬಡವರ ಪರ ಇರುವುದು ಪ್ರಶಂಸನೀಯ ಎಂದರು

ನೂತನ ಸಂಸ್ಥೆ ಕಳೆದ ಒಂದು ವರ್ಷದಿಂದಲೂ  ಕೆಲಸ ಮಾಡುತ್ತಿದ್ದು, ಇವತ್ತಿಗೂ ಸೇವೆಯನ್ನು ಮುಂದುವರೆಸಿದೆ. ನಮ್ಮ ಕೈಲಾದ  ಸಾಮಾಜಿಕ ಸೇವೆ, ಕೆಲಸವನ್ನು ಮಾಡುವ ಮೂಲಕ ನೆರವು ನೀಡಲು ಸದಾ ಸಿದ್ಧ ಎಂದರು.

ಈ ವೇಳೆ ಪ್ರತಿಕ್ರಿಯಿಸಿದ ನರೇನಹಳ್ಳಿ ಅರುಣ್ ಕುಮಾರ್, ಡಾ.ನಂದಿನಿ ದೇವಿ ಅವರಿಗೆ, ಎಲ್ಲಾ ಇಲಾಖೆಯ ಅಧಿಕಾರಿಗಳ ಸಹಕಾರದಿಂದಾಗಿ ಜಿಲ್ಲೆಯಲ್ಲಿ  ತೀವ್ರವಾಗಿ ಜಾಗೃತಿ ಮೂಡಿದೆ. ಕೊರೋನಾವನ್ನು ಧೈರ್ಯವಾಗಿ ಹಿಮ್ಮೆಟ್ಟಿಸುವಂತಾಗಿದೆ ಎಂದರು

ಆಹಾರ ಧಾನ್ಯಗಳ ಕಿಟ್ ವಿತರಣಾ  ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ  ಕಾರ್ಯನಿರತ  ಪತ್ರಕರ್ತರ  ಸಂಘದ ಅಧ್ಯಕ್ಷ  ಹೆಚ್ .ಲಕ್ಷ್ಮಣ್, ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ರೇಖಾ, ಕಾರ್ಮಿಕ ಇಲಾಖೆ  ಅಧಿಕಾರಿಗಳು, ದಗ್ಗೆ ಶಿವಪ್ರಕಾಶ್ ಮುಂತಾದವರು  ಹಾಜರಿದ್ದರು.

ಇದೇ ಸಂದರ್ಭದಲ್ಲಿ ನೂರಕ್ಕೂ  ಹೆಚ್ಚು  ಮಹಿಳೆಯರಿಗೆ ಆಹಾರ  ಧಾನ್ಯಗಳ ಕಿಟ್ ವಿತರಣೆ  ಮಾಡಿದರು.

Leave a Reply