ಬೆಂಗಳೂರು: ಬುದ್ಧಿಮಾಂದ್ಯನಂತೆ ನಟಿಸಿ ಮೊಬೈಲ್, ಪರ್ಸ್ ಕದಿಯುತ್ತಿದ್ದವನನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ವಿನಯ್ ಬಂಧಿತ ಆರೋಪಿಯಾಗಿದ್ದು, ಆತನಿಂದ 50 ಲಕ್ಷ ಮೌಲ್ಯದ ವಿವಿಧ ಬ್ರ್ಯಾಂಡ್ ನ 150ಕ್ಕೂ ಹೆಚ್ಚು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿನಯ್ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಬುದ್ದಿಮಾಂದ್ಯನಂತೆ ನಟಿಸುತ್ತಾ ನಿಲ್ಲುತ್ತಿದ್ದ. ಬಳಿಕ ನೂಕುನುಗ್ಗಲಿನಲ್ಲಿ ಬಸ್ ಹತ್ತುತ್ತಿದ್ದವರ ಮೊಬೈಲ್, ಪರ್ಸ್ ಕದಿಯುತ್ತಿದ್ದ. ಆರೋಪಿ ವಿನಯ್ ಕದ್ದ ಮೊಬೈಲ್ ಗಳ ಪಾಸ್ವರ್ಡ್ ಒಪನ್ ಮಾಡಿ ಗೂಗಲ್ ಪೇ, ಪೋನ್ ಪೇ ಒಪನ್ ಮಾಡುತ್ತಿದ್ದ. ನಂತರ ಒಟಿಪಿ ಪಡೆದು ಆನ್ ಲೈನ್ ಮೂಲಕ ಆಂದ್ರಪ್ರದೇಶ, ತಮಿಳುನಾಡು ಮಹಾರಾಷ್ಟ್ರ ಸ್ನೇಹಿತರಿಗೆ ಹಣ ಕಳಿಸುತ್ತಿದ್ದ. ನಂತರ ಇದೇ ಅಕೌಂಟ್ ಗೆ ಹಣ ಹಾಕಿಸಿಕೊಂಡು ಮಜಾ ಮಾಡುತ್ತಿದ್ದ. ಇದೇ ರೀತಿ 150ಕ್ಕೂ ಹೆಚ್ಚು ಮೊಬೈಲ್ ಗಳನ್ನು ದೋಚಿ ಆರೋಪಿ ಸಾಕಷ್ಟು ಹಣ ಮಾಡಿರುವ ಅಂಶ ಪತ್ತೆಯಾಗಿದೆ.




