ಸರ್ಕಾರಿ ಆದೇಶಗಳಲ್ಲಿ “ರಾಜೀನಾಮೆ, ವಜಾ, ರದ್ದು ಈ ಮೂರು ಶಬ್ದಗಳು ಸಾಮಾನ್ಯವಾಗಿ ಇರುತ್ತವೆ ಮೊದಲನೆಯದು ಅತೀ ಸೌಮ್ಯವಾದುದು, ಎರಡನೆಯದು ಅವಮಾನಕರವಾದುದು ಮೂರನೆಯದು ನಿಗೂಢವಾದುದು.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಏಕೆಂದರೆ ‘ರದ್ದು ‘ ಅನ್ನುವ ಶಬ್ದ ನೇಮಕಾತಿಯು Faulty procedure ಮತ್ತು Process ಮೂಲಕ ಅಗಿರುವುದನ್ನು ಸೂಚಿಸುತ್ತದೆ ನೇಮಕಾತಿ ಆದೇಶ ಹೊರಡಿಸಿ, ಅನುಷ್ಠಾನಗೊಂಡ ಬಳಿಕ ಪಕ್ರಿಯೆಯ ನೂನ್ಯತೆಗಳು ಪತ್ತೆ ಆಗುತ್ತವೆ. ಅವುಗಳನ್ನು ಆಧರಿಸಿ ನೇಮಕಾತಿ ಆದೇಶ ರದ್ದಾಗುತ್ತದೆ.
ಶ್ರೀ ಗೋವಿಂದ ಸ್ವಾಮಿಯವರ ಪ್ರಕರಣದಲ್ಲಿ ಅವರು ವಿದ್ಯುತ್ ಇಲಾಖೆ ನೌಕರರೆಂದು ಮಾನ್ಯ ಉಪಸಭಾಪತಿ ಶ್ರೀ ರುದ್ರಪ್ಪಲಮಾಣಿಯವರು ದಾವಣಗೆರೆಯ ಶ್ರೀ ನಂಜಾನಾಯಕ (ಕಾಂಗ್ರೆಸ್) ರವರ ಪತ್ರದ ಉಲ್ಲೇಖವನ್ನು ಆಧರಿಸಿ ಸರ್ಕಾರಕ್ಕೆ ಟಿಪ್ಪಣಿ ಕಳಿಸಿರುವರು. ಇಲ್ಲಿ ಗಮನಿಸ ಬೇಕಾಗಿರುವುದು ಅರ್ಹ ಸರ್ಕಾರಿ/ ಅರೇ ಸರ್ಕಾರಿ ನೌಕರರನ್ನು ಈ ರೀತಿಯ ಹುದ್ದೆಗಳಿಗೆ ನಿಯೋಜನೆ ಮೇಲೆ ನೇಮಕಾತಿ ಮಾಡಲು ನಿಯಮಗಳಲ್ಲಿ ಅವಕಾಶವಿದೆ. ಅವರು ನೌಕರರು. ಈ ಕಾರಣಕ್ಕೆ ಅವರ ನೇಮಕಾತಿ ರದ್ದಾಗಿದೆ ಎಂಬುದನ್ನು ಒಪ್ಪಲಾಗುವುದಿಲ್ಲ.
ಇದಕ್ಕೆ ಬೇರೆಯೇ ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದುದು ಸರ್ಕಾರ ಒಳಮೀಸಲಾತಿ ಆದೇಶ ಜಾರಿಗೆ ತಂದಾಗ ಅದಕ್ಕೆ ಕೆಲವು ಬಂಜಾರರು ವಿರೋಧ ವ್ಯಕ್ತಪಡಿಸಿದರು. ಶ್ರೀ ಗೋವಿಂದ ಸ್ವಾಮಿಯವರು ಎರಡು ಮೂರು ಕಡೆ ತಾವು ಸರ್ಕಾರದ ಭಾಗವೆನ್ನುವುದನ್ನು ಮರೆತು ಅದರಲ್ಲಿ ಭಾಗವಹಿದ ಪೋಟೋ/ ಹೇಳಿಕೆಗಳು ದಿನ ಪತ್ರಿಗಳಲ್ಲಿ ಪ್ರಕಟವಾಗಿದೆ. ಇದನ್ನೇ ಅಸ್ತ್ರವಾಗಿಸಿಕೊಂಡು ಈ ಹಿಂದೆ ಆ ಹುದ್ದೆಗೆ ಪ್ರಯತ್ನ ಮಾಡಿ ವಿಫಲರಾದವರು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿರುವರು.
ನೇಮಕಾತಿ “ರದ್ದು” ಅನ್ನುವ ಶಬ್ದ ವ್ಯಕ್ತಿ ಮತ್ತು ಸಮುದಾಯಕ್ಕೆ ಗೌರವವನ್ನು ತರುವ ಶಬ್ದ ಆಗಿರುವುದಿಲ್ಲ. ಶ್ರೀಯುತ ಗೋವಿಂದ ಸ್ವಾಮಿಯವರ ಅರ್ಹತೆ, ಸಾಧನೆ, ಬದ್ದತೆ ಏನೇ ಇರಲಿ ಇಂತಹ ಸನ್ನಿವೇಶದಲ್ಲಿ ಅವರು ಚರ್ಚೆಗೆ ಆಹಾರ ಆಗುತ್ತಾರೆ. ಆ ಕುರಿತು ಅವರ ಬಗ್ಗೆ ನನಗೆ ತುಂಬಾ ಸಹಾನುಭೂತಿ ಇದೆ.
ನನ್ನ ಅಭಿಪ್ರಾಯದಲ್ಲಿ ಒಂದು ಪ್ರಾಧಿಕಾರದ/ ಅಕಾಡೆಮಿ ಅಧ್ಯಕ್ಷರ ನೇಮಕಾತಿಯನ್ನು ರದ್ದು ಮಾಡಿರುವ ಸಂಗತಿಯನ್ನು ನಾನು ಹಲವಾರು ವರ್ಷಗಳಿಂದ ಕೇಳಿಯೇ ಇಲ್ಲ. ಈ ಅನಿರೀಕ್ಷಿತ ಬೆಳವಣಿಗೆಯು ಶ್ರೀ ಗೋವಿಂದಸ್ವಾಮಿಯವರ ವ್ಯಕ್ತಿತ್ವಕ್ಕೆ ಮತ್ತು ಸಮುದಾಯದ ವರ್ಚಸ್ಸಿಗೆ ಕುಂದು ತಂದಿದೆ ಎಂಬುದನ್ನು ಯಾರೂ ಕೂಡ ಅಲ್ಲಗಳೆಯಲಾಗದು.
– ಡಾ.ಆರ್. ಎನ್. ರಾಜಾನಾಯಕ್, ಬೆಂಗಳೂರು-560096




