ಬೆಂಗಳೂರು: ಕೊರೋನಾ ಸಾಂಕ್ರಮಿಕ ರೋಗ ಹೆಚ್ಚಳದಿಂದ ರಾಜ್ಯ ಸರ್ಕಾರದಿಂದ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5ಗಂಟೆ ಲಾಕ್ ಡೌನ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜಾಜಿನಗರ, ವಿಜಯನಗರ, ಮಲ್ಲೇಶ್ವರಂ, ಬಸವೇಶ್ವರನಗರ, ನವರಂಗ್ ಬಳಿ ಮತ್ತು ಮೋದಿ ಆಸ್ಪತ್ರೆ, ಶಂಕರಮಠ, ಕಮಲನಗರದಲ್ಲಿ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿತ್ತು.
ಅಗತ್ಯ ವಸ್ತುಗಳಾದ ತರಕಾರಿ, ದಿನಸಿ, ಮಾಂಸದಂಗಡಿ ಮತ್ತು ಔಷಧಿ ಮಳಿಗೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿತು. ಜನರು ತಮ್ಮ ಊರುಗಳಿಗೆ ತೆರಳಿರುವ ಕಾರಣದಿಂದ ರಸ್ತೆಗಳು ಖಾಲಿ. ಅಲ್ಲಲ್ಲಿ ದ್ವಿಚಕ್ರ ವಾಹನ, ಕಾರುಗಳ ಓಡಾಟ ಕಂಡುಬಂತು. ಪ್ರಮುಖ ರಸ್ತೆಗಳ ಒಂದು ಭಾಗವನ್ನು ಮುಚ್ಚಿ ಬ್ಯಾರಿಕೇಡ್ ಗಳನ್ನು ವಾಹನ ಸವಾರರುಗಳ ಬಳಿ ಅಗತ್ಯ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದರು.



