ಬೆಂಗಳೂರು: ತೋಟಗಾರಿಕೆ ಇಲಾಖೆ ವತಿಯಿಂದ 2024-25 ನೇ ಸಾಲಿನಲ್ಲಿ ಮಂಗಾರು ಮತ್ತು ಹಿಂಗಾರು ಹಂಗಾಮುಗಳ ಮುರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಅನುಷ್ಟಾನಕ್ಕೆ ಯೋಜನೆವಾರು, ಬೆಳೆವಾರು ರೈತರ ವಿವರವನ್ನು ಆನ್ ಲೈನ್ ಪೊರ್ಟಲ್ (www.samrakshane.karnataka.gov.in) ನಲ್ಲಿ ಮಾತ್ರ ನೊಂದಾಯಿಸಲು ಆದೇಶಿಸಿದ್ದು, ಹವಾಮಾನ ಆಧಾರಿತ ಬೆಳೆಗಳಾದ ಮಾವು ಮತ್ತು ದ್ರಾಕ್ಷಿ ಬೆಳೆಯ ಬೆಳೆ ವಿಮೆ ನೊಂದಣಿಗಾಗಿ ಆರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ಬೆಳೆ ವಿಮೆ ಪಡೆಯಲಿಚ್ಚಿಸುವ ರೈತರು ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ಸಂಖ್ಯೆ ನಕಲು ಪ್ರತಿ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ರಾಷ್ಟ್ರೀಯ ಬ್ಯಾಂಕ್, ಸಾಮಾನ್ಯ ಸೇವಾ ಕೆಂದ್ರ/ ಗ್ರಾಮ ಒನ್ ಗಳಲ್ಲಿ ವಿಮೆಗೆ ನೊಂದಾಯಿಸಕೊಳ್ಳಬಹುದು. ಬೆಳೆಸಾಲ ಪಡೆದ ಮತ್ತು ಪಡೆಯದ ರೈತರು ಪಾವತಿಸಬೇಕಾದ ವಿಮಾಕಂತಿನ ಮೊತ್ತವು ಒಂದೇ ಆಗಿದ್ದು, ರೈತರ ಪಾಲಿನ ಮೊತ್ತವು ಬೆಳೆ ವಿಮೆ ಮೊತ್ತಕ್ಕೆ ಶೇ. 5 ರಷ್ಟು ( ಪ್ರತಿ ಹೆಕ್ಷೇರ್ ಗೆ ಮಾವು- ರೂ.4000 ಮತ್ತು ದ್ರಾಕ್ಷಿ ರೂ. 14000 ಸಾವಿರ ಆಗಿರುತ್ತದೆ. ರೈತರ ನೋಂದಣಿ, ವಿಮಾ ಮೊತ್ತ ಪಾವತಿಸಲು ಜುಲೈ 31 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತೋಟಗಾರಿಕೆ/ ಕೃಷಿ ಇಲಾಖೆ/ ಬ್ಯಾಂಕ್ ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ರೂಪ್ ಕಿಶೋರ್, ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪೆನಿ ವಿಮಾಸಂಸ್ಥೆಯ ಪ್ರತಿನಿಧಿ ಮೊಬೈಲ್ ಸಂಖ್ಯೆ: 9505872795, ಸಹಾಯವಾಣಿ ಸಂಖ್ಯೆ: 1800-425-0505, ತೋಟಗಾರಿಕೆ ಉಪನಿರ್ದೇಶಕರು, ಬೆಂಗಳೂರು ನಗರ ಜಿಲ್ಲೆ, ದೂರವಾಣಿ ಸಂಖ್ಯೆ: 080-22860640, 9448999213 ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಆನೇಕಲ್ ತಾಲ್ಲೂಕು , ದೂರವಾಣಿ ಸಂಖ್ಯೆ: 9845268382, ಬೆಂಗಳೂರು ಉತ್ತರ ಮತ್ತು ಯಲಹಂಕ ತಾಲ್ಲೂಕು ದೂರವಾಣಿ ಸಂಖ್ಯೆ: 9036043217, ಬೆಂಗಳೂರು ದಕ್ಷಿಣ ತಾಲ್ಲೂಕು ದೂರವಾಣಿ ಸಂಖ್ಯೆ: 9538953949 ಮತ್ತು ಬೆಂಗಳೂರು ಪೂರ್ವ ತಾಲ್ಲೂಕು ದೂರವಾಣಿ ಸಂಖ್ಯೆ; 9342255556 ಅನ್ನು ಸಂಪರ್ಕಿಸಬಹುದು.




