ಶಿವಮೊಗ್ಗ: 2024-25 ನೇ ಸಾಲಿನಲ್ಲಿ ಆರೋಗ್ಯ ಇಲಾಖೆ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಜಾನಪದ ಕಲಾ ಪ್ರಕಾರದಲ್ಲಿ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರಾಷ್ಟ್ರೀಯ ಆರೋಗ್ಯ ಮತ್ತು ಮಾಹಿತಿ ಶಿಕ್ಷಣ ಸಂವಹನ (ಐಇಸಿ) ಕಾರ್ಯಕ್ರಮದಡಿ ಉತ್ತಮ ಕಲಾ ಪ್ರದರ್ಶನ ನೀಡುವಂತಹ ಕಲಾ ತಂಡಗಳನ್ನು ಅಯ್ಕೆ ಮಾಡಲು ಅರ್ಹ ಜಾನಪದ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಆಸಕ್ತ ಕಲಾ ತಂಡಗಳು ದಿನಾಂಕ: 10-01-2025 ರ ಸಂಜೆ 5 ಗಂಟೆಯೊಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣಾಧಿಕಾರಿಗಳ ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು.
ಕಲಾ ತಂಡಗಳು ಅಥವಾ ಕಲಾವಿದರು ಶಿವಮೊಗ್ಗ ಜಿಲ್ಲೆಯವರಾಗಿರಬೇಕು. ಕಲಾ ತಂಡ/ಕಲಾ ಸಂಘ/ ಯಾವುದೇ ಜಾನಪದ ಕಲಾ ಪ್ರಕಾರ ಹೆಸರಿನಲ್ಲಿ ನೋಂದಣಿಯಾಗಿರಬೇಕು. ಕಲಾ ತಂಡದ ನೋಂದಣಿ ನವೀಕರಣ/ಆಡಿಟ್ ರಿಪೋರ್ಟ್ ವರದಿ ಮತ್ತು ಕಲಾ ತಂಡದ ಮುಖ್ಯಸ್ಥರ ಅಧಿಕೃತ ವಿಳಾಸವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಕಲಾ ತಂಡ ಕಲಾವಿದರನ್ನೊಳಗೊಂಡಿರಬೇಕು ಮತ್ತು ಕಲಾವಿದರು 60 ವರ್ಷದ ಒಳಗಿರಬೇಕು. ಕಲಾ ಪ್ರಕಾರಕ್ಕೆ ತಕ್ಕಂತೆ ತಮ್ಮದೇ ಆದ ಪ್ರಸಾದನ/ಉಡುಪುಗಳೊಂದಿಗೆ ಕಲಾ ಪ್ರದರ್ಶನ ನೀಡಬೇಕು. ಮಹಿಳಾ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ಕಲಾವಿದರನ್ನೊಳಗೊಂಡಿರಬೇಕು. ಕಚೇರಿಯಿಂದ ತಿಳಿಸಿದ ದಿನಾಂಕದಂದು ಆಯ್ಕೆ ಸಮಿತಿ ಮುಂದೆ ಕಲಾ ಪ್ರದರ್ಶನ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣಾಧಿಕಾರಿಗಳ ಕಚೇರಿಯ ಐಇಸಿ ವಿಭಾಗವನ್ನು ಸಂಪರ್ಕಿಸಬಹುದು.




