ಮುಖ್ಯಮಂತ್ರಿಗಳಿಗೆ ಅಲೆಮಾರಿ ಸಮುದಾಯಗಳ ನ್ಯಾಯಕ್ಕಾಗಿ ಮನವಿ
ವಿಷಯ : ಐವತ್ತೊಂಭತ್ತು ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವಂತೆ
ಮೂವತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಪರಿಶಿಷ್ಟಜಾತಿಗಳಿಗೆ ‘ಒಳಮೀಸಲಾತಿ’ ಜಾರಿ ಮಾಡಿ ಸಾಮಾಜಿಕ ನ್ಯಾಯವನ್ನು ಸಮಕಾಲೀನಗೊಳಿಸಿದ ತಮಗೆ ಮತ್ತು ಸರ್ಕಾರಕ್ಕೆ ಗೌರವಪೂರ್ವಕ ಅಭಿನಂದನೆಗಳು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸಾಮಾಜಿಕವಾಗಿ ಹಿಂದುಳಿದಿರುವ, ಆರ್ಥಿಕ ಸವಲತ್ತುಗಳನ್ನೇ ಪಡೆಯದೇ ಹಿಂದುಳಿದಿರುವ ಸಮುದಾಯಗಳ ಬಗೆಗೆ ನೀವು ತೋರಿದ ಕಾಳಜಿ ಮನನೀಯ. ಸರ್ಕಾರ ಇಂತಹ ಸಮುದಾಯಗಳ ಕಾಳಜಿಯನ್ನು ನಿರಂತರವಾಗಿ ತೋರಿಸುತ್ತ ಬಂದಿದೆ. ಈ ಮೂರು ದಶಕಗಳ ಹೋರಾಟಕ್ಕೆ ತಾರ್ಕಿಕ ಅಂತ್ಯವನ್ನು ತೋರಿದ್ದೀರಿ. ಅದು ನಿಮ್ಮ ಸಾಮಾಜಿಕ ಬದ್ಧತೆಯ ರೂಪವೇ ಅಗಿದೆ.
ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿಯನ್ನು ಆಧರಿಸಿ ತಾವು ಸಚಿವ ಸಂಪುಟದಲ್ಲಿ ದಿನಾಂಕ:19/08/2025 ರಂದು ಪ್ರವರ್ಗ ಎ. ಪ್ರವರ್ಗ ಬಿ, ಪ್ರವರ್ಗ ಸಿ ಎಂದು ವಿಭಾಗಿಸಿ ಅವರವರ ಸಾಮಾಜಿಕ ಮತ್ತು ಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ನೀಡಿರುತ್ತೀರಿ. ಈ ವಿಷಯವನ್ನು ಸದನದಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದೀರಿ. ಇದು ವೈಜ್ಞಾನಿಕವಾದ ಮತ್ತು ಮುಂದಾಲೋಚನೆಯನ್ನು ಉಳ್ಳದ್ದಾಗಿದೆ.
ಆದರೆ , ಇದೇ ಸಂದರ್ಭದಲ್ಲಿ ಐವತ್ತೊಂಭತ್ತು ಅಲೆಮಾರಿ ಸಮುದಾಯಗಳನ್ನು ಒಂದು ಮಟ್ಟಿಗೆ ಮುಂದುವರಿದ ಸಮುದಾಯಗಳ ಜೊತೆ ಸೇರಿಸಿರುವುದು ಸಾಮಾಜಿಕ ನ್ಯಾಯ ಎನಿಸುವುದಿಲ್ಲ.ಈ ಅಲೆಮಾರಿ ಸಮುದಾಯಗಳಿಗೆ ಶಿಕ್ಷಣದ ಅರಿವಿಲ್ಲ . ಸಾಮಾಜಿಕ ಆರ್ಥಿಕ ಸಮಾನತೆ ದೂರದ ಮಾತು. ಹಲವು ವೇಷಗಳನ್ನು ಧರಿಸಿಕೊಂಡು ಬೀದಿಯಲ್ಲಿ ಭಿಕ್ಷೆ ಬೇಡುತ್ತ ಬದುಕನ್ನು ಕಟ್ಟಿಕೊಳ್ಳಲು ಊರಿಂದ ಊರಿಗೆ ತಿರುಗುತ್ತಿವೆ.
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದು , ಶೈಕ್ಷಣಿಕ ಸವಲತ್ತುಗಳಿಲ್ಲದೆ, ಉದ್ಯೋಗಗಳನ್ನು ಪಡೆಯದೆ ಅಲೆಯುತ್ತಲೇ ತಮ್ಮ ಬದುಕನ್ನು ಸಾಗಿಸುತ್ತಿವೆ.
ಇಂಥ ಅಲೆಮಾರಿ ಸಮುದಾಯಗಳನ್ನು ಎಲ್ಲ ರೀತಿಯಿಂದಲೂ ಇವರಿಗಿಂತ ಮುಂದುವರಿದಿರುವ ಗುಂಪಿಗೆ ಸೇರಿಸಿದರೆ ಇವರಿಗೆ ಬಾರೀ ಅನ್ಯಾಯವಾಗುತ್ತದೆ. ತಮ್ಮ ಈ ನಿರ್ಧಾರ ಈ ಅವಕಾಶ ವಂಚಿತರನ್ನು ಮತ್ತಷ್ಟು ಅವಕಾಶಗಳಿಂದ ವಂಚಿಸುತ್ತದೆ. ಈ ಜನರು ಎಲ್ಲಾ ರೀತಿಯಿಂದಲೂ ಮತ್ತಷ್ಟು ವಂಚಿತರಾಗುತ್ತಾರೆ.ಇದು ನಿಮ್ಮ ಗಮನದಲ್ಲಿದೆ ಎಂದು ಭಾವಿಸುತ್ತೇವೆ.
ಈ ಹಿಂದೆ ನೀವೆಯೇ ಅಲೆಮಾರಿ ಸಮುದಾಯಗಳ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಯೋಜನೆಗಳನ್ನು ರೂಪಿಸಿದವರು.
ಅಲ್ಲದೆ ಅಲೆಮಾರಿ ಸಮುದಾಯಗಳ ಸಂಸ್ಕೃತಿ, ಆಚರಣೆ, ಬದುಕು ನಮ್ಮ ಕನ್ನಡ ಜನಮಾನಸದ ಭಾಗವೇ ಆಗಿದೆ. ಅವರು ಬಳಸುವ ಭಾಷೆ, ಉಡುಗೆ ತೊಡುಗೆ, ಸಂಸ್ಕೃತಿ ಮತ್ತು ಬದುಕು ನಮ್ಮ ನಾಡಿನ ಅಸ್ಮಿತೆಗೆ ‘ಮೆರುಗು’ ನೀಡುತ್ತದೆ . ಈ ಸಮುದಾಯಗಳ ಅಭಿವೃದ್ಧಿ ನಾಡಿನ ಅಭಿವೃದ್ಧಿಯಾಗುತ್ತದೆ . ಇದನ್ನು ಅನೇಕ ಮಾನವಶಾಸ್ತ್ರರು, ಭಾಷಾವಿಜ್ಞಾನಿಗಳು ಹಾಗೂ ಆರ್ಥಿಕ ತಜ್ಞರು ಅಧ್ಯಯನದ ಮೂಲಕ ತಿಳಿಸಿದ್ದಾರೆ.
ಇವರ ಬದುಕು ವೈವಿಧ್ಯತೆ ಮತ್ತು ಅಸ್ಮಿತೆಯ ಭಾಗವಾಗಿ ನಾಡಿಗೆ ‘ಮೆರುಗು’ ತಂದಿದೆ. ಅಲೆಮಾರಿಗಳ ಬದುಕು ಸುಸ್ಥಿರವಾಗಿದ್ದರೆ ಅವರ ಬದುಕು, ಸಂಸ್ಕೃತಿ, ಅವರಾಡುವ ಭಾಷೆಯೂ ಉಳಿಯುತ್ತದೆ.
ಈ ಎಲ್ಲವನ್ನೂ ಅರಿತಿರುವ ತಾವುಗಳು ಈ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾದ ವರ್ಗವೆಂದು ವಿಂಗಡಿಸಿ ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕೆಂದು ವಿನಂತಿಸುತ್ತೇವೆ. ನಿಮ್ಮ ನೇತೃತ್ವದ ಸರ್ಕಾರ ಈ ಅಲೆಮಾರಿ ಸಮುದಾಯಗಳಿಗೆ ಸ್ವಾಭಿಮಾನ ಮತ್ತು ಘನತೆಯಿಂದ ಬದುಕುವಂತೆ ಅನುವು ಮಾಡಿ ಅವರ ಭಾಷೆ, ಸಂಸ್ಕೃತಿಯನ್ನು ಮತ್ತು ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಅವರಿಗೆ ಸಂಜಿಕ ನ್ಯಾಯ ಒದಗಿಸಿಕೊಡಬೇಕೆಂದು ವಿನಂತಿಸುತ್ತೇವೆ.
*. ನಿರಂಜನಾರಾಧ್ಯ.ವಿ. ಪಿ ., ಬೆಂಗಳೂರು
*. ಬಸವರಾಜ ಸೂಳಿಭಾವಿ ಗದಗ
* ಡಾ. ಎಚ್ ಎಸ್ ಅನುಪಮಾ, ಕವಲಕ್ಕಿ
*. ರಘನಂದನ ರಂಗಕರ್ಮಿ ಬೆಂಗಳೂರ
* ಡಾ. ರಾಜಶೇಖರ ನಾರನಾಳ ಗಂಗಾವತಿ
* ಅಶೋಕ ಶೆಟ್ಟರ ಧಾರವಾಡ
* ಕೆ. ಪಿ. ಲಕ್ಷ್ಮಣ ಬೆಂಗಳೂರ
* ಸನತಕುಮಾರ ಬೆಳಗಲಿ ಧಾರವಾಡ
* ಡಿ. ಎಸ್. ಚೌಗಲೆ ಬೆಂಗಳೂರ
* ಬಂಜಗೆರೆ ಜಯಪ್ರಕಾಶ ಹಾರೋಹಳ್ಳಿ
* ರಾಜಾರಾಂ ತಲ್ಲೂರು, ಉಡುಪಿ.
* ಮೂಡ್ನಾಕೂಡ ಚಿನ್ನಸ್ವಾಮಿ ಬೆಂಗಳೂರ
* ಸಂಜ್ಯೋತಿ ವಿ ಕೆ ಬೆಂಗಳೂರ
* ಅಶೋಕ್ ಡಿ’ಸೋಜ, ಬೆಳಗಾವಿ
* ಬಾ ಹ ರಮಾಕುಮಾರಿ ತುಮಕೂರ
* ಮುತ್ತು ಬಿಳಿಯಲಿ ಗದಗ
* ಡಾ. ನರಸಿಂಹಪ್ಪ ಜಿ ಎಂ ಬೆಂಗಳೂರ
* ಚಂದ್ರಶೇಖರ ತಾಳ್ಯ ಚಿತ್ರದುರ್ಗ
* ಎನ್ ಎಸ್ ಶಂಕರ ಬೆಂಗಳೂರ
* ಮಂಗಳೂರ ವಿಜಯ ಬೆಂಗಳೂರ
* ಜಿ ಪಿ ಬಸವರಾಜು ಮೈಸೂರ
* ಕುಂ ವೀರಭದ್ರಪ್ಪ ಕೊಟ್ಟೂರು
* ರಹಮತ್ ತರೀಕೆರೆ ಹೊಸಪೇಟೆ
* ಕಾಳೇಗೌಡ ನಾಗವಾರ ಮೈಸೂರ
* ಲಕ್ಷ್ಮೀಫತಿ ಕೋಲಾರ
* ರಂಜಾನ ದರ್ಗಾ ಧಾರವಾಡ
* ಚಿಕ್ಕಪ್ಪನಹಳ್ಳಿ ಷಣ್ಮುಖ ತುಮಕೂರ
* ಡಾ. ರಾಮಲಿಂಗಪ್ಪ ಬೇಗೂರ ಬೆಂಗಳೂರ
* ಶಶಾಂಕ ಎಸ್ ಆರ್ ಬೆಂಗಳೂರ
* ಹೇಮಲತಾ ಮೂರ್ತಿ ಬೆಂಗಳೂರ
* ಕೆ. ಎಸ್. ಪಾರ್ಥಸಾರಥಿ ಬೆಂಗಳೂರ
* ಬಿ. ಸುರೇಶ ಬೆಂಗಳೂರ
* ಸಿ ಎಚ್ ಭಾಗ್ಯ ಬೆಂಗಳೂರ
* ಬಸವರಾಜು ಬೆಂಗಳೂರ
* ಕಾಡಶೆಟ್ಟಿಹಳ್ಳಿ ಸತೀಶ್ ತಿಪಟೂರ
* ಹಸನ್ ನಯೀಂ ಸುರಕೋಡ ರಾಮದುರ್ಗ
* ಟಿ. ರತ್ನಾಕರ ಕುಕನೂರ
* ವಿಶುಕುಮಾರ ಬೆಂಗಳೂರ
* ಸುನಂದಾ ಕಡಮೆ ಹುಬ್ಬಳ್ಳಿ
* ಮಲ್ಲಿಕಾರ್ಜುನ ಸಿದ್ದಣ್ಣನವರ ಹುಬ್ಬಳ್ಳಿ
* ಉಮಾಶಂಕರ ಜರೆ ಬಾಗಲಕೋಟ
* ಡಾ ಜೀವನಸಾಬ ವಾಲಿಕಾರ ಬಿನ್ನಾಳ
* ಡಿ. ಎಂ ನಧಾಪ್ ಅಫ್ಜಲಪುರ
* ಶರಣಪ್ಪ ಬಾಚಲಾಪುರ ಕೊಪ್ಪಳ
* ಕುಮಾರ್ ಲಾಲ್ ನದಾಫ್ ಧಾರವಾಡ
* ರಾಜೇಂದ್ರ ಪ್ರಸಾದ ಮಂಡ್ಯ
* ರೇಣುಕಾ ನಿಡಗುಂದಿ ದೆಹಲಿ
* ಅಕ್ಷತಾ ಹುಂಚದಕಟ್ಟೆ ಶಿವಮೊಗ್ಗ
* ಸುಪರ್ಣ ಕೆ ಎಂ ಚಿಕ್ಕಮಗಳೂರ
* ಬಿ. ಆರ್. ಮಂಜುನಾಥ ಬೆಂಗಳೂರ
* ವೀರೇಶ ಶಾನುಭೋಗರ ಅಣ್ಣಿಗೇರಿ
* ಅಬ್ದುಲ್ ಹೈ, ತೋರಣಗಲ್ಲ
* ರಾಯಸಾಬ ದರ್ಗಾದವರ ಹುಬ್ಬಳ್ಳಿ
* ಜಯಲಕ್ಷ್ಮೀ ಪಾಟೀಲ ಬೆಂಗಳೂರ
* ಜಯದೇವಿ ಗಾಯಕವಾಡ ಬೀದರ
* ಸುಭಾಸ ರಾಜಮಾನೆ ಬೆಂಗಳೂರ
* ನಂದಕುಮಾರ ಪಿ ಗುಲ್ಬರ್ಗ
* ರವಿಕುಮಾರ ಎನ್ ಶಿವಮೊಗ್ಗ
* ಕೃಷ್ಣೇಗೌಡ ಟಿ ಎಲ್ ತಲಗವಾಡಿ
* ಪೂಜಾ ಸಿಂಗೆ ಗದಗ
* ಬಸವರಾಜ ಬೋದೂರ ಯಲಬುರ್ಗ
* ಸುರೇಶ ಹುಟ್ಟಿ
* ಕೆ. ರೋಹಿತ ಹಾಸನ
* ಡಾ. ಮುದ್ದಪ್ಪ ಆರ್ ವಿ
* ಶರಣು ಈಳಿಗನೂರ
* ರಜನಿ ಗರುಡ ಧಾರವಾಡ
* ಪೃಥ್ವಿರಾಜ ಬಿ ಎಲ್ ಮಂಡ್ಯ
* ಸುರೇಶ ಅಂಗಡಿ ಹೂವಿನ ಹಡಗಲಿ
* ಎಸ್ ಎ ಗಫಾರ ಕೊಪ್ಪಳ
* ರವೀಂದ್ರಪ್ರಕಾಶ ಯಲಬುರ್ಗ
* ಬಾಸ್ಕರ್ ವೈ ಬೆಂಗಳೂರ
* ಶರಣು ಶೆಟ್ಟರ ಕಲ್ಲೂರ
* ಫಾತಿಮಾ ರಲಿಯಾ ಉಡುಪಿ
* ಡಾ. ಮಹೇಂದ್ರ ಮೂರ್ತಿ ದೇವನೂರು
* ಎಚ್.ಎಸ್.ಬಸವಪ್ರಭು ಕಲಬುರಗಿ.
* ಬಸವರಾಜ ಶೀಲವಂತರ ಕೊಪ್ಪಳ
* ಶಶಿಧರ ತೋಡಕರ, ಧಾರವಾಡ
* ಕಲ್ಲೇಶ ಕುಂಬಾರ, ತೇರದಾಳ
* ಡಾ. ಎಚ್. ಬಿ. ಪೂಜಾರ ಬೆಟಗೇರಿ
* ಡಾ. ಪ್ರತಾಪ್ ಸಿಂಗ್ ತಿವಾರಿ, ಮಾಜಿ ಕುಲಪತಿ, ಗುಲ್ಬರ್ಗ
* ಶೀಲಾ ತಿವಾರಿ, ಸಂಪಾದಕಿ, ಚಿಂತಕ ಕನ್ನಡ ದಿನ ಪತ್ರಿಕೆ, ಕಲಬುರ್ಗಿ.
* ಶಿವರಾಜ್ ಮೋತಿ, ಬೆಂಗಳೂರು
* ರಾಜೇಶ್ ಶಿಂಧೆ, ಬೀದರ್
* ಚಂದ್ರು ವಿ ವರ್ತೂರು, ಬೆಂಗಳೂರು
* ಅಜಿತ್ ಬೆಳ್ಳಿಬಟ್ಲು, ತುಮಕೂರು
* ಸಿ ಡಿ ಚಿನ್ನರಾಜ(ಮೆಟ್ರಿ), ಬೆಂಗಳೂರು
* ರೇಖಾಂಭ ಶಿವಮೊಗ್ಗ
* ಎಚ್ ಎಸ್ ಹರೀಶ್ ಬೆಂಗಳೂರ
* ಡಾ. ಹುಸೇನಪ್ಪ ಅಮರಾಪುರ ಸಿಂಧನೂರ
* ಶ್ರೀಧರ ಎಸ್.ನಾಯ್ಕ, ಶಿರಸಿ
* ಧರ್ಮರಾಜ ಎಂ. ಕಲ್ಯಾಣಿ -ಬೆಂಗಳೂರು
* ಕೆ. ಶ್ರೀನಾಥ ಬೆಂಗಳೂರ
-* ಜ್ಯೋತಿ ಎ. ಬೆಂಗಳೂರ
* ಚಂದ್ರಶೇಖರ ರೋಣದ ನರೇಗಲ್ಲ
* ನಾಗರಾಜ್ ಹೆತ್ತೂರು, ಹಾಸನ
* ನಾಗರಾಜ ಹರಪನಹಳ್ಳಿ ಕುಮಟಾ
* ಗೋವಿಂದರಾಜು ಚಾಮರಾಜನಗರ
* ಅನಂತ ಕಟ್ಟಿಮನಿ ಲಕ್ಷ್ಮೇಶ್ವರ
* ನಾ ದಿವಾಕರ ಮೈಸೂರ
* ಗಿರಿಧರ ಕಾರ್ಕಳ
* ಸಿಕಂದರ ಅಲಿ ತೋರಣಗಲ್ಲ
* ಶ್ರೀಪಾದ ಭಟ್ ಬೆಂಗಳೂರ
* ಗೌರೀಶಾರಾಧ್ಯ, ಗೌರಿಬಿದನೂರು.
* ಶ್ರೀನಿವಾಸ ಶಾಸ್ತ್ರಿ ಹುಬ್ಬಳ್ಳಿ
* ಕೃಷ್ಣ ಜಿಂಗಾಡೆ ಅಣ್ಣಿಗೇರಿ
* ಅನಿಲ ಹೊಸಮನಿ, ವಿಜಯಪುರ
* ವಿಜುಗೌಡ ಕಾಳಶೆಟ್ಟಿ, ತನು ಫೌಂಡೇಶನ್, ವಿಜಯಪುರ
* ಓದೇಶ ಸಕಲೇಶಪುರ ರಾಮನಗರ
* ಕೆ ಆನಂದ್ ಕಾರೂರು, ಉಡುಪಿ ಜಿಲ್ಲೆ
* ಎನ್.ಕೆ. ಮೋಹನ್ ರಾಂ ಬೆಂಗಳೂರ
* ಸರೋಜ ಎಂ.ಎಸ್ ಸಾಗರ
* ಡಾ. ಮಣಿಶ್ರೀ, ಮೈಸೂರು
* ಮಂಜುಳಾದೇವಿ ಬಿ. ಕೆ ಬೆಂಗಳೂರ
* ಎ. ಬಿ. ಹಿರೇಮಠ ಮುಂಡರಗಿ
* ಎಸ್. ಜಿ ಚಿಕ್ಕನರಗುಂದ ರಾಮದುರ್ಗ
* ಸುಧಾ ಸಿ ಹಗರಿಬೊಮ್ಮನಹಳ್ಳಿ
* ಮೇಟಿ ಮಲ್ಲಿಕಾರ್ಜುನ ಶಿವಮೊಗ್ಗ
* ಪ್ರೊ. ತುಮಕೂರು ಚಂದ್ರಕಾಂತ ತುಮಕೂರ
* ಡಾ. ರವೀಂದ್ರ ಬೆಳ್ಳಿ ಬಿಜಾಪುರ
* ಸಿದ್ಧಾರ್ಥ್ ಸಿಂಗೆ,ಅಥಣಿ
* ಸ್ವಾಮಿ ಪೊನ್ನಾಚಿ
* ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಬೆಂಗಳೂರ
* ವಿಜಯಕಾಂತ ಪಾಟೀಲ
* ಕೆ.ಎಚ್.ಪಾಟೀಲ ಧಾರವಾಡ
* ಶಾಂತಕುಮಾರ ಹರ್ಲಾಪುರ ಅಣ್ಣಿಗೇರಿ
* ಸದಾಶಿವ ಸೊರಟೂರ ದಾವಣಗೆರೆ
* ಜಬೀವುಲ್ಲಾ ಎಂ ಅಸದ್
* ,ರಮೇಶ ಕೋಳೂರ ಗದಗ
* ವಿ.ಬಿ.ಮಲ್ಲಪ್ಪ ಬಳ್ಳಾರಿ
* ಕೆ.ಬಿ.ವೀರಲಿಂಗನಗೌಡ್ರ ಸಿದ್ದಾಪುರ
* ಸಾಸ್ವೆಹಳ್ಳಿ ಸತೀಶ್ ಶಿವಮೊಗ್ಗ
* ಮಾರುತಿ ಹಿಪ್ಪರಗಿ. ಮುದ್ದೇಬಿಹಾಳ
* ಡಾ.ಸಂಪಿಗೆ ನಾಗರಾಜ್
* ಶಿವಶಂಕರ ಬಣಗಾರ ಹೊಸಪೇಟೆ
* ಸಂತೆಬೆನ್ನೂರ ಫೈಜ್ನಟ್ರಾಜ್ ಹರಿಹರ,
* ಆನಂದ ಋಗ್ವೇದಿ ದಾವಣಗೆರೆ
* ಕುಮಾರ್ ಯಾಚನ
* ಡಾ. ನವೀನ ಹಳೇಮನೆ
* ಅನುಸೂಯ ಸತೀಶ್ ಬೆಂಗಳೂರ
* ಬಾ.ಚೆನ್ನೇಶ, ಹೊನ್ನಾಳಿ
* ಸುಶೀಲಾದೇವಿ, ದಾವಣಗೆರೆ
* ರಂಗಮ್ಮ ಹೊದೆಕಲ್ ತುಮಕೂರ
* ರಮೇಶ ನೆಲ್ಲಿಸರ
* 4.ಶೇಖಣ್ಣ ಕವಳಿಕಾಯಿ ಗದಗ
* ಮಂಜುನಾಥ ಕೊಡಗವಲ್ಲಿ
* ಚಿಕ್ಕಮಠ ಎಫ್.ವಿ. ಧಾರವಾಡ
* ಮಹಾಂತೇಶ ಕೊತಬಾಳ ಕೊಪ್ಪಳ
* ಪೂರ್ಣಿಮಾ ರಾಜಾರಾವ್ ಬೆಂಗಳೂರ
* ಸಿದ್ಧರಾಮ ತಳವಾರ
* ಕೇಶವ ಕಟ್ಟಿಮನಿ ಕೊಪ್ಪಳ
* ಶಿವಾನಂದ ತಮ್ಮಣ್ಣವರ ಗದಗ
* ಡಾ.ಸಿ ಕೊಟ್ರೇಶ
* ಜೋಶೆಫ್ ಮಲ್ಲಾಡಿ , ಧಾರವಾಡ
,* ಡಾ. ವಸಂತಕುಮಾರ್ ಕಡ್ಲಿಮಟ್ಟಿ, ಇಳಕಲ್.
,* ಹಾರೋಹಳ್ಳಿ ರವೀಂದ್ರ
* ಮಹೇಶ್ ಹೊರಕೇರಿ ಹುಬ್ಬಳ್ಳಿ
* ರಾಜೇಸಾಬ ಬಾಗವಾನ ಗಜೇಂದ್ರಗಡ
* ಪ್ರಕಾಶ ಕೋನಾಪುರ ಶಿವಮೊಗ್ಗ
* ಚೇತನ ಜಮಖಂಡಿ ,ಬೆಳಗಾವಿ
* ದಾದಾಪೀರ್ ನವಲೇಹಾಳ ದಾವಣಗೆರೆ
* ಕೇಶವಮೂರ್ತಿ ಪಿ. ಹಿರಿಯೂರು
* ವಾಸುದೇವ ಕಾಳೆ, ವಿಜಯಪುರ
* ಆರ್ ಕುಮಾರ ಉದ್ದೂರು
* ಪರಶು ಕಾಳಿ ಗದಗ
* ಖಾಸಿಂಅಲಿ ಜಿ ಹುಜರತಿ, ಹಂಪಿ
* ಶಶಿರಾಜ್ ಹರತಲೆ
* ಚಂದ್ರಶೇಖರ ಗೋರೆಬಾಳ ಸಿಂಧನೂರ
* ಅಶೋಕ ಟಿ ಕಟ್ಟಿಮನಿ ಹುಬ್ಬಳ್ಳಿ
* ಶಿವಕುಮಾರ್ ಗುಳಘಟ್ಟ (ನೈಸರ್ಗಿಕ ಬೇಸಾಯಗಾರ)
* ಮಲ್ಲಿಕಾರ್ಜುನ ಹಿರೇಮಠ ಧಾರವಾಡ
* ಚಂದ್ರಶೇಖರ ಕಗ್ಗಲ್ಲಗೌಡ್ರು ಶಿವಮೊಗ್ಗ
* ಪ್ರಿಯಾಂಕ ಮಾವಿನಕರ ಕಲ್ಬುರ್ಗಿ
* ಆರ್.ಎಚ್.ನಟರಾಜ್, ಬೆಂಗಳೂರು
,* ಮಹಮ್ಮದ್ ಪೀರ್ ಲಟಗೇರಿ, ಇಳಕಲ್
* ಹೇಮಂತ ಭೂತ್ನಾಳ ಇಲ್ಕಲ್ಲ
* ಎಸ್.ಎಂ.ನೆರಬೆಂಚಿ, ಮುದ್ದೇಬಿಹಾಳ
,* ಎನ್ ಕೆ ಶೇಷಾದ್ರಿ , ಸಿರುಗುಪ್ಪ
* ದಾದಾಯಾತ ಬಾವುಜಿ ಹಂಪಿ
* ಮಹೇಶಕುಮಾರ ಹನಕೆರೆ, ಬರಹಗಾರ ಮಂಡ್ಯ.
* ನಿಂಗು ಬೆಣಕಲ್ಲ ಕೊಪ್ಪಳ
* ಅಭಿಗೌಡ ಮಂಡ್ಯ
* ಪ್ರಕಾಶ ಬಿ ಶಿರಸಿ
* ಡಾ ನವೀನ್ ಹಳೇಮನೆ
* ಬಸವರಾಜ ಕುರುಗೋಡ ಹಿರೇನಾಗನೂರ
* ಶೌಕತ್ ಅಲಿ ಆಲೂರ ಗುಲ್ಬರ್ಗ
* ದೇವರಾಜ ಹುಣಸಿಕಟ್ಟಿ ರಾಣೇಬೆನ್ನೂರ
* ಮಾರುತಿ ಗೋಖಲೆ ಕಲ್ಬುರ್ಗಿ
* ಗುಲಾಬಿ ಬಿಳಿಮಲೆ ಮಂಗಳೂರ
* ಡಾ. ಸುಭಾಷ ರಾಮರಥ ಹುಬ್ಬಳ್ಳಿ
* ಡಾ. ಕೆ ಶಶಿಕಾಂತ ಲಿಂಗಸುಗೂರ
* ಇಮ್ತಿಯಾಜ್ ಹುಸೇನ ದಾವಣಗೆರೆ
* ಎಸ್ ನಂದೀಶ ನೆಲಮಂಗಲ
* ಕೆ ನಾರಾಯಣ ಸ್ವಾಮಿ, ಬೆಂಗಳೂರು
* ಮಾದವಿ ಭಂಡಾರಿ ಶಿರಸಿ
* ಕೆ ನಾರಾಯಣ ಸ್ವಾಮಿ, ಬೆಂಗಳೂರು
* ವೀರಭದ್ರ ಕೌದಿ-ಬೈಲಹೊಂಗಲ
* ಅರುಣ ಭಾಸ್ಕರ ಬೆಂಗಳೂರ
* ಬಿ. ಪೀರ್ ಬಾಷಾ ಹೊಸಪೇಟೆ
* ಬಿ. ಮಹೇಶ್ ಹರವೆ ಮೈಸೂರ
* ಭೀಮೇಶ ಯರಡೋಣಿ ಗುಡಗೇರಿ
* ನಂದಕುಮಾರ ಕುಂಬ್ರಿ ಉಬ್ಬು
* ಡಾ. ಮಹೇಂದ್ರ ಕುಮಾರ ಬಿ ಪಿ ದಾಂಡೇಲಿ
* ಮಹಾಂತಪ್ಪ ನಂದೂರ ಹುಬ್ಬಳ್ಳಿ
* ಡಾ. ವೆಂಕಟಯ್ಯ ಅಪ್ಪಗೆರೆ ಬಳ್ಳಾರಿ
* ಚಂದುಸಾಬ ಚವಡಾಪುರ ಚಿಕ್ಕೋಡಿ
* ತ್ರೀಭುವನೇಶ್ವರಿ ಗೌರಿಬಿದನೂರ
* ಅಚುಶ್ರೀ ಬಾಂಗೇರು ದಕ
* ಬಿ. ಸಿದ್ದಪ್ಪ ಹಿರಿಯೂರ
* ವಿ. ಆರ್. ಕಾರ್ಪೆಂಟರ್ ಬೆಂಗಳೂರ
* ಬಸವರಾಜ ಬಿ ಸಿ ಬೆಂಗಳೂರ
* ಮುತ್ತುರಾಜು ಬೆಂಗಳೂರ
* ಡಾ. ವಿ ಎ ಲಕ್ಷ್ಮಣ ಬೆಂಗಳೂರ
* ಅಶ್ವಜೀತ ದಂಡೀನ ಬೀದರ
,* ಬಸವನಗೌಡ ಸುಳೇಕಲ್ಲ ಕನಕಗಿರಿ
* ಮಹಾಂತೇಶ ಬಿ. ನಿಟ್ಟೂರ ದಾವಣಗೆರೆ
* ಅನಂತ ಕಟ್ಟೀಮನಿ ಲಕ್ಷ್ಮೇಶ್ವರ
* ಗೀತಾ.ಎಂ.ಹೀರೊಳ್ಳಿ (ಕಲ್ಬುರ್ಗಿ)
* ದೊಡ್ಡಿಶೇಖರ್
* ಚಿಕ್ಕಣ್ಣ ಬಿ ಎಸ್ ತುಮಕೂರು
* ಅಭಿಷೇಕ ಎಂ. ಕುಪ್ಯಂ
* ಎನ್.ಟಿ.ಅನಂತಪದ್ಮನಾಭ ಬೆಂಗಳೂರು
* ರುಕ್ಮಿಣಿ ವಿ ಬೆಂಗಳೂರು
* ಸತೀಶ ಕ ಪಾಶಿ ಗದಗ
,* ಬಸವರಾಜ ಬ್ಯಾಗವಾಟ ದೇವದುರ್ಗ
* ಮಲ್ಲಿಕಾರ್ಜುನ ಗದ್ದನಕೇರಿ ಬಿಜಾಪುರ
* ಶರಣಪ್ಪ ಸಂಗನಾಳ ಹಾವೇರಿ
* ಸರಸ್ವತಿ ಚಿತ್ರದುರ್ಗ
* ಬಸವರಾಜ ಹೃತಾಕ್ಷಿ
* ಲಕ್ಷ್ಮಣ ಮಂಡಲಗೇರಾ
* ಗುರುಪ್ರಸಾದ ಬಿಜಿ ತಾಳಿಕೋಟಿ
* ಬಸವರಾಜ ನಾಡಗೌಡ ಹುನಗುಂದ
* ಪ್ರಗಾಥ ಕೆ ಆರ್ ಬೆಂಗಳೂರ
* ಸಿ ಎಸ್ ಭೀಮರಾಯ
* ಎಸ್ ಕೆ ರಾಜೂಗೌಡ
* ಮಲ್ಲಿಕಾರ್ಜುನ ಭಾಸ್ಕರ
* ಸತೀಶ ಚಿಕ್ಕಮಗಳೂರ
* ಡಾ.ಪ್ರದೀಪ ಆರ್.ಎನ್, ಮಂಡ್ಯ.
* ಅನಿರೀಕ್ಷಿತ ನಾರಾಯಣ
* ಉಗ್ರಸಿಂಹೇಗೌಡ ಮೈಸೂರ
* ಸಂಕೇತ ಪಾಟೀಲ, ಬೆಂಗಳೂರು.
* ನಾರಾಯಣ ರವಿಶಂಕರ
* ನವೀನ್ ಪೂಜಾರಳ್ಳಿ
* ಸೋಮಶೇಖರ್ ಪಡುಕರೆ
* ಅಬ್ಬೂರ ಪ್ರಕಾಶ
* ಪ್ರಸನ್ನ ಎಚ್ ಜಿ
* ಭಾಗ್ಯಲಕ್ಷ್ಮಿ
* ಡಾ. ಮಂಜುನಾಥ, ಬೆದವಟ್ಟಿ
* ಡಾ.ಎಂ.ಡಿ.ಒಕ್ಕುಂದ ಧಾರವಾಡ
* ಡಾ. ಪ್ರಸಾದ್ ಗೌಡ, ಚನ್ನಪಟ್ಟಣ
* ಫಕ್ಕಿರೇಶ ಹುಳ್ಳಳ್ಳಿ ದಾವಣಗೆರೆ
* ಮನುಶ್ರೀ ಬಾಬು
* ವಿನಯಾ ಒಕ್ಕುಂದ ಧಾರವಾಡ
* ಶಿವಶಂಕರ ಬಣಕಾರ ಹೊಸಪೇಟೆ
* ಗುರುಬಸವ ಬರಗೂರ
* ಮಂಜುಳ ಬಿವಿ ಬೆಂಗಳೂರ
* ಮೈಲಾರಪ್ಪ ಡಿ ಎಚ್
* ಕೆ ವಿ ವೆಂಕಟಶಿವಪ್ಪ
* ಕೆ ಅಮರೇಶ ದೊರೆ
* ಬಾಲಾಜಿ ಕೆ ಕಾಂಬಳೆ
* ಪ್ರೊ ಗಂಗರಾಮ್ ಚಂಡಾಲ ಮೈಸೂರ್
* ಕೆ. ಆರ್ ದುರ್ಗಾದಾಸ ಧಾರವಾಡ
* ಕಲ್ಲಯ್ಯ ಚಿಕ್ಕಮಗಳೂರು.
* ಉಷಾ ಅಂಬ್ರೋಜ್ ಮೈಸೂರ
* ರಮೇಶ ಮಲ್ಲಪ್ಪ ಬಳಗಾರ ಬೆಳಗಾವಿ
* ಬಸವರಾಜ ಜಾಲವಾದಿ ಬಿಜಾಪುರ
* ಇಂದುಮತಿ ಲಮಾಣಿ ಬಿಜಾಪುರ
* ಲೋಹಿತ ಸುಡುಗಾಡು ಸಿದ್ಧ ಚಿಕ್ಕಮಗಳೂರ
* ರಾಘವೇಂದ್ರ ಬಿ ಮಧುಗಿರಿ
* ಕೆ. ಬಿ. ಗೋನಾಳ ಕೊಪ್ಪಳ
* ಶಂಕರಗೌಡ ಸಾತ್ಮಾರ ಹುಬ್ಬಳ್ಳಿ
* ಎಂ ಗಂಗಾಧರ ಆರ್ ಸಿ ಎಫ್ ಸಿಂಧನೂರ
* ಡಾ. ಪ್ರದೀಪ್ ಮಾಲ್ಗುಡಿ
* ಡಾ. ಚಂದ್ರಕಲಾ ಜಿ




