ಎಲ್ಲ ಸಮಸ್ಯೆಗೆ ಎಲ್ಲ ಪ್ರಶ್ನೆಗೆ ಉತ್ತರ ಒಂದೇ
ದಿನದಿಂದ ದಿನಕ್ಕೆ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ಪ್ರಶ್ನಿಸಿದರೆ, ಧರ್ಮ ಅಪಾಯದಲ್ಲಿದೆ ಎಂಬ ಉತ್ತರವಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ದಿನದಿಂದ ದಿನಕ್ಕೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಪ್ರಶ್ನಿಸಿದರೆ, ಧರ್ಮ ರಕ್ಷಿಸಬೇಕು ಎಂದು ಉತ್ತರಿಸುತ್ತಾರೆ.
ದಿನದಿಂದ ದಿನಕ್ಕೆ ನಿರುದ್ಯೋಗ ಹೆಚ್ಚಾಗಿ ಯುವಜನತೆ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಎಂದು ಹೇಳಿದರೆ, ಮೊದಲು ಧರ್ಮವನ್ನು ಕಾಪಾಡಬೇಕು ಎಂದು ಹೇಳುತ್ತಾರೆ.
ನಮ್ಮ ಊರಿನ ಶಾಲೆಗಳು ಶಿಥಿಲಗೊಂಡಿದೆ, ಸೌಲಭ್ಯ ಸೌಕರ್ಯಗಳು ಮಾಯವಾಗಿದೆ ಎಂದು ಪ್ರಶ್ನಿಸಿದರೆ, ನಮ್ಮ ಶ್ರದ್ಧಾ ಕೇಂದ್ರಗಳು ಒತ್ತುವರಿಯಾಗಿದೆ ಎಂದು ಉತ್ತರಿಸುತ್ತಾರೆ.
ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ, ತಾಯಂದಿರು ಅಪೌಷ್ಟಿಕತೆಯಿಂದ ಉಸಿರು ಚೆಲ್ಲುತ್ತಿದ್ದಾರೆ ಎಂದು ಹೇಳಿದರೆ, ನಮ್ಮ ಧರ್ಮದ ಜನಸಂಖ್ಯೆ ಹೆಚ್ಚಿಸಿಕೊಳ್ಳಬೇಕು ಎಂದು ಉತ್ತರಿಸುತ್ತಾರೆ.
ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ, ನುರಿತ ವೈದ್ಯರು ವಿದೇಶ ಸೇರುತ್ತಿದ್ದಾರೆ, ಚಿಕಿತ್ಸೆ ನೀಡಲು ಸಿಬ್ಬಂದಿಯ ಕೊರತೆ ಇದೆ ಎಂದು ಹೇಳಿದರೆ, ನಮ್ಮ ,ನಮ್ಮ ಧಾರ್ಮಿಕತೆಯನ್ನು ಮೆರೆಸೋಣ ಬನ್ನಿ ಎಂದು ಹೇಳುತ್ತಾರೆ.
ಮಾನವೀಯತೆ ಮರೆಯಾಗುತ್ತಿದೆ, ಧಾರ್ಮಿಕತೆಯ ಹೆಸರಿನಲ್ಲಿ ಮನುಷ್ಯತ್ವ ಮಣ್ಣುಸೇರುತ್ತಿದೆ ಮಾನವ ಪ್ರೀತಿ ಉಳಿಸಬೇಕು ಎಂದರೆ, ಜೀವಕ್ಕಿಂತ ಧರ್ಮ ದೊಡ್ಡದು ಎಂದು ಹೇಳುತ್ತಾರೆ
– ಕೆ ಎಸ್ ನಾಗರಾಜ್, ಬೆಂಗಳೂರು




