ಲೇಗರ್ ಚಿತ್ರದ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟ ಅನನ್ಯಾ ಪಾಂಡೆ, ಮಾಡೆಲಿಂಗ್ ಕ್ಷೇತ್ರದಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗೆ ಪ್ಯಾರಿಸ್ ಕೌಚರ್ ವೀಕ್ ನಲ್ಲಿ ವಿಶೇಷವಾದ ಉಡುಗೆಗಳನ್ನ ಧರಿಸಿ ಫ್ಯಾಷನ್ ಜಗತ್ತು ಮತ್ತು ಪರಿಸರ ಪ್ರೇಮಿಗಳ ಗಮನವನ್ನೂ ಸೆಳೆದಿದ್ದಾರೆ. ಡಿಸೈನರ್ ರಾಹುಲ್ ಮಿಶ್ರಾ ಅವರ ವಿನ್ಯಾಸದ ದಿರಿಸುಗಳನ್ನು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅನನ್ಯಾ ಪಾಂಡೆ ಮಿಂಚುತ್ತಿದ್ದಾರೆ.
ಇದು ಎಂತಹ ಕ್ಷಣ! ಪ್ಯಾರಿಸ್ ಕೌಚರ್ ವೀಕ್‌ನಲ್ಲಿ ರಾಹುಲ್ ಮಿಶ್ರಾ ಅವರಿಗಾಗಿ ನಡಿಗೆ. ನಮ್ಮೊಂದಿಗೆ ಪರಿಸರದಲ್ಲಿ ವಾಸಿಸುವ ಜಾತಿಯ ಕೀಟಗಳು ಮತ್ತು ಸರೀಸೃಪಗಳೊಂದಿಗೆ ಜೀವನವನ್ನು ಹಂಚಿಕೊಳ್ಳುವ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಗಮನ ಸೆಳೆಯುವ ಅವರ ‘ಸೂಪರ್‌ಹೀರೋಸ್’ ಸಂಗ್ರಹದ ಹಿಂದಿನ ಕಲ್ಪನೆ ನನಗೆ ತುಂಬಾ ಇಷ್ಟವಾಯಿತು ಎಂದು ಅನನ್ಯಾ ಪಾಂಡೆ ಹೇಳಿದ್ದಾರೆ.

ಗ್ರಹದಲ್ಲಿ ನಮ್ಮ ಜೀವನವನ್ನು ಕಟ್ಟಿಕೊಳ್ಳುವ ಅನ್ವೇಷಣೆಯಲ್ಲಿ, ನಾವು ಅವುಗಳ ಆವಾಸಸ್ಥಾನಗಳನ್ನು ವಶಪಡಿಸಿಕೊಂಡಿರಬಹುದು ಮತ್ತು ಅವುಗಳನ್ನು ಅಳಿವಿನಂಚಿಗೆ ತಳ್ಳಿರಬಹುದು ಎಂದು ಜೀವದಯೆಯನ್ನು ವ್ಯಕ್ತಪಡಿಸಿದ್ದಾರೆ.





