ಹಿರಿಯ ಪತ್ರಕರ್ತ ಶ್ರೀ ಶಶಿಧರ ಭಟ್ ಅವರಿಗೆ ನೆರವಾಗಲು ಬಹಿರಂಗ ಕೋರಿಕೆ ಪತ್ರ
ಶ್ರೀ ಸಿದ್ದರಾಮಯ್ಯ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ ವಿಧಾನ ಸೌಧ
ಬೆಂಗಳೂರು560001
ಮಾನ್ಯರೆ
ವಿಷಯ: ಹಿರಿಯ ಪತ್ರಕರ್ತ ಶ್ರೀ ಶಶಿಧರ ಭಟ್ ಅವರಿಗೆ ನೆರವಾಗಲು ಬಹಿರಂಗ ಕೋರಿಕೆ ಪತ್ರ:
ಶ್ರೀ ಶಶಿಧರ ಭಟ್ ಕರ್ನಾಟಕದ ಹಿರಿಯ ಪತ್ರಕರ್ತರು ಹಾಗೂ ಕಳೆದ ಮುವತ್ತು ವರ್ಷಗಳಿಂದಲೂ ನಾಡಿನ ಹೆಸರಾಂತ ಪತ್ರಿಕೆ, ಸುದ್ದಿವಾಹಿನಿಗಳ ಮುಖ್ಯಸ್ಥರಾಗಿ ಕೆಲಸ ಮಾಡಿದವರು ಹಾಗೂ ಕರ್ನಾಟಕದ ಸೌಹಾರ್ಧತೆ, ಸಾಮರಸ್ಯದ ರಕ್ಷಣೆಗಾಗಿ ತಮ್ಮ ಬರವಣಿಗೆಯನ್ನು ಸದಾ ಮುಡುಪಾಗಿಟ್ಟುವರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಪ್ರಜಾಪ್ರಭುತ್ವ, ಸಂವಿಧಾನ ಆಶಯಗಳನ್ನು ಸಂರಕ್ಷಿಸಲು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗವನ್ನು ಸಮರ್ಥವಾಗಿ ಬಳಸಿಕೊಂಡು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿಗಳ ಕೆಂಗಣ್ಣಿಗೆ ಗುರಿಯಾದವರು ಶ್ರೀ ಶಶಿಧರ ಭಟ್ಟರು.
ಇಂತಹ ಶ್ರೀ ಶಶಿಧರ ಭಟ್ಟ ಅವರು ಸ್ವತಃ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸ್ತಮಾ ಹಾಗೂ ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಸುದ್ದಿಯನ್ನು ಮತ್ತು ತಮ್ಮ ಅಸಹಾಯಕ ಸ್ಥಿತಿಯನ್ನು ಅತ್ಯಂತ ನೋವಿನಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. ಈ ವಿಷಯ ಈಗ ನಾಡಿನಾದ್ಯಂತ ಚರ್ಚೆಯಾಗಿ ನೂರಾರು ಭಟ್ಟರ ಗೆಳೆಯರು, ಅಭಿಮಾನಿಗಳು, ಹಿತೈಷಿಗಳು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.
ಶ್ರೀ ಶಶಿಧರ ಭಟ್ಟ ಅವರು ಕರ್ನಾಟಕ ಬಿಜೆಪಿ ನೇತೃತ್ವದ ಕೋಮುವಾದಿ ಸರ್ಕಾರ ಸೋಲಿಸಿ ಪ್ರಜಾಪ್ರಭುತ್ವ, ಜಾತ್ಯಾತೀತ ಸೌಹಾರ್ದ ಪರಂಪರೆ ರಕ್ಷಣೆ ಸರ್ಕಾರ ಬರಬೇಕೆಂದು ಆಶಿಸಿ ಸಾಕಷ್ಟು ಶ್ರಮವಹಿಸಿದ ಬೆರಳೆಣಿಕೆ ಪತ್ರಕರ್ತರಲ್ಲಿ ಒಬ್ಬರು. ಇಂತಹ ಹಿರಿಯ ಪತ್ರಕರ್ತನೊಬ್ಬ ಅನಾರೋಗ್ಯ ಮತ್ತು ಅಸಹಾಯಕತೆಯಿಂದ ಆಸ್ಪತ್ರೆಯಲ್ಲಿ ಇರುವಾಗ ನಿಮ್ಮಂತಹವರು ಅವರ ನೆರವಿಗೆ ಧಾವಿಸಬೇಕಿದೆ. ಇದನ್ನು ನಾಡಿನ ಸಾವಿರಾರು ಜನರು ನಿಮ್ಮಿಂದ ನಿರೀಕ್ಷಿಸುತ್ತಿದ್ದಾರೆ.
ಆದ್ದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀ ಶಶಿಧರ ಭಟ್ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಮತ್ತು ಸಾಧ್ಯವಾದರೆ ಅವರ ಆರೋಗ್ಯ ಸುಧಾರಣೆಗೆ ಅಗತ್ಯವಿರುವ ಉನ್ನತ ಮಟ್ಟದ ಚಿಕಿತ್ಸೆಯನ್ನು ಸರ್ಕಾರದ ವೆಚ್ಚ ದಲ್ಲಿ ದೊರೆಯುವಂತೆ ಮಾಡಬೇಕು ಹಾಗೂ ಆರ್ಥಿಕವಾಗಿ ಜರ್ಜರಿತವಾಗಿರುವ ಅವರ ವಯಸ್ಸಾದ ತಾಯಿಯನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಇರುವ ಅವರಿಗೆ ಸರ್ಕಾರದಿಂದ ಅಗತ್ಯವಿರುವ ಆರ್ಧಿಕ ನೆರವು ನೀಡುವುದು ತೀರ ಅಗತ್ಯವಿದೆ ಎಂದು ಭಾವಿಸಿದ್ದೇವೆ.
ಈ ಬಗ್ಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತೀರೆಂದು ಭಾವಿಸುತ್ತೇವೆ.
ಇತಿ ತಮ್ಮ ವಿಶ್ವಾಸಿಗಳು
ಕೆ.ಮಹಾಂತೇಶ್ ಕಾರ್ಮಿಕ ಮುಖಂಡರು
ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ




