ಇವರು ಹುಟ್ಟಿದ್ದು ಸ್ವಾತಂತ್ರ ಹೋರಾಟದ ಹಿನ್ನೆಲೆಯುಳ್ಳ ತ್ಯಾಗವನ್ನು ಮಾಡಿದ ಕುಟುಂಬದಲ್ಲಿ .
ಇವರು ಮಾರ್ಗದರ್ಶನವನ್ನು ಪಡೆದದ್ದು, ಆಚಾರ್ಯ ವಿನೋಭಾಬಾವೆರವರ ಆಶ್ರಮದಲ್ಲಿ .
ವಿದ್ಯೆಯ ಜೊತೆಗೆ ವಿನಯವನ್ನು ಮತ್ತು ಸಂಸ್ಕಾರವಂತಿಕೆಯನ್ನು ಮೈಗೂಡಿಸಿಕೊಂಡಿದ್ದವರು ಇವರು.
ಸಣ್ಣ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನು ಅನುಭವಿಸಿ ಮಹಾತ್ಮ ಗಾಂಧೀಜಿ ಮತ್ತು ವಿನೋಭಾಭಾವೆ ವಿಚಾರಧಾರೆಗಳಿಗೆ ಪ್ರಭಾವಿತರಾಗಿ, ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಯಾಗಿ ಸಾರ್ವಜನಿಕ ಜೀವನಕ್ಕೆ ಬಂದವರು.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
1957ರಲ್ಲಿಯೇ ವಿಧಾನಸಭೆಯ ಸದಸ್ಯರಾಗಿ ಸಚಿವರಾಗಿ ಆಡಳಿತದ ಅನುಭವವನ್ನು ಪಡೆದುಕೊಂಡಿದ್ದವರು.
ರಾಜಿನಾಮೆಗೂ ಇವರಿಗೂ ಅದೇನು ಸಂಬಂಧವಿದೆಯೋ, ಇವರು 1962 ರಲ್ಲಿ ಪಂಚಾಯತ್ ರಾಜ್ ಮಸೂದೆ ಮಂಡನೆಗೆ ಬೆಂಬಲ ಸಿಗಲಿಲ್ಲವೆಂದು ಪ್ರಥಮ ಬಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟು ನಂತರ ನಿಜಲಿಂಗಪ್ಪನವರ ಮಾತಿನಂತೆ ಬೇರೆ ಖಾತೆಯನ್ನು ವಹಿಸಿಕೊಂಡವರು. 1977 ರಲ್ಲಿ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕತ್ವಕ್ಕೆ ರಾಜೀನಾಮೆಯನ್ನು ನೀಡಿದವರು. 1984ರಲ್ಲಿ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬರಲಿಲ್ಲವೆಂದು ನೈತಿಕ ಕಾರಣದಿಂದ ಸರ್ಕಾರವನ್ನು ವಜಾಗೊಳಿಸಿ, ಚುನಾವಣೆಗೆ ಹೊರಟವರು.
ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆಪಾದನೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅನೇಕ ಬಾರಿ ರಾಜೀನಾಮೆಯನ್ನು ಕೊಟ್ಟವರು.
ಮುಖ್ಯಮಂತ್ರಿ ಹುದ್ದೆಯನ್ನ ವಹಿಸಿಕೊಂಡ ನಂತರ ತಮ್ಮ ಜಾತ್ಯತೀತ ನಿಲುವನ್ನ ಪ್ರಕಟಿಸುವುದರ ಹಿನ್ನೆಲೆಯಲ್ಲಿ ಯಾವುದೇ ಸಚಿವರು ತಮ್ಮನ್ನು ಒಳಗೊಂಡಂತೆ ತಮ್ಮ ಕಚೇರಿಗಳಲ್ಲಿ ತಮ್ಮ ಬಂಧುಗಳನ್ನ ಅಥವಾ ತಮ್ಮ ಜಾತಿಯ ಜನರನ್ನ ನೇಮಕ ಮಾಡಿಕೊಳ್ಳಬಾರದು ಎಂಬ ಆದೇಶವನ್ನು ಹೊರಡಿಸಿದವರು.
ತಾವು ಸಾಯುವ ತನಕ ಜೆಪಿರವರ ವಿಚಾರಧಾರೆಗೆ ಬದ್ಧರಾಗಿ ವಂಶಪಾರಂಪರ್ಯದ ರಾಜಕಾರಣಕ್ಕೆ ಅವಕಾಶ ನೀಡದೆನಿಷ್ಠೆಯಿಂದ ನಡೆದುಕೊಂಡವರು. ಈ ಕಾರಣದಿಂದಾಗಿ ಇವರ ಕುಟುಂಬದ ಸದಸ್ಯರು ಯಾರು ಸಹ ರಾಜಕಾರಣದಲ್ಲಿ ಸಣ್ಣ ಹುದ್ದೆಯನ್ನು ಅನುಭವಿಸಲು ಸಾಧ್ಯವಾಗಿರುವುದಿಲ್ಲ.
ಮುಖ್ಯಮಂತ್ರಿ ಆಗಿದ್ದಾಗಲೂ ಅನಾವಶ್ಯಕವಾದ ಪೊಲೀಸ್ ಸಿಬ್ಬಂದಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗದೆ ಸಿಗ್ನಲ್ ದೀಪದ ಆದೇಶಗಳಿಗೆ ಸಾಮಾನ್ಯ ನಾಗರೀಕರಂತೆ ಕಾಯುತ್ತಿದ್ದರು.
ಜನತಾದರ್ಶನ ಎಂಬುದು ಪ್ರಚಾರದ ಕಾರ್ಯಕ್ರಮವಾಗಿರದೆ ಪ್ರತಿದಿನವೂ ತಾವು ಪ್ರವಾಸದಲ್ಲಿ ಇಲ್ಲದೆ ಇರುವ ಸಂದರ್ಭದಲ್ಲಿ ಮನೆಯ ಮುಂದೆ ಸಾರ್ವಜನಿಕರ ಸಮಸ್ಯೆಗಳನ್ನು ಕೇಳುತ್ತ ಅದನ್ನು ಪರಿಹರಿಸಿ ಕೊಡುವಂತಹ ಪ್ರಾಮಾಣಿಕವಾದ ಪ್ರಯತ್ನವನ್ನ ನಡೆಸಿದವರು.
ಕನ್ನಡ ಭಾಷೆಯ ಬಗ್ಗೆ ಅಪಾರವಾದ ಪ್ರೀತಿ ಇದ್ದ ಕಾರಣದಿಂದ ಪ್ರಥಮ ಬಾರಿಗೆ ಕನ್ನಡ ಕಾವಲು ಸಮಿತಿಯನ್ನ ರಚಿಸಿದರು. ಕನ್ನಡಿಗರಿಗೆ ಕೇಂದ್ರ ಸರ್ಕಾರದ ಹುದ್ದೆಗಳು ಲಭ್ಯವಾಗಬೇಕೆಂದು ವರದಿಗಾಗಿ ಸರೋಜಿನಿ ಮಹಿಷಿರವರ ಸಮಿತಿಯನ್ನ ರಚಿಸಿದರು. ಕನ್ನಡದ ಕಾರ್ಯಕ್ರಮಗಳಿಗೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸಿರುತ್ತಾರೆ. ಸ್ವತಃ ಸಾಹಿತ್ಯ ಆಸಕ್ತರಾಗಿದ್ದ ಇವರು ಅನೇಕ ಪುಸ್ತಕಗಳನ್ನು ಬರೆದಿರುತ್ತಾರೆ. ರಾಜ್ಯೋತ್ಸವ ಪ್ರಶಸ್ತಿ ಮತ್ತು ಸಾಹಿತಿ ಕಲಾವಿದರಿಗೆ ಸೌಕರ್ಯಗಳನ್ನು ಒದಗಿಸಿಕೊಡುವ ಸಂದರ್ಭದಲ್ಲಿ ಉದಾರತೆಯನ್ನು, ಸೂಕ್ಷ್ಮತೆಯನ್ನು ಪ್ರದರ್ಶಿಸಿರುತ್ತಾರೆ.
ಅಧಿಕಾರ ವಿಕೇಂದ್ರೀಕರಣಕ್ಕೆ ಬದ್ಧರಾಗಿದ್ದು ಅದರ ಅನುಷ್ಠಾನಕ್ಕಾಗಿ ಸತತ ಪ್ರಯತ್ನವನ್ನ ನಡೆಸಿ ಅಬ್ದುಲ್ ನಜೀರ್ ಸಾಬ್ ರಂತಹ ಪ್ರಾಮಾಣಿಕರ ಸಹಕಾರದಿಂದ ಅದನ್ನು ಜಾರಿಗೆ ತಂದಿರುತ್ತಾರೆ.
ಭ್ರಷ್ಟಾಚಾರವನ್ನು ನಿಯಂತ್ರಿಸುವ ಸಲುವಾಗಿ ದೇಶದಲ್ಲಿಯೇ ಪ್ರಥಮ ಬಾರಿಗೆ ಲೋಕಾಯುಕ್ತ ವ್ಯವಸ್ಥೆಯನ್ನು ಜಾರಿಗೆ ತಂದವರು ಇವರಾಗಿರುತ್ತಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸಿ ಕೊಟ್ಟವರು ಇವರಾಗಿರುತ್ತಾರೆ. ಪ್ರಥಮ ಬಾರಿಗೆ ದೇಶದಲ್ಲಿ ಮಹಿಳಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಅಂತ್ಯೋದಯ ಎಂಬ ಕಾರ್ಯಕ್ರಮವನ್ನು ಪರಿಚಯಿಸಿ ಕೊಟ್ಟವರು ಇವರು. ಈ ಮೂಲಕ ಪ್ರತಿಯೊಂದು ಗ್ರಾಮದ 5 ಬಡ ಕುಟುಂಬಗಳನ್ನು ಗುರುತಿಸಿ ಅವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಉನ್ನತೀಕರಣಗೊಳಿಸುವ ಯೋಜನೆ ಇದಾಗಿತ್ತು.
ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕೊಂಕಣ ರೈಲ್ವೆ ಯೋಜನೆಯ ಅನುಷ್ಠಾನದ ಹಿಂದೆ ಇವರ ಶ್ರಮವೂ ಇದೆ. ಅದೇ ರೀತಿಯಲ್ಲಿ ಕೇಂದ್ರದ ಸಚಿವರಾಗಿ ವಾಣಿಜ್ಯ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳನ್ನ ತಂದಿರುತ್ತಾರೆ.
ಮನೆಯ ಬಾಗಿಲಿಗೆ ಬಂದವರನ್ನು ತಾವೇ ಸ್ವತಹ ಸ್ವಾಗತಿಸಿ ಮತ್ತೆ ಅವರನ್ನ ಬಿಳ್ಕೊಡುವಂತಹ ಸಂಪ್ರದಾಯವನ್ನು ಎಂತಹ ಸಂದರ್ಭದಲ್ಲಿ ತಪ್ಪಿಸುತ್ತಿರಲಿಲ್ಲ. ಅನಾರೋಗ್ಯದ ನಡುವೆಯೂ ಇವುಗಳು ತಪ್ಪದೆ ಅನುಸರಿಸುತ್ತಿದ್ದರು.
ಟೀಕೆ ಮಾಡುವ ಸಂದರ್ಭದಲ್ಲಿ ಸೌಜನ್ಯವಾದ ಎಲೆಯನ್ನು ದಾಟುತ್ತಿರಲಿಲ್ಲ. ರಾಜಕಾರಣದಲ್ಲಿ ದ್ವೇಷ ಅಸೂಯೆಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಿರಲಿಲ್ಲ. ಸ್ನೇಹ ಮತ್ತು ರಾಜಕಾರಣ ಇವುಗಳನ್ನು ಪ್ರತ್ಯೇಕ ನೆಲೆಯಲ್ಲಿ ಕಂಡಿರುತ್ತಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಬಾಂಧವ್ಯವಕ್ಕಾಗಿ ಸರ್ಕಾರಿ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿರುತ್ತಾರೆ. ದಕ್ಷಿಣ ಭಾರತದ ರಾಜ್ಯಗಳ ನಡುವೆ ಗಡಿ ಮತ್ತು ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೆರಿ ಮುಖ್ಯಮಂತ್ರಿಗಳ ಸಭೆಯನ್ನು ಹಲವಾರು ಬಾರಿ ಏರ್ಪಡಿಸಿದ್ದರು.
ಸರ್ಕಾರಿ ಕಾರ್ಯಕ್ರಮ ಮತ್ತು ಸಾಹಿತ್ಯ ಸಂಸ್ಕೃತಿ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಭಾಗವಹಿಸಿದ ಸಂದರ್ಭದಲ್ಲಿ ಆಯಾ ವೇದಿಕೆಗೆ ಅನುಗುಣವಾಗಿ ವಿಚಾರಗಳನ್ನ ಪ್ರಸ್ತಾಪಿಸುತ್ತಿದ್ದರು, ಮಾತನಾಡುತ್ತಿದ್ದರು. ಅನಾವಶ್ಯಕವಾಗಿ ರಾಜಕಾರಣದ ಮಾತುಗಳಿಗೆ ಅವಕಾಶ ಇರುತ್ತಿರಲಿಲ್ಲ.
ತಮ್ಮ ಆತ್ಮೀಯ ವ್ಯಕ್ತಿಯಾಗಿದ್ದ ವೀರೇಂದ್ರ ಪಾಟೀಲರನ್ನು ಹೊರತುಪಡಿಸಿ ಯಾರನ್ನು ಸಹ ಏಕವಚನದಲ್ಲಿ ಸಂಬೋಧಿಸಿದಂತಹ ಉದಾಹರಣೆಯೇ ಇಲ್ಲವೆಂದು ಅವರ ಜೊತೆಯಲ್ಲಿ ಆರು ದಶಕಗಳ ಕಾಲ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಮತ್ತೊಬ್ಬ ಹಿರಿಯ ರಾಜಕಾರಣಿ ವಿ ಎಸ್ ಕೃಷ್ಣಯ್ಯರವರ ಮಾತು.
ಇಂದಿಗೂ ಸಹ ಕರ್ನಾಟಕದ ರಾಜಕಾರಣದ ವಿಚಾರದಲ್ಲಿ ಗೂಂಡಾ ಸಂಸ್ಕೃತಿ ದಮನ ಮಾಡಿದ ರೀತಿಯನ್ನು ಆಡಳಿತ ವ್ಯವಸ್ಥೆಯನ್ನು ಜನಪರ ಕಾರ್ಯಕ್ರಮಗಳನ್ನು ರಾಜಕೀಯ ಬಿಕ್ಕಟ್ಟುಗಳ ಸನ್ನಿವೇಶದಲ್ಲಿ ಹೆಗ್ಡೆರವರು ಅನುಸರಿಸಿದ ಮಾರ್ಗದ ಬಗ್ಗೆ ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾಪವಾಗುತ್ತಲೇ ಇರುತ್ತದೆ. ಈ ರೀತಿಯಲ್ಲಿ ಇಂದಿಗೂ ಸಹ ರಾಜಕಾರಣದಲ್ಲಿ ಪ್ರಸ್ತುತವಾಗಿಯೇ ಇವರ ನಡವಳಿಕೆ ಕಾರ್ಯವೈಖರಿ ನಿರ್ಧಾರಗಳು ಉಳಿದುಕೊಂಡಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು




