ನೆಹರೂರವರ ಹೋರಾಟ, ಶ್ರೀಮತಿ ಇಂದಿರಾ ಗಾಂಧಿಯವರ ದಿಟ್ಟತನ, ಎದೆಗಾರಿಕೆಯ, ರಾಜೀವ್ ಗಾಂಧಿರವರ ದೂರದೃಷ್ಟಿತ್ವದ, ವೈಜ್ಞಾನಿಕ ಚಿಂತನೆಯ, ಮುಂದುವರೆದ ನಾಯಕತ್ವ ರಾಹುಲ್ ಗಾಂಧಿರವರದು. ಇದು ತ್ಯಾಗ ಬಲಿದಾನದ ರಕ್ತದ ಮುಂದುವರಿಕೆಯ ಭಾಗ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಅರಮನೆ ಹೋಲುವ ಮನೆಯಲ್ಲಿ ಕುಳಿತು, ಸುಖದ ಬದುಕನ್ನ ತನ್ನದಾಗಿಸಿಕೊಂಡು, ಬಾಳಲು ಎಲ್ಲಾ ಅನುಕೂಲಗಳ ನಡುವೆಯೂ, ಇವೆಲ್ಲವನ್ನ ಬಿಟ್ಟು ಸರಳತೆಯೊಂದಿಗೆ, ಜನಪರ ಕಾಳಜಿಯೊಂದಿಗೆ, ಜನಸಾಮಾನ್ಯರೊಂದಿಗೆ ಬೆರೆತು, ಶೋಷಿತರ ದುಃಖ ದುಮ್ಮಾನಗಳಿಗೆ ಸ್ಪಂದಿಸುತ್ತಿರುವ ವ್ಯಕ್ತಿತ್ವವೇ, ಸರಳತೆಯ ದಾರಿಯಲ್ಲಿ ರಾಹುಲ್ ಗಾಂಧಿ.
ಪತ್ರಿಕಾಗೋಷ್ಠಿಗಳ ಮೂಲಕ ಇವರು ನಾಯಕರಾದವರಲ್ಲ, ಕ್ಯಾಮರಾಗಳ ನಡುವೆ ನಿಂತು ಪ್ರಚಾರಕ್ಕಾಗಿ ಮಾತನಾಡಿದ ವ್ಯಕ್ತಿತ್ವವಲ್ಲ, ಓಟಿಗಾಗಿ ಮಾತನಾಡಿ ಜನರ ಭಾವನೆಯನ್ನು ಸ್ವಾರ್ಥಕ್ಕೆ ಬಳಸಿಕೊಂಡವರಲ್ಲ, ದೇಶದಾದ್ಯಂತ ಸಹಸ್ರಾರು ಮೈಲಿಗಳ ಪಾದಯಾತ್ರೆಯನ್ನ ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ , ಸಾಗಿ ಜನರೊಂದಿಗೆ ಬೆರತು ಜನರ ಸಮಸ್ಯೆಗಳನ್ನ ಆಲಿಸುತ್ತಾ ಜನರ ನಡುವೆ ಮೂಡಿ ಬಂದ ಜನನಾಯಕತ್ವ ರಾಹುಲ್ ಗಾಂಧಿರವರದು.
ಹಾದಿ ಬೀದಿಯಲ್ಲಿ ಹೋಗುವವರು ತೆಗಳಿದ ಮಾತ್ರಕ್ಕೆ ಅಂಜುವರಲ್ಲ, ಸಹಸ್ರಾರು ಕೋಟಿ, ಕೋಟಿ ರೂಪಾಯಿಗಳ ಸುರಿದು ಇವರ ವ್ಯಕ್ತಿತ್ವವನ್ನ ವಿಕೃತಗೊಳಿಸಲು ನಡೆಸಿದ ಕುತಂತ್ರಗಳ ಮೆಟ್ಟಿ ನಿಂತವರು ಇವರು, ಭಯವಿಲ್ಲದೆ, ಭದ್ರತೆಯ ಚೌಕಟ್ಟುಗಳನ್ನು ಮೀರಿ ಬಡವರ ಮೈಮುಟ್ಟಿ ಮಾತನಾಡಿಸುವವರು ಇವರು ನೊಂದವರ ಕಣ್ಣೀರು ಒರೆಸುತ್ತಾ ಅವರೊಂದಿಗೆ ಬೆರೆಯುವವರು ಇವರು, ಹೊಲಸು ನಾಲಿಗೆಯ ಹೊತ್ತು ತಿರುಗುವ, ಸ್ವಯಂ ಘೋಷಿತ ಅಪ್ರಬುದ್ಧ ವ್ಯಕ್ತಿತ್ವದ, ವ್ಯಕ್ತಿಗಳ ಮಾತಿಗೆ ಬೆದರದೆ ಸಾಗುವ ಎದೆಗಾರಿಕೆಯ ನಾಯಕತ್ವ ಇವರದು , ಪತ್ರಿಕಾಗೋಷ್ಠಿ ನಡೆಸಲು ಅಂಜುವವರು ಇವರಲ್ಲ, ಸಾರ್ವಜನಿಕ ವೇದಿಕೆಗಳಲ್ಲಿ ನಿಂತು ಮಾತನಾಡಲು ಆಧುನಿಕ ತಂತ್ರಜ್ಞಾನವನ್ನ ನಂಬಿದವರಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




