ಬೆಂಗಳೂರು: ಆರೋಗ್ಯ ಕವಚನ ಯೋಜನೆಯ 108 ಆಂಬುಲೆನ್ಸ್ ಗಳ ಸೇವೆಯಲ್ಲಿ ಕೆಲವು ತಾಂತ್ರಿಕ ತೊಡಕುಗಳಿದ್ದು ಅವುಗಳ ನಿವಾರಣೆಗೆ ಗಮನಹರಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನಸಭೆ ಕಲಾಪದಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಅವರ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ಆಂಬುಲೆನ್ಸ್ ಸೇವೆ ದುರುಪಯೋಗವಾಗಬಾರದು ಎಂಬ ಕಾರಣಕ್ಕಾಗಿ ಗಡಿಮಿತಿಯನ್ನು ನಿಗದಿ ಪಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ವಿನಾಯಿತಿ ನೀಡುವ ಕುರಿತು ಚರ್ಚೆ ಮಾಡುತ್ತೇವೆ ಎಂದರು.
ಸದ್ಯಕ್ಕೆ 715 ಆಂಬುಲೆನ್ಸ್ಗಳು ಮಾತ್ರ 108 ಆರೋಗ್ಯ ಕವಚ ಸೇವೆಯಲ್ಲಿವೆ. ಆರೋಗ್ಯ ಕವಚಕ್ಕಾಗಿ ಹೊಸ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ. ಆ ವೇಳೆ ಹೆಚ್ಚುವರಿ ಆಂಬುಲೆನ್ಸ್ಗಳ ಕಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.




