ಕಾರ್ಯಕ್ರಮ ನಡೆಯುವ ಕೇವಲ ಒಂದು ದಿನದ ಹಿಂದೆ “ನಮ್ಮ ದಳವಾಯಿ ಮೇಷ್ಟ್ರು ಚಿತ್ರ ಬೇಕೆಂದು” ಆಜ್ಞೆಮಾಡಿದ್ದೇ ತಡ ಆ ಕೆಲಸವನ್ನು ಚಿಕ್ಕಬಳ್ಳಾಪುರದ ಹಳೇಪರೇಸಂದ್ರದ ನನ್ನ ಶಿಷ್ಯಬಳಗದವರು ವಿಜಯ್ ಮೋಹನ್ ಅವರ ತಂಡದವರು ಹಠಯೋಗಿಗಳಂತೆ ಸಿದ್ಧಪಡಿಸಿ ದಳವಾಯಿಯವರನ್ನು ಗೌರವಿಸುವ ಎರಡುಗಂಟೆಯ ಮುಂಚೆ ಪ್ರೀತಿಪೂರ್ವಕವಾಗಿ ತಂದುಕೊಟ್ಟರು.. ಅವರ ಶ್ರದ್ಧೆ ಕಾರ್ಯನಿಷ್ಠೆಗೆ ಸಾಕ್ಷಿಯಂತಿತ್ತು ಆ ಚಿತ್ರ….
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಒಬ್ಬ ಮೇಷ್ಟ್ರು ತಮ್ಮ ತಲೆಮಾರಿನ ಮುಂದಿನ ಪರಂಪರೆಯನ್ನು ಸೃಷ್ಟಿ ಮಾಡುತ್ತಿರುವ ಪರಿ ನೋಡಿದರೆ ನನಗೆ ಶ್ರೀಕಂಠ ಕೂಡಿಗೆಯವರು, ಬರಗೂರು ರಾಮಚಂದ್ರಪ್ಪನವರು ನೆನಪಿಗೆ ಬರುತ್ತಾರೆ. ಹಾಗಾಗಿ ಆ ಕಾರಣಕ್ಕಾಗಿ ದಳವಾಯಿಮೇಷ್ಟ್ರು ನನ್ನ ಪಾಲಿಗೆ ಒಂದು ಬೆರಗು…

ಆ ಬೆರಗಿಗೆ ಸಾಕ್ಷೀಪ್ರಜ್ಙೆಯೆಂಬಂತೆ ಪ್ರೊ.ವೆಂಕಟಗಿರಿ ಗೌಡ ಸಭಾಂಗಣ ತಮ್ಮ ಇಡೀ ವೃತ್ತಿಬದುಕಿನ ಆರಂಭದಿಂದ ಅಂತ್ಯದವರೆಗಿನ ಎಲ್ಲ ಶಿಷ್ಯವರ್ಗದಿಂದ ಕಿಕ್ಕಿರಿದು ತುಂಬಿದ್ದೇ ಕೈಗನ್ನಡಿಯಂತಿತ್ತು. ಆ ಕಾರಣಕ್ಕಾಗಿ ನನ್ನ ಬದುಕಿನ ಮಹತ್ತರ ಘಟನೆಗಳಲ್ಲಿ ರಾಜಪ್ಪ ದಳವಾಯಿಯವರ ಪ್ರವೇಶವೇ ಒಂದು ಮಹತ್ತರ ಸುಸಂದರ್ಭ…
ಅವರ ಅಗಾಧವಾದ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿನ ಅಪಾರವಾದ ಆಳವಾದ ಜ್ಞಾನ… ಬಹುಶಿಸ್ತೀಯ ಅಧ್ಯಯನ, ಅಗಾಧ ನೆನಪಿನ ಶಕ್ತಿ, ಏಕ ಪ್ರಕಾರದ ಸಾಹಿತ್ಯದ ಆಳ ಅಗಲ ತಿಳಿದ ಅನೇಕ ಮಂದಿ ಈ ನಾಡಿನಲ್ಲಿರಬಹುದು. ಆದರೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳ ಬಹುಮುಖಿ ವಿಷಯದ ತಳಸ್ಪರ್ಶಿ ಅಧ್ಯಯನ ಹಿಡಿತ ಅಷ್ಟು ಸುಲಭಸಾಧ್ಯವಲ್ಲದ ಕಾಲಘಟ್ಟದಲ್ಲಿ ಅದನ್ನು ನಿರೂಪಿಸಿರು ಅಪರೂಪದ ವ್ಯಕ್ತಿ… ಬರಿ ವ್ಯಕ್ತಿ ಮಾತ್ರವಲ್ಲ ಅದೊಂದು ದೊಡ್ಡ ಶಕ್ತಿ…
ಕರ್ನಾಟಕದ ಮೂಲೆಮೂಲೆಯಲ್ಲಿರುವ ಯಾವುದೇ ತಮ್ಮ ಶಿಷ್ಯರನ್ನು ಕಂಡಕೂಡಲೇ ಹೆಸರಿಟ್ಟು ಕರೆದು ಆಪ್ತವಾಗಿ ಮಾತನಾಡಿಸುವ ಬಗೆ, ಒಮ್ಮೆ ಪರಿಚಯವಾದವರನ್ನು ಬಹಳ ವರ್ಷಗಳ ಹಳೆಯ ಪರಿಚಯದವರಂತೆ ಮಾತನಾಡಿಸುವ ರೀತಿ… ಇವೆಲ್ಲಕ್ಕಿಂತ ದಿನಗಟ್ಟಲೇ ಆಯಾಸವಿಲ್ಲದೇ ನಿರರ್ಗಳವಾಗಿ ಪಾಠಮಾಡುವ ರೀತಿ, ಲೀಲಾಜಾಲವಾಗಿ ಹಳಗನ್ನಡದ ಯಾವುದೇ ಪದ್ಯಗಳು ಅವರದೇ ಬಾಯಲ್ಲಿ ಹೊಸಹುಟ್ಟು ಪಡೆವ ರೀತಿ ಇವೆಲ್ಲವೂ ನಮ್ಮಂಥಹ ಮೇಷ್ಟ್ರಾಗಬೇಕೆಂಬ ಅದಮ್ಯ ಬಯಕೆ ಕನಸು ಹೊತ್ತಂತವರಿಗೆ ದಳವಾಯಿ ಮೇಷ್ಟ್ರು ಒಂದು ಸಿದ್ಧಮಾದರಿ…
ಒಬ್ಬ ಮೇಷ್ಟ್ರು ಸಂಪಾದಿಸಬೇಕಾದ ಅಗಾಧ ಜ್ಞಾನದ ವಿಸ್ತಾರ ಹರವು ಹೇಗಿರಬೇಕೆಂಬುದು ತಿಳಿಯಬೇಕೆಂದರೆ ಅವರನ್ನು ನೋಡಿ ಕಲಿಯಬೇಕು… ಬಹು ವರ್ಷಗಳಿಂದ ಅವರನ್ನು ಸನ್ಮಾನಿಸಬೇಕಂಬ ಬಯಕೆ ಈಡೆರಿದ್ದು ಬೆಂಗಳೂರು ವಿ.ವಿ.ಜ್ಞಾನಭಾರತಿಯ ಪ್ರೊ.ವೆಂಕಟಗಿರಿ ಗೌಡ ಸಭಾಂಗಣದಲ್ಲಿ ಅವರ ಸೇವಾವಯೋನಿವೃತ್ತಿದ ದಿನದಂದು…
೨೦೧೭ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕರಾದ ಗೆಳೆಯರು (ಕೆಲವು ಗೆಳೆಯರು ಕೆಲಸದ ಒತ್ತಡದ ನಿಮಿತ್ತ ಬರಲಾಗಲಿಲ್ಲ)ಸೇರಿ ಅವರನ್ನು ಗೌರವಿಸುವ ಭಾಗ್ಯ ನಮ್ಮದಾಯಿತು… ನಾಡೋಜ ಬರಗೂರು ರಾಮಚಂದ್ರಪ್ಪನವರು ಹಾಗೂ ಹೆಚ್ ಎಲ್ ಪುಷ್ಪ ಕುಂಸಿ ಉಮೇಶ್ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
- ಮಂಜುನಾಥ್.ಬಿ ಹೊಳೆಹೊನ್ನೂರು, ಸಹಾಯಕ ಪ್ರಾಧ್ಯಾಪಕರು




