ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ಅವರು ಸರ್ವಧರ್ಮ, ಜಾತಿಯವರನ್ನು ಸಮಾನವಾಗಿ ಕಾಣುವ ಜಾತ್ಯತೀತ ನಾಯಕ ಎಂದು ಕುರುಬರ ಸಂಘದ ನಿರ್ದೇಶಕ ಟಿ.ವಿ.ಬೆಳಗಾವಿ ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಪಕ್ಷದ ಬಗ್ಗೆ ಮತ್ತು ವಸತಿ ಸಚಿವ ವಿ.ಸೋಮಣ್ಣ ಅವರ ಬಗ್ಗೆ ಆರೋಪ ಖಂಡಿಸಿ ಮತ್ತು ಶಾಸಕ ಕೃಷ್ಣಪ್ಪ, ಮಾಜಿ ಶಾಸಕ ಪ್ರಿಯಾ ಕೃಷ್ಣರವರು ಮಾಡಿರುವ ಆಪಾದನೆಗಳಿಗೆ ಸ್ಪಷ್ಟೀಕರಣಕ್ಕಾಗಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು., ಮಹಾನಗರ ಪಾಲಿಕೆ ಸದಸ್ಯರಾಗಿ ಎಲ್ಲ ಜಾತಿ ಸಮುದಾಯದವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕುರುಬ ಸಮುದಾಯದ ಜೆ.ಹುಚ್ಚಪ್ಪ, ಶಾಂತಕುಮಾರಿರವರು ಮಹಾಪೌರರಾಗಿ ಹುದ್ದೆ ಅಲಂಕಾರಿಸಲು ವಿ.ಸೋಮಣ್ಣರವರ ಶ್ರಮ ಸಾಧನೆ ಮಾಡಿದ್ದಾರೆ ಎಂದರು.
ಸುಳ್ಳುಗಳನ್ನು ಹೇಳುವುದು, ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವನ್ನು ಶಾಸಕರಾದ ಕೃಷ್ಣಪ್ಪ, ಪ್ರಿಯಾಕೃಷ್ಣ ಮಾಡುತ್ತಿದ್ದಾರೆ. ಇನ್ನು ಹೀಗೆ ಮುಂದುವರೆದರೆ ಪ್ರತಿಭಟನೆ ಮಾಡಲಾಗುವುದು ಎಂದರು.
ಡಾ.ಎಸ್.ರಾಜು ಮಾತನಾಡಿ, ವಸತಿ ಸಚಿವ ವಿ.ಸೋಮಣ್ಣರವರು ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿ ಪಾಲಿಕೆ ಸದಸ್ಯರಾಗಿ, ಶಾಸಕರಾಗಿ,ಸ ಚಿವರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಆದರೆ ಮೊನ್ನೆ ನಡೆದ ಕಾಂಗ್ರೆಸ್ ಪಕ್ಷದ ಸಮಾರಂಭದಲ್ಲಿ ಸಿದ್ದರಾಮಯ್ಯರವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದರು
ಕಾಂಗ್ರೆಸ್ ಪಕ್ಷದ ಅಧಿಕಾರ ಅವಧಿಯಲ್ಲಿ ಆದ ಕೆಲಸಗಳು ಎಂದು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬರಿ ಘೋಷಣೆ ಮಾಡಿ, ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಮಾಜಿ ಶಾಸಕ ಪ್ರಿಯಾಕೃಷ್ಣ ಮತ್ತು ಶಾಸಕ ಕೃಷ್ಣಪ್ಪ ಸುಳ್ಳು ಹೇಳಿಕೆ ನೀಡಿ ಜನರಿಗೆ ದಾರಿತಪ್ಪಿಸುತ್ತಿದ್ದಾರೆ ಎಂದರು.
ಕನಕ ಭವನ, ಬಿ.ಜಿ.ಎಸ್.ಆಟದ ಮೈದಾನ ,300 ಹಾಸಿಗೆ ಸಾಮ್ಯರ್ಥವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದೇವಸ್ಥಾನಗಳ ಜೀರ್ಣೋದ್ದಾರ ಮತ್ತು ವಸತಿ ಇಲಾಖೆ ವತಿಯಿಂದ ಒಂದು ಲಕ್ಷ ಮನೆ ನಿರ್ಮಾಣ ಮಾಡಿದ ವಿ.ಸೋಮಣ್ಣರವರ ಮಾಡಿದ ಅಭಿವೃದ್ದಿ ಕೆಲಸಗಳು ಕಣ್ಣ ಮುಂದೆ ಕಾಣುತ್ತವೆ. 15 ವರ್ಷ ಶಾಸಕರಾಗಿ ಎಂ.ಕೃಷ್ಣಪ್ಪ, 9 ವರ್ಷ ಶಾಸಕರಾಗಿ ಮಾಜಿ ಶಾಸಕ ಪ್ರಿಯಾಕೃಷ್ಣ ಅವರು ಮಾಡಿದ ಸಾಧನೆ ಶೂನ್ಯ ಎಂದರು.
ಕುರುಬ ಸಮುದಾಯದ ಮುಖಂಡರು, ಮಾಜಿ ಮಹಾನಗರ ಪಾಲಿಕೆ ಸದಸ್ಯರು, ಡಾ.ಎಸ್.ರಾಜು, ರಾಮಪ್ಪ, ಸಿದ್ದಾರ್ಥ, ವಿಶ್ವನಾಥಗೌಡ, ಟಿ.ವಿ.ಕೃಷ್ಣ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ವಾಗೇಶ್, ಕೆ.ಉಮೇಶ್ ಶೆಟ್ಟಿ, ದಾಸೇಗೌಡ, ಕೊಳಗೇರಿ ಅಭಿವೃದ್ದಿ ಮಂಡಳಿ ನಿರ್ದೇಶಕ ಕ್ರಾಂತಿ ರಾಜು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.




