ವಿಶ್ವಕರ್ಮ ಸಮುದಾಯಕ್ಕೆ ಎಸ್.ಟಿ.ಮೀಸಲಾತಿಗಾಗಿ ಸಂಘಟಿತರಾಗಿ ಹೋರಾಟ

3 months ago

ವಿಶ್ವ ಕರ್ಮ ಜನಜಾಗೃತಿ ಸಮಾವೇಶ ಮತ್ತು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ

ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ಕ್ರಾಸ್ ನೀಲಕಂಟೇಶ್ವರ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಜನವರಿ 4ರಂದು ವಿಶ್ವಕರ್ಮ ಜನಜಾಗೃತಿ ಸಮಾವೇಶ ಮತ್ತು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ಆಚರಿಸಲಾಗುತ್ತದೆ.

ಈ ಕುರಿತು ಸುದ್ದಿ ಗೋಷ್ಠಿ ನಡೆಸಿ ಮಾತಿ ನೀಡಿದ ಸಮಾಜದ ಮುಖಂಡರಾದ ಕೆ.ಎನ್.ಶ್ರೀಧರ್, ಬೆಂಗಳೂರುನಗರ ಜಿಲ್ಲಾಧ್ಯಕ್ಷ ಸಿ.ಎನ್.ಗಂಗಾಧರ್ ಚಾರ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಹೆಚ್.ಜಿ.ಜಗದೀಶ್, ಸುಂಕದಕಟ್ಟೆ ಅಧ್ಯಕ್ಷರಾದ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎಂ.ಕೆ., ಉಪಾಧ್ಯಕ್ಷ ನಾಗರಾಜು ಎಸ್.ರವರು ಭಾಗವಹಿಸಿದ್ದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮಾಜಿ ವಿಧಾನ ಪರಿಷತ್ ಸದಸ್ಯರು ಅಧ್ಯಕ್ಷರಾದ ಕೆ.ಪಿ.ನಂಜುಂಡಿರವರ ನೇತೃತ್ವದಲ್ಲಿ ಮಹಾಸಭಾ ಬಲಿಷ್ಠ ಸಂಘಟನೆಯಾಗಿದೆ. ವಿಶ್ವಕರ್ಮ ಸಮುದಾಯವು ರಾಜ್ಯದಲ್ಲಿ 45 ಲಕ್ಷ ಜನ ಇದ್ದಾರೆ. ಚಾಮರಾಜನಗರದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ಇದೆ ಎಂದರು.

ಕೆ.ಪಿ.ನಂಜುಂಡಿರವರ ಹೋರಾಟದ ಫಲದಿಂದ ವಿಶ್ವಕರ್ಮ ಅಭಿವೃದ್ಧಿ ನಿಗಮ, ಅಮರಶಿಲ್ಪಿ ಜಕಣಾಚಾರಿ ಜನ್ಮದಿನಾಚರಣೆ ರಾಜ್ಯ ಸರ್ಕಾರದ ವತಿಯಿಂದ ಆಚರಣೆ ಮಾಡುತ್ತಿದೆ. ವಿಶ್ವಕರ್ಮ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ವರದಿ ಸಮರ್ಪಕವಾಗಿವಾಗಿಲ್ಲ, ಹೊಸದಾಗಿ ಕುಲಶಾಸ್ತ್ರೀಯ ಅಧ್ಯಯನವಾಗಬೇಕು. ವಿಶ್ವಕರ್ಮ ಸಮುದಾಯಕ್ಕೆ ಎಸ್.ಟಿ.ಮೀಸಲಾತಿ ಸಿಗಬೇಕು ಎಂಬ ಸಂಘಟಿತರಾಗಿ ಹೋರಾಟ ಮಾಡಲಾಗುವುದು ಎಂದರು.

ಜನವರಿ 4ರಂದು ಬೃಹತ್ ಜನಜಾಗೃತಿ ಅಭಿಯಾನ ಮತ್ತು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆ ದಿನಾಚರಣೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಉದ್ಘಾಟನೆಯನ್ನು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಮುನಿರಾಜು, ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಮತ್ತು ಅಧ್ಯಕ್ಷತೆಯನ್ನು  ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ, ಮಾಜಿ ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿರವರು ವಹಿಸಲಿದ್ದಾರೆ. ವಿಶ್ವಕರ್ಮ ಸಮಾಜದ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

Leave a Reply