ಅನ್ನಭಾಗ್ಯ ಅಕ್ಕಿ ಆಳತೆ ತೂಕದಲ್ಲಿ ವ್ಯತ್ಯಾಸವಾದರೆ  ಅಂಗಡಿ ಮೇಲೆ ಕ್ರಮ

1 year ago

ಮಹದೇವಪ್ಪ ಪ್ರತಿಷ್ಠಾನ

ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

ವೀಲ್ ಚೇರ್, ವಾಕಿಂಗ್ ಸ್ಟಿಕ್ಕ್ ವಿತರಣೆ

ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ

ಬೆಂಗಳೂರು: ಕಮಲಾನಗರದ ಇಂದಿರಾ ಹೆಲ್ತ್ ಕೇರ್ ನಲ್ಲಿ ಮಹದೇವಪ್ಪ ಪ್ರತಿಷ್ಠಾನ ಮತ್ತು ಪ್ರೊಜೆಕ್ಟ್ ದೃಷ್ಟಿ ಡಾ.ಸೋಲಂಕಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ, ವೀಲ್ ಚೇರ್ ವಿತರಣೆ, ವಾಕಿಂಗ್ ಸ್ವೀಕ್ ವಿತರಣೆ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ 50ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಉದ್ಘಾಟನೆಯನ್ನು ಶಾಸಕ ರವಿಕುಮಾರ್ (ಗಣಿಗ), ಪತಾಂಜಲಿ ಯೋಗಶ್ರಮ ಟ್ರಸ್ಟ್ ಸಂಸ್ಥಾಪಕ ಪ್ರಕಾಶ್ ಯೋಗಿ ಗುರೂಜಿ,  ಬೆಂಗಳೂರು ನಗರ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಕೃಷ್ಣಪ್ಪ, ಮಾಜಿ ಮೇಯರ್ ಜೆ.ಹುಚ್ಚಪ್ಪ, ಬಿಬಿಎಂಪಿ ಮಾಜಿ ಸದಸ್ಯ ಎಸ್.ಕೇಶವಮೂರ್ತಿ, ಆಡಳಿತ ಪಕ್ಷದ ಮಾಜಿ ನಾಯಕ ಎಮ್. ಶಿವರಾಜು, ಮಾಜಿ ಪಾಲಿಕೆ ಸದಸ್ಯೆ ಮಹದೇವಮ್ಮ,  ವಿಶಾಲಕ್ಷ್ಮಿ ಶಿವರಾಜು, ಡಾ‌‌.ಸರ್ಪತ್ ಸೋಲಂಕಿ ದೀಪ ಬೆಳಗಿಸಿ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ರವಿಕುಮಾರ್ ಗಣಿಗ, ಮಹದೇವಪ್ಪ ಪ್ರತಿಷ್ಠಾನ ಜನಾನುರಾಗಿ ಕೆಲಸ ಮಾಡುತ್ತಿದೆ. ಕಣ್ಣಿನ ಅಪರೇಷನ್ ಮಾಡಲು ಅಪಾರ ಹಣ ವೆಚ್ಚವಾಗುತ್ತದೆ. ಆದರೆ ಇಲ್ಲಿ ಅಪರೇಷನ್, ಕನ್ನಡಕ, ಔಷಧಿ ಸಂಪೂರ್ಣ ಉಚಿತವಾಗಿ ನೀಡುತ್ತಿದೆ. ಮನುಷ್ಯ ಹುಟ್ಟಿದ ಮೇಲೆ ಸಾಧನೆ ಮಾಡಬೇಕು,ನಮ್ಮ ಸಾಧನೆ ಎಲ್ಲರು ಜೀವನದ ಬೆಳಕಾಗಬೇಕು. ಕಾಂಗ್ರೆಸ್ ಪಕ್ಷದ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ. ಗ್ಯಾರೆಂಟಿ ಯೋಜನೆಗಳು ಜನರ ಆರ್ಥಿಕವಾಗಿ ಸಬಲರಾಗಲು ಕಾರಣವಾಗಿದೆ ಎಂದರು.

ಜಿ.ಕೃಷ್ಣಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ರಾಜ್ಯದಲ್ಲಿ ಜನಪರ, ಪಾರದರ್ಶಕ ಸರ್ಕಾರವಿದೆ. ಬೆಂಗಳೂರು ನಗರ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ. ಕಾವೇರಿ ಆರತಿ ಎಂಬ ಜೀವ ಜಲ ಸಂರಕ್ಷಣೆಗಾಗಿ ಉತ್ತಮ ಕಾರ್ಯ ಹಮ್ಮಿಕೊಳ್ಳಲಾಯಿತು. ಅನ್ನಭಾಗ್ಯ ಅಕ್ಕಿ ಆಳತೆ ತೂಕದಲ್ಲಿ ವ್ಯತ್ಯಾಸವಾದರೆ  ಅಂಗಡಿ ಮೇಲೆ ಕ್ರಮ ಮತ್ತು ಗ್ಯಾರೆಂಟಿ ಯೋಜನೆ ತಲುಪುತ್ತಿಲ್ಲ ಎಂದರೆ ದೂರು ಸಲ್ಲಿಸಿ, ಕ್ರಮ ಕೈಗೊಳ್ಳಲಾಗುವುದು. ಕಾಂಗ್ರೆಸ್ ಪಕ್ಷದ 5 ಗ್ಯಾರೆಂಟಿ ಯೋಜನೆಗಳು ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರದ  ಪ್ರತಿ ಕುಟುಂಬಗಳಿಗೆ ತಲುಪಿದೆ ಎಂದರು.

ಜೆ.ಹುಚ್ಚಪ್ಪ ಮಾತನಾಡಿ, ಸರ್ಕಾರ ಮಾಡುವ ಉತ್ತಮ ಕೆಲಸಗಳಿಗೆ ಯುವ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡುತ್ತಿರುವುದರಿಂದ ಯಶ್ವಸಿಯಾಗಿ ಯೋಜನೆಗಳು ಜನರಿಗೆ ತಲುಪುತ್ತಿದೆ. ತಂದೆ, ತಾಯಿಗೆ ಮಕ್ಕಳು ಗೌರವ ಕೊಡಬೇಕು. ಮಕ್ಕಳಿಗೆ ಉತ್ತಮ ಸಂಸ್ಕೃತಿ ಕಲಿಸಬೇಕು. ಶಿವರಾಜು, ಕೇಶವಮೂರ್ತಿರವರಂತಹ ಉತ್ತಮ ಜನಪ್ರತಿನಿಧಿಗಳನ್ನು ಜನರು ಮತ್ತೆ ಆಯ್ಕೆ ಮಾಡಬೇಕು. ಬರಿ 15 ಸಾವಿರ ವೆಚ್ಚದಲ್ಲಿ ಪಾಲಿಕೆ ಸದಸ್ಯನಾಗಿದ್ದೆ. ಆದರೆ ಇಂದು ಹಣದ ಮೇಲೆ ಚುನಾವಣೆ ನಿಂತಿದೆ. ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಕನ್ನಡ ಭಾಷೆಗೆ ಮೊದಲ ಆದ್ಯತೆ ಕೊಡಿ. ಜಾತಿ ವ್ಯವಸ್ಥೆ ತೊಲಗಬೇಕು, ಸಮ ಸಮಾಜ ನಿರ್ಮಾಣವಾಗಬೇಕು. ಎಲ್ಲರು ಸೇವಾ ಮನೋಭಾವನೆಯಲ್ಲಿ ಕೆಲಸ ಮಾಡಬೇಕು ಎಂದರು.

ಎಸ್.ಕೇಶವಮೂರ್ತಿ ಮಾತನಾಡಿ, ಜನರಿಗೆ ಉತ್ತಮ ಶಿಕ್ಷಣ  ಆರೋಗ್ಯ ತಲುಪಿಸಲು ಮಹದೇವಪ್ಪ ಪ್ರತಿಷ್ಠಾನ ಮಾಡುತ್ತಿದೆ. ಜನಸೇವೆ ದೇವರ ಸೇವೆ ಮಾಡಿದಂತೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಸರ್ಕಾರ ತಾರತಮ್ಮ ಮಾಡದೇ ಕೊಡುತ್ತಿದೆ ಮತ್ತು ಗ್ಯಾರೆಂಟಿ ಯೋಜನೆಗಳನ್ನು ನಮ್ಮ ಕ್ಷೇತ್ರದ ಎಲ್ಲ ಕುಟುಂಬಗಳಿಗೆ ತಲುಪಿಸಲಾಗಿದೆ ಎಂದರು.   

ಎಮ್.ಶಿವರಾಜು ಮಾತನಾಡಿ, ಮಹದೇವಪ್ಪ ಪ್ರತಿಷ್ಠಾನ ಶಿಕ್ಷಣ, ಆರೋಗ್ಯ, ಪರಿಸರ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ, ಸಹಕಾರ ನೀಡುತ್ತಿದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಸೌವಲತ್ತು ತಲುಪುಬೇಕು ಆಗ ಮಾತ್ರ ಸಮಾಜ ಅಭಿವೃದ್ಧಿ ಸಾಧ್ಯ ಎಂದರು.

ಮಹದೇವಪ್ಪ ಪ್ರತಿಷ್ಠಾನದ ವತಿಯಿಂದ  ಪ್ರತಿವರ್ಷ 20 ಸಾವಿರ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಮತ್ತು ಇಂದಿರಾ ಹೆಲ್ತ್ ಕೇರ್ ನಿಂದ ಪ್ರತಿದಿನ ಸಕ್ಕರೆ ಖಾಯಿಲೆ, ಬಿಪಿ ಮತ್ತು ಇ.ಸಿ.ಜಿ.ಯನ್ನು ಉಚಿತವಾಗಿ ಪರಕ್ಷೆ ಮಾಡಲಾಗುತ್ತಿದೆ. 500ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಅಪರೇಷನ್ ಮಾಡಿಸಲಾಗಿದೆ. ಇಂದಿನ ಶಿಬಿರದಲ್ಲಿ ಸಾವಿರಾರು ಜನರು ಭಾಗವಹಿಸಿದ್ದಾರೆ. ಅವರಿಗೆ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೂ ಬೇಕಾದವರಿಗೆ ಉಚಿತವಾಗಿ ಮಾಡಿಸಲಾಗುವುದು ಎಂದರು.

ನಗರ ಗ್ಯಾರೆಂಟಿ ಯೋಜನೆಗಳ ಉಪಾಧ್ಯಕ್ಷ ಜನಾರ್ಧನ್, ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ಸುಧೀಂದ್ರ, ಕಾಂಗ್ರೆಸ್ ಪಕ್ಷದ ಮುಖಂಡರಾದ ಕುಮಾರೇಗೌಡ, ಶಿವಕುಮಾರ್, ಪರಿಸರ ರಾಮಕೃಷ್ಣ, ನಟರಾಜ್, ಮಲ್ಲಿಕಾ, ವಿಜಯಮ್ಮ, ಸುಶೀಲಮ್ಮ ,ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Leave a Reply