ಬುಡಕಟ್ಟು ಸಮುದಾಯಗಳು ತಮ್ಮ ಅಸ್ತಿತ್ವವನ್ನು ಅಥವಾ ಪರಂಪರೆಯನ್ನು ಕಳೆದುಕೊಳ್ಳದೆ ರಾಷ್ಟ್ರದ ಪ್ರಗತಿಯಲ್ಲಿ ಭಾಗವಹಿಸಲು ಸಮಾನ ಮತ್ತು ನ್ಯಾಯಯುತ ಸಮಾಜವನ್ನು ರಚಿಸಲು ಪ್ರಯತ್ನಿಸಬೇಕು ಎಂಬ ನೆಹರು ಅವರ ಆಶಯವನ್ನು ಈ ಅನುವಾದಿತ ಕೃತಿ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ಈ ಪಠ್ಯವನ್ನು ಓದುವವರಿಗೆ ಬುಡಕಟ್ಟು ಸಮುದಾಯಗಳ ಭೂಮಿಯ ಹಕ್ಕುಗಳನ್ನು ಗುರುತಿಸಲು ಮತ್ತು ರಕ್ಷಿಸಲು ನೆಹರು ಪ್ರಬಲವಾಗಿ ಪ್ರತಿಪಾದಿಸಿದ್ದರು ಎಂಬುದು ಮನವರಿಕೆಯಾಗುತ್ತದೆ. ನೆಹರೂ ಅವರ ರಾಜಕೀಯ ಧುರೀಣತೆಗೆ ಮತ್ತೊಂದು ಸಾಕ್ಷಿ ಎಂದರೆ ಸಾಕಷ್ಟು ಪರಿಹಾರವಿಲ್ಲದೆ ಮತ್ತು ಅವರ ಅನುಮೋದನೆಯಿಲ್ಲದೆ ಬುಡಕಟ್ಟು ಭೂಮಿಯನ್ನು ಅವರಿಂದ ಕಿತ್ತುಕೊಳ್ಳುವ ಅಥವಾ ಅಧಿಕಾರಯುತವಾಗಿ ಕಸಿದುಕೊಳ್ಳುವ ಕೆಲಸ ಮಾಡಬಾರದು ಎಂದು ಅವರು ನಂಬಿದ್ದರು. ಹಾಗೆಯೇ, ಬುಡಕಟ್ಟು ಸಮುದಾಯಗಳು ತಮ್ಮ ಸಂಪನ್ಮೂಲಗಳನ್ನು ನಿರ್ವಹಿಸುವಲ್ಲಿ ಸ್ವಾಯತ್ತತೆಯ ಕಲ್ಪನೆಯನ್ನು ಬೆಂಬಲಿಸಿದರು.

ಜವಾಹರಲಾಲ್ ನೆಹರು ಅವರ ಚಿಂತನೆಗಳ ಈ ಅನುವಾದಿತ ಆವೃತ್ತಿಯು ನೆಹರೂ ಅವರ ದೃಷ್ಟಿ, ಮೌಲ್ಯಗಳು ಮತ್ತು ನೀತಿಗಳ ಒಳನೋಟಗಳನ್ನು ಒದಗಿಸುತ್ತದೆ. ಅವುಗಳ ಮಹತ್ವವು ಇಂದಿಗೂ ಪ್ರಸ್ತುತವಾಗಿದೆ ಎಂದು ಸಾಬೀತುಪಡಿಸುತ್ತದೆ.
ಈ ಮಹತ್ವದ ಅನುವಾದವು ಕನ್ನಡದ ಚಿಂತನಾ ಪರಂಪರೆಯನ್ನು ಉತ್ತಮಗೊಳಿಸಬಲ್ಲದು. ಇಂತಹ ಅಮೂಲ್ಯವಾದ ಕೆಲಸವನ್ನು ಪೂರೈಸಿರುವ ಪ್ರಭಾಕರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
- ಡಾ. ಎಚ್. ಕೆ. ಶಿವಲಿಂಗಸ್ವಾಮಿ (ಬೆನ್ನುಡಿಯಿಂದ)
ಬೆಲೆ: 200.00 (ಅಂಚೆವೆಚ್ಚ ಉಚಿತ)
ಪುಸ್ತಕ ಖರೀದಿಸಲು: 9448676770



