ಬುದ್ಧನನ್ನೇ ಸ್ಪರ್ಶಿಸಿದ ಅನುಭವ ಕೊಡುವ ಈ ಬುದ್ಧನ ಕಥೆಗಳು ಎಂಬ ಕೃತಿ ಮತ್ತೆ ಮತ್ತೆ ಬುದ್ಧನನ್ನು ನಮಗೆ ನಾವೇ ಅನುಸಂಧಾನ ಮಾಡಿಕೊಳ್ಳುವಂತಹ ಅನುಭವ ನೀಡುತ್ತದೆ.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ಬುದ್ಧ , ಬುದ್ಧತ್ವ ಇವುಗಳ ಪುನರ್ಮನ ಕಾಲಕಾಲಕ್ಕೆ ನಮ್ಮೊಳಗಿ ನಿರಂತರವಾಗಿ ಆಗುತ್ತಿರಲೇಬೇಕು. ನಾವೇ ಕಟ್ಟಿಕೊಂಡ ಬುದ್ಧತ್ವದ ಸಂಕಥನಗಳು ಮತ್ತೆ ಮತ್ತೆ ನಮ್ಮೊಳಗಿನ ಅರಿವನ್ನೇ ಉಜ್ವಲಗೊಳಿಸುವಂತಿರಬೇಕು. ಈ ದೆಸೆಯಲ್ಲಿ ಈ ಕೃತಿ ತುಂಬಾ ಆಪ್ತವಾಗುತ್ತದೆ.

ಜಿ ವಿ ಆನಂದ್ ಮೂರ್ತಿಯವರು ಈ ಕಥೆಗಳನ್ನು ಸುಂದರವಾಗಿಯೂ ಪುನಹ ಪುನಹ ಓದುತ್ತಾ ಬುದ್ಧ ನಮ್ಮ ಜೊತೆಯಲ್ಲೇ ಇರುವ ಹಾಗೆ ಭಾಸವಾಗುವಂತೆ ಇವು ನಮ್ಮನ್ನ ಸೆಳೆಯುತ್ತವೆ. ಹಾಗೆ ನಮ್ಮ ಅರಿವನ್ನ ತಿದ್ದುತ್ತವಂತೆಯೂ ಈ ಕತೆಗಳನ್ನು ಪುನರ್ ಸೃಷ್ಟಿಸಿದ್ದಾರೆನ್ನಬೇಕು.
ಇವು ಕಥೆಗಳಲ್ಲ; ಬುದ್ಧ ಗುರು ನಡೆದ ಪಾದದ ಗುರುತುಗಳು. ಬುದ್ಧನ ಪ್ರಿಯ ಶಿಷ್ಯನಂತಿರುವ ಆನಂದಮೂರ್ತಿ ಲೋಕಾನುಕಂಪದಿಂದ ಈ ಕೈಮರಗಳನ್ನು ತಂದು ದಾರಿ ಇದ್ದಕ್ಕೂ ನೆಟ್ಟಿದ್ದಾರೆ ಎಂಬ ಎಂಬ ಬೌದ್ಧ ಮೀಮಾಂಸಕರಾದ ನಟರಾಜ್ ಬೂದಾಳ್ ಅವರ ಮಾತು ಕೂಡ ಈ ಲೇಖಕರ ಬಗ್ಗೆ ಮತ್ತಷ್ಟು ಅಭಿಮಾನ ಮತ್ತು ಪ್ರೀತಿ ಹುಟ್ಟುವಂತೆ ಮಾಡುತ್ತವೆ.

ಇಲ್ಲಿನ ಕಥೆಗಳು ಪ್ರಸಂಗಗಳಾಗಿಯೂ ಜೀವಂತ ಸನ್ನಿವೇಶಗಳಂತೆಯೂ ನಮ್ಮೊಳಗೆ ಜೀವಂತ ಬುದ್ಧನ ಧ್ಯಾನವನ್ನು ಹರಳುಗಟ್ಟಿಸುತ್ತಾ ಹೋಗುತ್ತವೆ. ಬುದ್ಧನ ಸಂವಾದದ ಬಗೆ ಎಂಥವರನ್ನು ಸೆಳೆದು ಬೀಡುತ್ತದೆ. ಒಬ್ಬರೇ ನಡೆದಾಡುವಾಗ ನಮಗೂ ಬುದ್ಧ ಸಿಗಬಹುದೆಂಬ ಮುಗ್ಧ ಹಂಬಲಗಳನ್ನು ಈ ಕೃತಿ ನಮ್ಮಲ್ಲಿ ಹುಟ್ಟಿಸುತ್ತ ಹೋಗುತ್ತದೆ. ಈ ಸೆಳೆತಗಳಿಗೆ ಕಾರಣ ಆತನ ಮೈತ್ರಿ ಮತ್ತು ನಿರ್ವಿಕಾರದ ಮನಸ್ಸು. ಬುದ್ಧ ಅದೆಷ್ಟು ಸುಂದರ. ಅದೆಷ್ಟು ಬೆಳಕಿನೊಳಗನ ಮಹಾ ಬೆಳಗು, ವಿವೇಕದೊಳಗಣ ಮಹಾವಿವೇಕ ಎನ್ನುವಂತೆ ಇಲ್ಲಿನ ಒಂದೊಂದು ಕಥೆಯೂ ನಮ್ಮೊಳಗೆ ಬುದ್ದನನ್ನು ಅನಂತ ಅನಂತವಾಗಿ ರೇಖಿಸುತ್ತಾ ಹೋಗುತ್ತವೆ. ಇಂತಹ ತೀವ್ರತೆಯನ್ನು ಈ ಕಥೆಗಳು ನಮ್ಮೊಳಗೆ ಎಬ್ಬಿಸುತ್ತವೆ. ಹಾಗೂ ಬುದ್ಧನನ್ನ ಇಡಿಯಾಗಿ ಗ್ರಹಿಸಲು, ಯಾವುದೇ ತಾತ್ವಿಕತೆಯ ಗೋಜಲುಗಳಲ್ಲಿ ಸಿಲುಕದೆ, ಬುದ್ಧತ್ವ ಮತ್ತು ಬುದ್ಧನ ವ್ಯಕ್ತಿತ್ವ ನಮ್ಮನ್ನು ಸೃಜನಶೀಲವಾಗಿ ಆಪ್ತವಾಗುವಂತೆ ಇಲ್ಲಿನ ಕಥೆಗಳು ತಾಗುತ್ತಲೇ ಮೆಲ್ಲಗೆ ತಣ್ಣನೆಯ ಬುದ್ಧನ ಧ್ಯಾನ ನಮ್ಮ ನರನಾಡಿಗಳಲ್ಲಿ ಹೊಮ್ಮುವಂತೆ ಮಾಡುತ್ತವೆ. ಅದರಲ್ಲಿಯೂ ಬುದ್ಧತ್ವ ತಾಳ್ಮೆಯ ಕಿರೀಟ ಎಂಬ ಕತೆಯಂತೂ ನನ್ನನ್ನಾ ಮತ್ತೇ ಮತ್ತೇ ಓದುವಂತೆ ಸೆಳೆಯುತ್ತದೆ. ಬುದ್ಧನ ಕೆಲ ಬಿಕ್ಕುಗಳು ಕೊಡುವ ಬುದ್ಧತ್ವದ ಜ್ಞಾನ ತಿಳಿಯು ಅರಿವು ಬುದ್ಧನಷ್ಟೇ ಅಚ್ಚರಿಯನ್ನು ಮೂಡಿಸುತ್ತಾರೆ. ಆ ಶ್ರಾವಸ್ತಿ, ಆ ವೈಶಾಲಿ, ಆ ವೇಣುವನ, ಮಹಾವನ, ಜೇತವನ ಇವೆಲ್ಲವೂ ಈ ಕೃತಿ ಓದುತ್ತಾ ಓದುತ್ತಾ ಹೋದಂತೆಲ್ಲ ನಮ್ಮೊಳಗಿನ ಅವ್ಯಕ್ತದ ಒಳಗೆ ತಣ್ಣಗೆ ಬುದ್ಧನ ಪಾದದ ಗುರುತುಗಳಾಗಿ ಹೊಮ್ಮುವಂತೆ ಈ ಕೃತಿ ಪ್ರೇರಣೆ ಆಗುತ್ತದೆ.
ಈ ಕೃತಿ ನಮ್ಮ ಜೊತೆಯಲ್ಲೇ ಇರಬೇಕು ಎಂಬ ಹಂಬಲವನ್ನು ಹುಟ್ಟಿಸುತ್ತದೆ. ಎಲ್ಲರೂ ಈ ಕಥೆಗಳನ್ನು ಓದಿ ತಥಾಗತನನ್ನ ನಮ್ಮೊಳಗೆ ನಾವೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ನನ್ನೊಳಗನ್ನು ನಾನೇ ನೋಡಿಕೊಳ್ಳುವ ಸಾಕ್ಷಿ ಪ್ರಜ್ಞೆಯನ್ನು ಈ ಕಥೆಗಳು ಎಚ್ಚರಿಸುತ್ತವೆ. ಇಂತಹ ಒಳ ಪ್ರೇರಣೆಗೆ ಈ ಕೃತಿ ಸಾಕ್ಷಿಯಾಗುತ್ತದೆ. ಅಭಿನಂದನೆಗಳು ಜಿ ವಿ ಆನಂದ್ ಮೂರ್ತಿ ಸರ್ ಅವರಿಗೆ. ಹಾಗೂ ಈ ಕೃತಿಯನ್ನ ಪ್ರಕಟಿಸಿದ ಪ್ರೀತಿ ಪುಸ್ತಕ ಪ್ರಕಾಶನಕ್ಕೂ ಕೃತಜ್ಞತೆಗಳು.ಪುಸ್ತಕ ಕಳುಹಿಸಿದ ಆಕೃತಿಯ ಗುರು ಸರ್ ಅವರಿಗೂ ಧನ್ಯವಾದಗಳು
ಬುದ್ಧಂ ಶರಣಂ ಗಚ್ಛಾಮಿ
– ಡಾ. ಪ್ರಕಾಶ್ ಮಂಟೇದ, ಪ್ರಾಧ್ಯಾಪಕರು



