ರೈಲ್ವೆ ನೇಮಕಾತಿ ಪರೀಕ್ಷೆ ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ
ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣರವರಿಗೆ ಅಕ್ಟೋಬರ್ 15ರಂದು ಅಭಿನಂದನಾ ಸಮಾರಂಭ
ಬೆಂಗಳೂರು: ಕೇಂದ್ರ ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಸ್ಥಳೀಯ ಕನ್ನಡ ಭಾಷೆಯಲ್ಲಿ ಬರೆಯಲು ಅನುಮತಿ ನೀಡಿರುವ ಕುರಿತು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಅಕ್ಟೋಬರ್ 15ರಂದು ಗಾಂಧಿ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಈ ಕುರಿತು ಮಾಹಿತಿ ನೀಡಲು ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿ ನಡೆಸಿದ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ, ಅಹಿಂದ ನಾಯಕ ಮುಕುಡಪ್ಪ, ಅಂಬೇಡ್ಕರ್ ಕ್ರಾಂತಿ ಸೇನೆ ಅಧ್ಯಕ್ಷ ಕ್ರಾಂತಿರಾಜು, ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಸಿ.ಮೂರ್ತಿ, ಸಮತಾ ಸೈನಿಕ ದಳದ ನಾಯಕಿ ಮಂಜುಳ ಭಾಗವಹಿಸಿದ್ದರು.
ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ಕೇಂದ್ರ ಸಚಿವ ವಿ.ಸೋಮಣ್ಣರವರು ಸಮಾಜಮುಖಿ ಚಿಂತನೆ, ಸಾಮಾಜಿಕ ಕಳಕಳಿಗೆ ಅವರ ನಡೆಯೆ ಸಾಕ್ಷಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಬೇಕು ಎಂಬ ಚಿಂತನೆ ಇರುವ ವಿ.ಸೋಮಣ್ಣರವರು ಪ್ರಧಾನಿ ನರೇಂದ್ರಮೋದಿರವರ ಬಳಿ ಚರ್ಚಸಿ ರೈಲ್ವೆ ನೇಮಕಾತಿ ಪರೀಕ್ಷೆಯನ್ನ ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಪ್ರವೇಶ ಪರೀಕ್ಷೆ ಬರೆಯವುದರಿಂದ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶ ಲಭಿಸುತ್ತದೆ. ಪ್ರತಿಯೊಬ್ಬ ಕನ್ನಡಿಗರು ಸಂತೋಷಪಡುವ ಸಂದರ್ಭವಾಗಿದೆ. ಆದ್ದರಿಂದ ಅಕ್ಟೋಬರ್ 15ರಂದು ಕೇಂದ್ರ ಸಚಿವ ವಿ.ಸೋಮಣ್ಣರವರನ್ನು ಅದ್ದೂರಿಯಾಗಿ ಗಾಂಧಿ ಭವನದಲ್ಲಿ ಸನ್ಮಾನಿಸಲಾಗುತ್ತಿದೆ ಎಂದರು.
ಕೆ.ಮುಕುಡಪ್ಪ ಮಾತನಾಡಿ, ವಿ.ಸೋಮಣ್ಣರವರು ಕೇಂದ್ರ ಸಚಿವರಾಗಿ ನಾಲ್ಕು ತಿಂಗಳ ಅವಧಿಯಲ್ಲಿ ಮಹತ್ವಪೂರ್ಣ ಸಾಧನೆ ಮಾಡಿದ್ದಾರೆ, 7ಕೋಟಿ ಕನ್ನಡಿಗರು ಸಂತೋಷಪಡುವ ಸಂಗತಿಯಾಗಿದೆ ಎಂದರು.
ಕೇಂದ್ರ ಸರ್ಕಾರವನ್ನು ಮನ ಒಲಿಸಿ ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಗ್ರಾಮಿಣ ಭಾಷೆ ಕನ್ನಡದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಇಂತಹ ಶುಭಾ ಸಂದರ್ಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣರವರನ್ನು ಅಭಿನಂದಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ ಎಂದರು.
ಕ್ರಾಂತಿ ರಾಜು ಮಾತನಾಡಿ, ಕನ್ನಡ ಕಟ್ಟಾಳು, ಜಾತ್ಯತೀತ ನಾಯಕ ಎಂದರೆ ವಿ.ಸೋಮಣ್ಣರವರು. ಕೇಂದ್ರ ಸರ್ಕಾರದಲ್ಲಿ ಕನ್ನಡ, ಕನ್ನಡಿಗರ ಕುರಿತು ಅವರ ಪರ ಹೋರಾಟ ಮಾಡುವ ನಾಯಕ ಎಂದರೆ ವಿ.ಸೋಮಣ್ಣರವರು ಎಂದರು.
ವಿ.ಸೋಮಣ್ಣರವರ 40 ವರ್ಷದ ಹೋರಾಟದ ಬದುಕಿನಲ್ಲಿ 50ಕ್ಕೂ ಹೆಚ್ಚು ಸಾಮಾನ್ಯ ಕಾರ್ಯಕರ್ತರನ್ನ ಪಾಲಿಕೆ ಸದಸ್ಯರಾಗಿ ಮತ್ತು ಮೇಯರ್ ಸಹ ಮಾಡಿದ್ದಾರೆ. ಸಮಾಜದಲ್ಲಿ ನೊಂದವರ ಧ್ವನಿಯಾಗಿ ಕೆಲಸ ಮಾಡುವ ವಿ.ಸೋಮಣ್ಣರವರು ರಾಜ್ಯದಲ್ಲಿ ಈ ಹಿಂದೆ ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಮುಂಗಳಮುಖಿಯರಿಗೆ ವಸತಿ ಸೌಲಭ್ಯ ಕಲ್ಪಿಸಿ ಅವರ ಜೀವನಕ್ಕೆ ಆಸರೆಯಾದರು. ಕನ್ನಡ, ಕನ್ನಡಿಗರ ಪರ ಹೋರಾಟ ಮಾಡುವ ಕೇಂದ್ರ ವಿ.ಸೋಮಣ್ಣರವರು ನಾಡು ಕಂಡ ಶೇಷ್ಠ ರಾಜಕಾರಣಿ ಎಂದರು.




