ಮತ ಕ್ರೂಢೀಕರಣ ಯತ್ನ: ಟಿಪ್ಪು ಕಾಲದ ಸಲಾಂ ಆರತಿ ರದ್ದು

3 years ago

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವ ದೃಷ್ಟಿಯಿಂದ ಮತಗಳ ಕ್ರೋಡೀಕರಣದ ಪ್ರಯತ್ನ ಆರಂಭಿಸಿದೆ.

ಇದರ ಮೊದಲ ಹೆಜ್ಜೆಯಾಗಿ ಧಾರ್ಮಿಕ ಇಲಾಖೆಯನ್ನು ಧರ್ಮದಾಯ ದತ್ತಿ ಇಲಾಖೆಯಾಗಿ ಮರು ನಾಮಕರಣ ಮಾಡಲಾಗಿದೆ ಜೊತೆಗೆ ಟಿಪ್ಪು ಸುಲ್ತಾನ್ ಕಾಲದಲ್ಲಿದ್ದ ಸಲಾಂ ಆರತಿಯನ್ನು ರದ್ದುಪಡಿಸಲಾಗಿದೆ.

ಧಾರ್ಮಿಕ ಪರಿಷತ್ ಹೊರಡಿಸಿರುವ ಸುತ್ತೋಲೆಯಲ್ಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ಸಲಾಂ ಆರತಿಯನ್ನು ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ನಡೆದು ಬರುತ್ತಿದ್ದ ಸಲಾಂ ಆರತಿ ಬದಲಿಗೆ ಇನ್ನು ಮುಂದೆ ಸಂಧ್ಯಾ ಆರತಿ ಆಚರಣೆ ಮಾಡಬೇಕೆಂದು ಸುತ್ತೋಲೆಯಲ್ಲಿ ಹೊರಡಿಸಲಾಗಿದೆ.

ರಾಜ್ಯದ ಪ್ರಮುಖ ದೇವಾಲಯಗಳಾದ ಕೊಲ್ಲೂರು ಮೂಕಾಂಬಿಕೆ, ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಸ್ಥಾನ, ಶೃಂಗೇರಿ, ಕುಕ್ಕೇಸುಬ್ರಹ್ಮಣ್ಯ , ಪುತ್ತೂರು ಸೇರಿದಂತೆ ಮತ್ತಿತರ ದೇವಸ್ಥಾನಗಳಲ್ಲಿ ಪ್ರತಿದಿನ ಸಲಾಂ ಆರತಿಯನ್ನು ಮಾಡಲಾಗುತ್ತಿತ್ತು.

ನಾಡಿನ ಪ್ರಜೆಗಳು, ಮಂತ್ರಿ ಮತ್ತು ರಾಜನ ಒಳಿತಿಗಾಗಿ ಸಲಾಂ ಆರತಿಯನ್ನು ನಡೆಸಬೇಕೆಂದು ಟಿಪ್ಪು ಸುಲ್ತಾನ್ 1756ರಲ್ಲೇ ತನ್ನ ಆಡಳಿತಾವಯಲ್ಲಿ ಈ ಪದ್ದತಿಯನ್ನು ಜಾರಿ ಮಾಡಿದ್ದ ಎಂಬ ನಂಬಿಕೆಯಿದೆ. ಸಲಾಂ ಆರತಿ ಮಾಡುವುದರಿಂದ ನಾಡಿನ ಸುಭಿಕ್ಷೆ ಮತ್ತು ಪ್ರಜೆಗಳ ಕಲ್ಯಾಣಕ್ಕಾಗಿ ದೇವಾಲಯಗಳಲ್ಲಿ ಇದನ್ನು ನಡೆಸಬೇಕೆಂದು ಟಿಪ್ಪು ಸುಲ್ತಾನ್ ಸುತ್ತೋಲೆ ಹೊರಡಿಸಿದ್ದರು ಎಂಬ ಪ್ರತೀತಿ ಇದೆ. ಇದೀಗ ಸಲಾಂ ಆರತಿ ರದ್ದುಗೊಂಡಿದ್ದು, ಇದರ ಸ್ಥಾನವನ್ನು ಸಂಧ್ಯಾರತಿ ಅಲಂಕರಿಸಲಿದೆ.

ಸಲಾಂ ಆರತಿಯನ್ನು ರದ್ದುಪಡಿಸಬೇಕೆಂದು ಹಿಂದೂ ಅರ್ಚಕರೇ ಮುಜರಾಯಿ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದರು. ಇದರ ಬದಲಿಗೆ ಸಂಧ್ಯಾ ಆರತಿ ಪ್ರಾರಂಭಿಸಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದರು.

ಅರ್ಚಕರ ಕೋರಿಕೆ ಮೇರೆಗೆ ಈವರೆಗೂ ಹಿಂದೂ ದೇವಾಲಯಗಳಲ್ಲಿ ನಡೆಯುತ್ತಿದ್ದ ಸಲಾಂ ಆರತಿ ಇನ್ನು ಮುಂದೆ ಸಂಧ್ಯಾರತಿಯಾಗಿ ಬದಲಾವಣೆಯಾಗಲಿದೆ. ಹಿಂದೂ ದೇವಾಲಯಗಳಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಸಂಧ್ಯಾವಂದನೆ ವೇಳೆ ಸಂಧ್ಯಾರತಿ ಮಾಡಬೇಕು ಎಂದು ಸೂಚಿಸಲಾಗಿದೆ.

ಹಿಂದೂ ದೇವಾಲಯಗಳಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಸಂಧ್ಯಾವಂದನೆ ವೇಳೆ ಸಂಧ್ಯಾರತಿ ಮಾಡಬೇಕು ಎಂದು ಸೂಚಿಸಲಾಗಿದೆ.

Leave a Reply