ಬೆಂಗಳೂರು: ಹೊಸ ಪರಿವರ್ತನೆ ಜೊತೆಯಲ್ಲಿ ಜೆ.ಡಿ.ಎಸ್. ಪಕ್ಷ ಮುಂಬರುವ ವಿಧಾನಸಭಾ ಚುನಾವಣೆ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ ಕೇಂದ್ರ ಕಛೇರಿ ಸಭಾಂಗಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ , ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಸಮ್ಮುಖದಲ್ಲಿ ಸಮಾಜ ಸೇವಕರಾದ ಗೋವಿಂದರಾಜು ಮತ್ತು ಅಜಾದ್ ನಗರ ವಾರ್ಡ್ ಮಾಜಿ ಬಿ.ಬಿ.ಎಂ.ಪಿ. ಸದಸ್ಯರಾದ ಗೌರಮ್ಮ ಸಿ. ಗೋವಿಂದರಾಜು, ಮಾಜಿ ಉಪಾಮಹಾಪೌರ ರಾಮೇಗೌಡ ಕಾಂಗ್ರೆಸ್ ಪಕ್ಷ ತೊರೆದು ಜಾತ್ಯಾತೀತ ಜನತಾದಳ(JDS)ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರುನಗರ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಸಾವಿರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಗೋವಿಂದರಾಜು, ರಾಮೇಗೌಡ,ಗೌರಮ್ಮ ಗೋವಿಂದರಾಜು ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ ಎಂದರು.
ಹೊಸ ಪರಿವರ್ತನೆ ತರಬೇಕು, ಹಣ ಹಂಚಿಕೆಯಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ಜನತಾದಳ ಪರವಾಗಿ ಮೊದಲನೇಯ ಸೀಟು ಚಾಮರಾಜಪೇಟೆ ವಿಧಾನಸಭಾ ಗೆಲುವಿನ ಫಲಿತಾಂಶ ಜೆಡಿಎಸ್ ಪಕ್ಷಕ್ಕೆ ಸಿಗಲಿದೆ ಎಂದರು.
ಜನತಾದಳ ಶಕ್ತಿ ಬಗ್ಗೆ ಜನರ ತೀರ್ಮಾನವಾಗಲಿದೆ. ಪಂಚರತ್ನ ರಥಯಾತ್ರೆಯಿಂದ ಜೆಡಿಎಸ್ ಪಕ್ಷಕ್ಕೆ ನವಚೈತನ್ಯ ತುಂಬಿದೆ. ಬೆಂಗಳೂರು ನಗರ ವಿಧಾನಸಭಾ 10ರಿಂದ12 ಸ್ಥಾನಗಳಲ್ಲಿ ಜೆಡಿಎಸ್ ಪಕ್ಷ ಗೆಲ್ಲಲಿದೆ. ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಪಕ್ಷ ಅಂತರಿಕ ಸರ್ವೆ ಮಾಡಿಸುತ್ತಿವೆ. ಮೊದಲು 17ಸೀಟು ಬರುತ್ತದೆ. ಈಗ 50ರಿಂದ 60ಬರುತ್ತದೆ. ಆದರೆ ರಾಜ್ಯದಲ್ಲಿ ಜೆ.ಡಿ.ಎಸ್. ಪಕ್ಷ 123 ಸ್ಥಾನ ಗೆಲ್ಲಲಿದೆ. ಜನತಾದಳ ಹೊಸಪರಿವರ್ತನೆ, ಜನತೆ ತೀರ್ಮಾನದ ಮೇಲೆ ಅಧಿಕಾರ ಏರಲಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಇಡೀ ಭಾರತದಲ್ಲಿ ಹೊಸ ಬದಲಾವಣೆಯಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಬದಲಾವಣೆಯಾಗುತ್ತಿದೆ. ಜನತಾದಳ ದೇಶ ಆಳಿದ ಪಕ್ಷ, ನಮ್ಮನ್ನ ಬಿಟ್ಟು ಹೋದವರು ಮತ್ತೆ ಪಕ್ಷ ಸೇರಲು ಬಯಸುತ್ತಿದ್ದಾರೆ ಎಂದರು.
ನನ್ನ ವಯಸ್ಸು 90. ರಾಜ್ಯದಲ್ಲಿ ನಿರ್ಭಯವಾಗಿ ಮಾತನಾಡಲು ಜನರ ಶಕ್ತಿ ನನಗಿದೆ. ಈ ಪಕ್ಷ ಉಳಿಯಬೇಕು ಮತ್ತೆ ತಲೆ ಎತ್ತಿ ನಿಲ್ಲುವ ಶಕ್ತಿ ಬರಬೇಕು. ಕುಮಾರಸ್ವಾಮಿರವರ ನೇತೃತ್ವದಲ್ಲಿ ಪಂಚರತ್ನ ಕಾರ್ಯಕ್ರಮ ರಾಜ್ಯದಲ್ಲಿ ಯಶ್ವಸಿಯಾಗಿ ಸಾಗುತ್ತಿದೆ ಎಂದರು.
ಗೋವಿಂದರಾಜು ಮಾತನಾಡಿ, ಬಡವರ, ದೀನದಲಿತರ ಪರ ಸೇವೆ ಮಾಡುತ್ತಾ ಜನಸೇವೆಯೆ ದೇವರ ಸೇವೆ ಎಂದು ನಂಬಿಕೊಂಡು ಬಂದ್ದಿದೇನೆ. ಧ್ವನಿ ಇಲ್ಲದ ಜನರಿಗೆ ಸೇವೆ ಮಾಡಬೇಕು ಎಂಬ ಆಶಯ ನನ್ನದು. ನನ್ನ ಜನಸೇವೆ ಗುರುತಿಸಿ ನನ್ನ ಪತ್ನಿಯಾದ ಗೌರಮ್ಮ ಗೋವಿಂದರಾಜುರವರನ್ನ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆ ಮಾಡಿದರು ಎಂದರು.
ರಾಷ್ಟ್ರೀಯ ಪಕ್ಷಗಳು ಜನ ಹಿತಚಿಂತನೆ ಮಾಡುವುದಿಲ್ಲ. ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ಎಲ್ಲ ವರ್ಗ, ಧರ್ಮದವರನ್ನ ಸಾಮಾನ ರೀತಿಯಲ್ಲಿ ಕಾಣುವ ನಾಡು, ನುಡಿ ಹಿತಕಾಯವ ಪಕ್ಷವಾಗಿದೆ ಎಂದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ನೇತೃತ್ವದಲ್ಲಿ ಜೆ.ಡಿ.ಎಸ್. ಪಕ್ಷ ಸಂಘಟನೆ ಮಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಮುಖ್ಯಮಂತ್ರಿಗಳಾಗಿ ಕುಮಾರಸ್ವಾಮಿ ಆಯ್ಕೆಯಾಗಲಿದ್ದಾರೆ ಎಂದರು.
ಬೆಂಗಳೂರುನಗರ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಪ್ರಕಾಶ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಆರಿಫ್ ಪಾಷ, ಇಮ್ರಾನ್ ಪಾಷರವರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸುಧಾ ಮೀನ, ಕೆ ಗಿರಿಜಾ, ಉಷಾ ಮೊದಲಾದ ಕಾಂಗ್ರೆಸ್ ಕಾರ್ಯಕರ್ತರು ಜೆ.ಡಿ.ಎಸ್. ಸೇರ್ಪಡೆಯಾದರು.




