ಬೆಂಗಳೂರು: ಕನ್ನಡ ಡಿಂಡಿಮ ಪ್ರತಿಷ್ಠಾನದಿಂದ ಡಿಸೆಂಬರ್ 14ರಂದು ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಅಗ್ರಹಾರ ದಾಸರಹಳ್ಳಿಯಲ್ಲಿ ಸಹಸ್ರಾರು ಗಾಯಕರಿಂದ ಕನ್ನಡ ಹಾಡುಗಳು ಪಂಚ ಪ್ರಕಾರಗಳಲ್ಲಿ ಕನ್ನಡ ನಾಡ ಗೀತೆಗಳು, ದಾಸರ ಪದಗಳು, ಶಿವಶರಣರ ಹಾಡುಗಳು, ಕಗ್ಗ ತತ್ವಪದಗಳು, ಜಾನಪದಗಳ ‘ಸಹಸ್ರ ಕಂಠ ಗಾನ ವೈಭವ’ ಎಂಬ ಕಾರ್ಯಕ್ರಮ ಗ್ಲೋಬಲ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಲಿದ್ದು, ಇದೇ ಸಂದರ್ಭದಲ್ಲಿ ‘ಕನ್ನಡ ಡಿಂಡಿಮ 2025 ಪ್ರಶಸ್ತಿಯನ್ನು ಪದ್ಮಭೂಷಣ ಡಾ. ರಾಜ್ ಕುಮಾರ್‌ರವರಿಗೆ ಮರಣೋತ್ತರವಾಗಿ ನೀಡಲಾಗುವುದು. ಪ್ರಶಸ್ತಿಯನ್ನು ಡಾ.ಶಿವರಾಜ್ ಕುಮಾರ್ ಅವರು ಸ್ವೀಕರಿಸಲಿದ್ದಾರೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಶ್ರೀ ಶ್ರೀ ಶ್ರೀ ವಿದ್ಯಾ ವಾಚಸ್ಪತಿ ಡಾ.ವಿಶ್ವ ಸಂತೋಷ್ ಭಾರತಿ ಶ್ರೀಪಾದರು, ಸಂಘಟನೆಯ ಪ್ರಧಾನ ಕಾರ್ಯದರ್ಶಿ, ಆಡಳಿತ ಪಕ್ಷದ ಮಾಜಿ ನಾಯಕ ಎಮ್.ಶಿವರಾಜು, ಸಂಘದ ಪದಾಧಿಕಾರಿಗಳಾದ ನವೀನ್ ಹೆಗಡೆ, ಚಿಕ್ಕಣ್ಣ, ಸೋಮಶೇಖರ್, ನಾಗರಾಜಶೆಟ್ಟಿ ಅವರು ಉಪಸ್ಥಿತರಿದ್ದರು.
ಶ್ರೀ ಶ್ರೀ ಶ್ರೀ ವಿಶ್ವ ಸಂತೋಷಭಾರತಿ ಶ್ರೀಪಾದರು ಮಾತನಾಡಿ, ಕನ್ನಡ ಡಿಂಡಿಮ ಕನ್ನಡ ಭಾಷೆ ವಿಶಿಷ್ಟವಾಗಿ ಆಚರಿಸಬೇಕು ಮತ್ತು ಕನ್ನಡ ಭಾಷೆ ಉಳಿಸಲು ಬೆಳಸಲು ಸಂಘಟನೆ ಮಾಡುತ್ತಿದೆ. ಕನ್ನಡ ಸಂಸ್ಕೃತಿಯನ್ನು ಉಳಿಸಬೇಕು. ಮಹಿಳೆಯರು ಅವರನ್ನ ವೇದಿಕೆಗೆ ಕರೆತರಬೇಕು ಎಂದು ಮೂರು ಸಾವಿರ ಗೃಹಿಣಿಯರಿಂದ ಗೀತೆ ಗಾಯನ ಏರ್ಪಡಿಸಲಾಗಿದೆ ಎಂದರು.
ವಚನ ಸಾಹಿತ್ಯ, ದಾಸರಪದಗಳು, ಗೀಗೀ ಪದಗಳು, ಜಾನಪದ ಗೀತೆಗಳು, ಮಂಕುತಿಮ್ಮನ ಕಗ್ಗ ಮತ್ತು ಸರ್ವಜ್ಞ, ನಿಸಾರ್ ಅಹಮದ್ ನಿತ್ಯೋತ್ಸವ ಗೀತೆಗಳನ್ನು 5000 ಹಣತೆಗಳನ್ನು ಹಚ್ಚಿ, ಸಾವಿರಾರು ಗೃಹಿಣಿಯರು ಎಲ್ಲರು ಸೇರಿ 15 ಹಾಡುಗಳನ್ನು ಹಾಡುವ ಮೂಲಕ ಕನ್ನಡದ ಕಂಪನ್ನು ಪಸರಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಕಳೆದ ವರ್ಷ 2024ರಲ್ಲಿ ಕುವೆಂಪುರವರಿಗೆ ಕನ್ನಡ ಡಿಂಡಿಮ ಪ್ರಶಸ್ತಿ ಕೊಡಮಾಡಲಾಗಿತ್ತು. 2025ನೇ ಸಾಲಿನಲ್ಲಿ ಮೇರುನಟ ಡಾ.ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಪ್ರಧಾನ ಮಾಡಲಾಗುತ್ತಿದೆ. ಖ್ಯಾತ ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ ವಿನಯ್ ಗುರೂಜಿ, ಆದಿಚುಂಚನಗಿರಿ ಮಠದ ಪ್ರಕಾಶನಾಥ ಗುರೂಜಿ, ಶಾಸಕರಾದ ಎಂ.ಕೃಷ್ಣಪ್ಪ, ವೊಡೆ ಪಿ.ಕೃಷ್ಣ, ಅನೇಕ ಗಣ್ಯಮಹನೀರು ಭಾಗವಹಿಸಲಿದ್ದಾರೆ. ಗಾಯನ ಕಾರ್ಯಕ್ರಮದಲ್ಲಿ ಗಾಯಕರಾದ ಪ್ರವೀಣ ಡಿ.ರಾವ್, ಮಂಜೇಶ್, ಗಣೇಶ್ ಪ್ರಸಾದ್, ಸವಿತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಎಮ್.ಶಿವರಾಜು ಮಾತನಾಡಿ, ಕನ್ನಡ ಭಾಷೆ ಉಳಿಸಿ, ಬೆಳಸಲು ಕನ್ನಡ ಕಂಪನ್ನು ವಿಶ್ವಕ್ಕೆ ಪಸರಿಸಲು ಕನ್ನಡ ಡಿಂಡಿಮ ಪ್ರತಿಷ್ಠಾನದ ಉದ್ದೇಶವಾಗಿದೆ. ಅಗ್ರಹಾರ ದಾಸರಹಳ್ಳಿ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಜನರು ಆಗಮಿಸಿ ಕಾರ್ಯಕ್ರಮಕ್ಕೆ ಯಶ್ವಸಿಗೊಳಿಸಿ ಎಂದು ವಿನಂತಿಸಿದರು.



