ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2026

6 months ago

ಮೈಸೂರು: ಕರ್ನಾಟಕ ಸರ್ಕಾರದ ‘ರಂಗಾಯಣ, ಮೈಸೂರು’ ಆಧುನಿಕ ರಂಗಭೂಮಿಯ ಪ್ರತಿಷ್ಠೆಯ ರಂಗಸಂಸ್ಥೆಯಾಗಿದೆ. ಈ ಸಂಸ್ಥೆಯ ಮಹತ್ವದ ಒಂದು ರಂಗ ಯೋಜನೆ ‘ಬಹುರೂಪಿ ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವ’ ಈ ನಾಟಕೋತ್ಸವವನ್ನು ಪ್ರಸಕ್ತ ಸಾಲಿನಲ್ಲಿ 2026 ರ ಜನವರಿ 12 ರಿಂದ 18 ರವರೆಗೆ ರಂಗಾಯಣದ ಆವರಣದಲ್ಲಿ ‘ಬಹುರೂಪಿ ಬಾಬಾ ಸಾಹೇಬ್’ ಎಂಬ ಶೀರ್ಷಿಕೆಯಡಿ ನಡೆಸಲು ಯೋಜಿಸಲಾಗಿದೆ.

ಬಹುರೂಪಿ ಉತ್ಸವ ರಾಷ್ಟ್ರೀಯಮಟ್ಟದ ನಾಟಕೋತ್ಸವವಾಗಿದ್ದು, ಈ ಶೀರ್ಷಿಕೆಗೆ ಪೂರಕವಾದ ಅತ್ಯುತ್ತಮ ಗುಣಮಟ್ಟದ ರಂಗಪ್ರಯೋಗಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಬೇಕೆಂಬುದು ರಂಗಾಯಣದ ಆಶಯ.

ಈ ಹಿನ್ನೆಲೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು ಬರಹ ಹೋರಾಟಗಳನ್ನು ನೆನಪಿಸುವ ಧಮನಿತ/ಶೋಷಿತ ಸಮುದಾಯ ಕಥನಗಳ ನಾಟಕಗಳೂ ಸೇರಿದಂತೆ ಹಲವು ವೈವಿಧ್ಯಮಯ ನಾಟಕಗಳನ್ನು ಬಹುರೂಪಿಯಲ್ಲಿ ಆಯೋಜಿಸಲು ಕನ್ನಡ, ಇಂಗ್ಲೀಷ್ ಸೇರಿದಂತೆ ಭಾರತೀಯ ಇತರ ಭಾಷೆಗಳ ನಾಟಕಗಳನ್ನು ಆಹ್ವಾನಿಸಲಾಗಿದೆ ಮತ್ತು ‘ಮಕ್ಕಳ ಬಹುರೂಪಿ’ಗಾಗಿ ಮುಖ್ಯ ನಾಟಕಗಳೊಂದಿಗೆ ಮಕ್ಕಳಿಗಾಗಿ ಪ್ರದರ್ಶಿಸುವ ನಾಟಕಗಳನ್ನು ಆಹ್ವಾನಿಸುತ್ತಿದ್ದೇವೆ.

ಈ ಉತ್ಸವದಲ್ಲಿ ಭಾಗವಹಿಸಲು ಇಚ್ಛೆಯುಳ್ಳ ರಂಗತಂಡಗಳು ರಂಗಾಯಣದ ವೆಬ್‌ ಸೈಟ್ rangayanamysore.karnataka.gov.in  ನಲ್ಲಿ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ತಮ್ಮ ತಂಡ ಹಾಗೂ ನಾಟಕದ ವಿವರಗಳನ್ನು ಭರ್ತಿ ಮಾಡಿ, ನಾಟಕದ ಪೆನ್‌ಡ್ರೈವ್‌ನ್ನು ಲಗತ್ತಿಸಿ ದಿನಾಂಕ:25-11-2025 ರೊಳಗಾಗಿ ರಂಗಾಯಣಕ್ಕೆ ತಲುಪುವಂತೆ ಕಳುಹಿಸಿಕೊಡಲು ಕೋರಿದೆ. ರಂಗಾಯಣದ ಇ-ಮೇಲ್ ವಿಳಾಸ bahuroopifestival@gmail.com ಗೆ ನಾಟಕದ ಯೂಟ್ಯೂಬ್ ಲಿಂಕನ್ನೂ ಕಳುಹಿಸಬಹುದು. ಈ ಉತ್ಸವಕ್ಕೆ ಆಯ್ಕೆಯಾಗುವ ನಾಟಕ ತಂಡಗಳಿಗೆ ರಂಗಾಯಣದ ನಿಯಮಾನುಸಾರ ಗೌರವ ಸಂಭಾವನೆ, ಪ್ರಯಾಣ ವೆಚ್ಚ ಪಾವತಿಸಲಾಗುವುದು. ಸ್ಥಳೀಯ ಆತಿಥ್ಯ ವ್ಯವಸ್ಥೆಯನ್ನು ಮಾಡಲಾಗುವುದು. ಆಯ್ಕೆಯಾಗುವ ತಂಡಗಳಿಗೆ ಉಳಿದ ವಿವರಗಳನ್ನು ಪತ್ರದ ಮೂಲಕ ತಿಳಿಸಲಾಗುವುದು.

https://rangayanamysore.karnataka.gov.in/uploads/media_to_upload1762174493.pdf

– ಸತೀಶ್ ತಿಪಟೂರು, ನಿರ್ದೇಶಕ, ರಂಗಾಯಣ, ಮೈಸೂರು

#ಬಹುರೂಪಿ_2026 #ರಂಗಾಯಣ #ಮೈಸೂರು

Leave a Reply