ಬೆಂಗಳೂರು: ಕನ್ನಡದ ಬಲಪಂಥೀಯ ಕಾದಂಬರಿಕಾರ ಎಸ್ ಎಲ್ ಭೈರಪ್ಪ(94) ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಕಾಲವಶರಾಗಿದ್ದಾರೆ. ಅವರು ಪತ್ನಿ ಸರಸ್ವತಿ, ಪುತ್ರರಾದ ರವಿಶಂಕರ್ ಮತ್ತು ಉದಯಶಂಕರ್ ಅವರನ್ನು ಅಗಲಿದ್ದಾರೆ. ಮೃತರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ರಾಜ್ಯದ ಮತ್ತು ದೇಶದ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
- ಸರ್ವಜನಾಂಗದ ಶಾಂತಿಯ ತೋಟವೇ ನಮ್ಮ ಗುರಿ: ಸಿದ್ದರಾಮಯ್ಯ
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
ಪದ್ಮಭೂಷಣ, ಪದ್ಮಶ್ರೀ, ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು. ಬಲಪಂಥೀಯ ವಿಷಯ, ನಿರೂಪಣೆ, ಚಿಂತನೆಗಳಿಂದಲೇ ಅವರು ಪ್ರಚಾರದಲ್ಲಿ ಇದ್ದರು.
ಭೈರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥಕರಾಗಿದ್ದರು.
ಕಾದಂಬರಿಗಳು:
ಭೀಮಕಾಯ
ಬೆಳಕು ಮೂಡಿತು
ಧರ್ಮಶ್ರೀ – (೧೯೬೧)
ದೂರ ಸರಿದವರು- (೧೯೬೨)
ಮತದಾನ – (೧೯೬೫)
ವಂಶವೃಕ್ಷ- (೧೯೬೫)
ಜಲಪಾತ – (೧೯೬೭)
ನಾಯಿ ನೆರಳು- (೧೯೬೮)
ತಬ್ಬಲಿಯು ನೀನಾದೆ ಮಗನೆ-(೧೯೬೮)
ಗೃಹಭಂಗ-(೧೯೭೦)
ನಿರಾಕರಣ-(೧೯೭೧)
ಗ್ರಹಣ-(೧೯೭೨)
ದಾಟು -(೧೯೭೩)
ಅನ್ವೇಷಣ-(೧೯೭೬)
ಪರ್ವ-(೧೯೭೯)
ನೆಲೆ -(೧೯೮೩)
ಸಾಕ್ಷಿ -(೧೯೮೬)
ಅಂಚು-(೧೯೯೦)
ತಂತು -(೧೯೯೩)
ಸಾರ್ಥ-(೧೯೯೮)
ಮಂದ್ರ-(೨೦೦೧)
ಆವರಣ-(೨೦೦೭)
ಕವಲು – (೨೦೧೦)
ಯಾನ – (೨೦೧೪)
ಉತ್ತರಕಾಂಡ-(೨೦೧೭)
ಆತ್ಮ ಚರಿತ್ರೆ: ಭಿತ್ತಿ
ತತ್ತ್ವಶಾಸ್ತ್ರ ಸಂಬಂಧಿ ಕೃತಿಗಳು
ಸತ್ಯ ಮತ್ತು ಸೌಂದರ್ಯ (೧೯೬೬) – ಪಿ.ಎಚ್.ಡಿ ಪ್ರಬಂಧ
ಸಾಹಿತ್ಯ ಮತ್ತು ಪ್ರತೀಕ (೧೯೬೭)
ಕಥೆ ಮತ್ತು ಕಥಾವಸ್ತು (೧೯೬೯)
ಸಂದರ್ಭ: ಸಂವಾದ (೨೦೧೧)
ಇತರೆ:
ನಾನೇಕೆ ಬರೆಯುತ್ತೇನೆ? (೧೯೮೦)
ಇತರ ಭಾಷೆಗಳಿಗೆ ಅನುವಾದವಾಗಿರುವ ಕಾದಂಬರಿಗಳು:
ಧರ್ಮಶ್ರೀ – ಸಂಸ್ಕೃತ, ಮರಾಠಿ
ವಂಶವೃಕ್ಷ – ತೆಲುಗು, ಮರಾಠಿ, ಹಿಂದಿ, ಉರ್ದು, ಇಂಗ್ಲೀಷ್
ನಾಯಿ ನೆರಳು – ಗುಜರಾತಿ, ಹಿಂದಿ
ತಬ್ಬಲಿಯು ನೀನಾದೆ ಮಗನೆ – ಹಿಂದಿ
ಗೃಹಭಂಗ – ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದ
ನಿರಾಕರಣ – ಹಿಂದಿ
ದಾಟು – ಇಂಗ್ಲೀಷ್, ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದ
ಅನ್ವೇಷಣ – ಹಿಂದಿ,ಮರಾಠಿ
ಪರ್ವ -ಹಿಂದಿ, ಮರಾಠಿ, ಇಂಗ್ಲೀಷ್, ತೆಲುಗು, ಬೆಂಗಾಲಿ, ತಮಿಳು
ನೆಲೆ -ಹಿಂದಿ
ಸಾಕ್ಷಿ – ಹಿಂದಿ, ಇಂಗ್ಲೀಷ್
ಅಂಚು -ಹಿಂದಿ, ಮರಾಠಿ
ತಂತು -ಹಿಂದಿ, ಮರಾಠಿ
ಸಾರ್ಥ – ಹಿಂದಿ, ಮರಾಠಿ, ಇಂಗ್ಲೀಷ್, ಸಂಸ್ಕೃತ
ನಾನೇಕೆ ಬರೆಯುತ್ತೇನೆ – ಮರಾಠಿ
ಸತ್ಯ ಮತ್ತು ಸೌಂದರ್ಯ – ಇಂಗ್ಲೀಷ್
ಭಿತ್ತಿ – ಹಿಂದಿ, ಮರಾಠಿ
ಚಲನಚಿತ್ರವಾಗಿರುವ ಕಾದಂಬರಿಗಳು:
ವಂಶವೃಕ್ಷ – ೧೯೭೨
ತಬ್ಬಲಿಯು ನೀನಾದೆ ಮಗನೆ – ೧೯೭೭
ಮತದಾನ – ೨೦೦೧
ನಾಯಿ ನೆರಳು – ೨೦೦೬
ಟಿ.ವಿ. ಧಾರಾವಾಹಿಯಾಗಿರುವ ಕಾದಂಬರಿಗಳು:
ಗೃಹಭಂಗ
ದಾಟು (ಹಿಂದಿ)
ಪ್ರಶಸ್ತಿ/ಗೌರವಗಳು:
೨೦೨೩ ರಲ್ಲಿ ಪದ್ಮಭೂಷಣ ಪ್ರಶಸ್ತಿ
ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ – ೨೦೧೪
ನಾಡೋಜ ಪ್ರಶಸ್ತಿ – ೨೦೧೧
ಸರಸ್ವತಿ ಸಮ್ಮಾನ್ ಪ್ರಶಸ್ತಿ (ಮಂದ್ರ ಕಾದಂಬರಿಗೆ)- ೨೦೧೦
ಪಂಪ ಪ್ರಶಸ್ತಿ – ೨೦೦೫
ಎನ್ ಟಿ ಆರ್ ರಾಷ್ಟ್ರೀಯ ಪ್ರಶಸ್ತಿ- ೨೦೦೭
ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ – ೨೦೦೭
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದಾಟು ಕಾದಂಬರಿಗೆ)- ೧೯೭೫
ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ವಂಶವೃಕ್ಷ ಕಾದಂಬರಿಗೆ) – ೧೯೬೬
ವಾಗ್ವಿಲಾಸಿನಿ ಪುರಸ್ಕಾರ್ (ದೀನನಾಥ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ)- ೨೦೧೨ (ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ ಅವರು ತಮ್ಮ ತಂದೆ ದೀನನಾಥ ಮಂಗೇಶ್ಕರ್ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಸ್ಮೃತಿ ಪ್ರತಿಷ್ಠಾನ ಈ ಪುರಸ್ಕಾರ ನೀಡುತ್ತಿತ್ತು. ಇದುವರೆಗೂ 20 ಲೇಖಕರಿಗೆ ಈ ಪುರಸ್ಕಾರ ನೀಡಲಾಗಿದ್ದು ಅವರಲ್ಲಿ 18 ಮರಾಠಿ ಲೇಖಕರು ಹಾಗೂ ಇಬ್ಬರು ಸಿನಿಮಾ ಸಾಹಿತ್ಯ ಕ್ಷೇತ್ರದ ಜಾವೆದ್ ಅಖ್ತರ್ ಮತ್ತು ಮಜರೂರ ಸುಲ್ತಾನಪುರಿ ಸೇರಿದ್ದಾರೆ. ಮಹಾರಾಷ್ಟ್ರದಾಚೆಗಿನ ಲೇಖಕರೊಬ್ಬರಿಗೆ ನೀಡುತ್ತಿರುವ ಮೊದಲ ಸಂದರ್ಭ ಇದಾಗಿದೆ)
ರಾಷ್ಟ್ರೀಯ ಪ್ರಾಧ್ಯಾಪಕ (ನ್ಯಾಷನಲ್ ಪ್ರೊಫೆಸರ್)
ಸಾಹಿತ್ಯ ಅಕಾಡೆಮಿ ಫೆಲೋ ಗೌರವ




