ಅಧಿಕಾರದಲ್ಲಿರುವ ಜನರಿಗೆ ಅಹಂಕಾರವಿರಬಾರದು, ಅಂತರಂಗ ಶುದ್ಧಿ ಇರಬೇಕು, ಸ್ವಾರ್ಥದ ಭಾವವಿರಬಾರದು, ಅಧಿಕಾರದ ಮೋಹವು ಇರಬಾರದು, ಉತ್ತರಾಧಿಕಾರಿ ಕೇವಲ ಕೇವಲ ಹಿಂಬಾಲಕರಲ್ಲ, ವಂಶದ ಕುಡಿಗಳಲ್ಲ, ಪ್ರಮಾಣಕನಾಗಿರಬೇಕು ಮಾದರಿ ವ್ಯಕ್ತಿತ್ವ ಹೊಂದಿರುವವರು ಆಗಬೇಕು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ದೇಹ ಕಬ್ಬಿಣದಷ್ಟು ಬಲಿಷ್ಠವಾಗಿರಬೇಕು ಜೊತೆಗೆ ಹೃದಯ ಹೂವಿನಷ್ಟು ಮೃದುವಾಗಿರಬೇಕು.
ಮನಸ್ಸು ನಿರ್ಧಾರಗಳನ್ನು ಕೈಕೊಳ್ಳುವ ವೇಳೆಯಲ್ಲಿ ಸದೃಢವಾಗಿರಬೇಕು ಜೊತೆಗೆ ಆಲೋಚನೆಗಳು ಶುದ್ಧವಾಗಿರಬೇಕು.
ಕೇವಲ ಸಂಪತ್ತು ಇದ್ದರೆ ಸಾಲದು ಜೊತೆಗೆ ಮನುಷ್ಯತ್ವವು ಇರಬೇಕು, ಹಂಚುವ ಬುದ್ಧಿ ಪ್ರಚಾರವಿಲ್ಲದ ಗುಣದಿಂದ ತುಂಬಿರಬೇಕು.
ಸಾಧಕರಿಗೆ ಸೌಜನ್ಯವಿರಬೇಕು, ಜೊತೆಗೆ ಸಂಸ್ಕಾರವು ಇರಬೇಕು, ಇವುಗಳಿಂದ ಇವರನ್ನು ಮತ್ತಷ್ಟು ಎತ್ತರಕ್ಕೆ ಏರಿಸುತ್ತದೆ, ಇವುಗಳು ಮಾಯವಾದರೆ ದೊಡ್ಡ ಸಾಧಕರು ಪಾತಾಳಕ್ಕೆ ಬೀಳುತ್ತಾರೆ.
ಪರರಿಂದ ಒಳ್ಳೆಯ ಮಾತುಗಳನ್ನು ಬಯಸುವವರು ಮೊದಲು ತಾವು ಎಲ್ಲರ ಬಗ್ಗೆ ಒಳ್ಳೆಯ ಮಾತುಗಳನ್ನಾಡುವವರಾಗಿರಬೇಕು.
ಪರವಿಂದ ನೆರವು ಬಯಸುವವರು ತಮಗೆ ಸಂದರ್ಭದ, ಅವಕಾಶಗಳು ದೊರಕಾದ ಸಾಧ್ಯತೆಗಳಿದ್ದಾಗ ಅನ್ಯರಿಗೆ ನೆರವು ಮಾಡುವ ಮನಸ್ಸು ಇರಬೇಕು.
ಅನ್ಯರ ತಪ್ಪುಗಳನ್ನು ಸದಾ ಎತ್ತಿ ತೋರಿಸುವವರು ಮೊದಲು ತಾವು ತಪ್ಪು ಹೆಜ್ಜೆ ಇಡದಂತೆ ಪ್ರತಿ ಕ್ಷಣವೂ ಎಚ್ಚರಿಕೆಯಿಂದ ನಡೆಯುವವರಾಗಿರಬೇಕು.
ತುಲನೆ ಮಾಡಿದಷ್ಟು, ಗ್ರಹಿಸಿದಷ್ಟು, ಅಭಿಪ್ರಾಯ ವ್ಯಕ್ತಪಡಿಸುವಷ್ಟು ಸರಳವಾಗಿರುವುದಿಲ್ಲ ನಾವು ತುಲನೆ ಮಾಡುವ ವ್ಯಕ್ತಿಗಳ ವ್ಯಕ್ತಿತ್ವ, ಗ್ರಹಿಸುವ ವಿಚಾರ, ವ್ಯಕ್ತಪಡಿಸುವ ನಡವಳಿಕೆಗಳ ಸಂದರ್ಭ.
– ಕೆ ಎಸ್ ನಾಗರಾಜ್, ಬೆಂಗಳೂರು




