ಬಿಬಿಎಂಪಿ, ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರಿಂದ ಸಾಮೂಹಿಕ ಪ್ರತಿಭಟನೆ

1 year ago

ಹೋರಾಟಕ್ಕೆ ಪೌರ ಕಾರ್ಮಿಕರ ಸಂಘಟನೆಗಳ ಬೆಂಬಲ

ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭವೃದ್ದಿ ಸಂಘ ಮತ್ತು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು ವತಿಯಿಂದ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಜುಲೈ 8ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬಿಬಿಎಂಪಿ ನೌಕರರ ಭವನದಲ್ಲಿ  ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್, ಸಂಘದ ಪದಾಧಿಕಾರಿಗಳು, ಸದಸ್ಯರ ಪೂರ್ವಭಾವಿ ಸಭೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಎ.ಅಮೃತ್ ರಾಜ್, ಬಿಬಿಎಂಪಿಯಲ್ಲಿ 12 ಬೇಡಿಕೆ ಮತ್ತು 10 ಮಹಾನಗರ ಪಾಲಿಕೆಯ 6 ಬೇಡಿಕೆಗಳ ಈಡೇರಿಕೆಗಾಗಿ ಬಿಬಿಎಂಪಿ ಮತ್ತು 10 ಮಹಾನಗರ ಪಾಲಿಕೆಯ ಅಧಿಕಾರಿ, ನೌಕರರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ಮಾಡಲಿದ್ದೇವೆ ಎಂದರು.

ಕಛೇರಿ ಮತ್ತು ಹೊರಗಡೆ ಕೆಲಸ ನಿರ್ವಹಿಸುತ್ತಿರುವುದರಿಂದ ಲಾಫ್ ಆಫ್ ಪದ್ದತಿ ಬಿಡಬೇಕು, 6000 ಅಧಿಕಾರಿ ಸಿಬ್ಬಂದಿ ಕೊರತೆ ಇದೆ. ಕೊರತೆ ಭರ್ತಿ ಮಾಡಬೇಕು ಹಾಗೂ
ವಿದ್ಯಾ ಇಲಾಖೆ ಪ್ರಾಂಶುಪಾಲರು, ಮುಖ್ಯೋಪಾಧ್ಯಯರು ಮೇಲಿನ ಇಲಾಖೆ ವಿಚಾರಣೆ ಕೈಬಿಡಬೇಕು. ಸಹಾಯಕ ಕಾರ್ಯಪಾಲಕ, ಕಾರ್ಯಪಾಲಕ ಅಭಿಯಂತರುಗಳಿಗೆ ಮುಂಬಡ್ತಿ ನೀಡಬೇಕು, ಇ-ಆಸ್ತಿ  ನೋಂದಣಿ ಪದ್ದತಿ ಈ ಹಿಂದೆ ಇರುವ ನಿಯಮದಂತೆ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಆರೋಗ್ಯ ಸೌಲಭ್ಯ ಪಾಲಿಕೆ ನೌಕರರಿಗೆ ಯೋಜನೆ ಜಾರಿಯಾಗಬೇಕು, ಎರವಲು ಸೇವೆ ಅಧಿಕಾರಿಗಳು ಮಾತೃ ಇಲಾಖೆಗೆ ವರ್ಗಾವಣೆ ಮಾಡಬೇಕು. ನೌಕರರ ಜೇಷ್ಠತಾ ಪಟ್ಟಿ ಅಂತಿಮಗೊಳಿಸಬೇಕು. ಹೆಲ್ತ್ ಸೂಪರ್ ವೈಸರ್ ಗಳಿಗೆ ವಾಣಿಜ್ಯ ಪರವಾನಗಿ ನೀಡುವ ಅಧಿಕಾರ ನೀಡಬೇಕು, ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಮಾರ್ಷಲ್ ಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

7ನೇ ವೇತನ ಆಯೋಗವನ್ನು ಮಹಾನಗರ ಪಾಲಿಕೆ ನೌಕರರಿಗೆ ವಿಸ್ತರಣೆ, ವೃಂದ ಮತ್ತು ನೇಮಕಾತಿಯಲ್ಲಿ ತಿದ್ದುಪಡಿ ಹಾಗೂ ಕೆಜಿಐಡಿ ಮತ್ತು ಜಿಪಿಎಫ್ ಸೌಲಭ್ಯ ಹಾಗೂ ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಾಗಬೇಕು. ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರಿಗೆ ಪ್ರತಿವರ್ಷ ಕ್ರೀಡಾಕೂಟ ಆಯೋಜನೆ ಮಾಡಬೇಕು. ಮಹಾನಗರ ಪಾಲಿಕೆಯಲ್ಲಿ ಹಲವಾರು ವರ್ಷಗಳಿಂದ ಮುಂಬಡ್ತಿ ನೀಡಿಲ್ಲ ಇಷ್ಟು ಬೇಡಿಕೆ ಈಡೇರಿಕೆಗಾಗಿ ಬಿಬಿಎಂಪಿ ಮತ್ತು 10 ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ಮಾಡಲಿದ್ದೇವೆ ಎಂದರು.

ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆಗಳ ಪೌರ ಕಾರ್ಮಿಕರ ಮಹಾಸಂಘ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ವಚ್ಚತಾ ಪೌರ ಕಾರ್ಮಿಕರ ಮಹಾಸಂಘ ಸಂಪೂರ್ಣ ಬೆಂಬಲ ನೀಡಿದೆ.

ಉಪಾಧ್ಯಕ್ಷ ಕೆ.ಜಿ.ರವಿ ಮತ್ತು ಸಾಯಿಶಂಕ‌ರ್, ಎಸ್.ಜಿ.ಸುರೇಶ್, ಎ.ಜೆ.ಬಾಬು, ಎಂ.ಎಲ್.ಎ.ಮಂಜುನಾಥ್, ರುದ್ರೇಶ್‌, ಸಂತೋಷ್ ಕುಮಾರ್ ನಾಯಕ್, ತಿಪ್ಪೇಶ್, ರೇಣುಕಾಂಬ, ಕೆ.ನರಸಿಂಹ, ಶ್ರೀಧ‌ರ್, ಹೆಚ್.ಬಿ.ಹರೀಶ್, ಮಾರ್ಕೆಟ್ ಮಂಜುನಾಥ್‌ ಸದಸ್ಯರು ಹಾಜರಿದ್ದರು.

Leave a Reply