ಜಾತಿ ಎಲ್ಲಿದೆ ಅನ್ನೋರು ತಮ್ಮ ವಿಶ್ವಮಾನವ ಮೆದುಳನ್ನು ಸ್ವಲ್ಪ ಈ ಕಡೆ ತಿರುಗಿಸಿ ನೋಡಬೇಕಾಗಿ ವಿನಂತಿ. ಈ ವರದಿಯನ್ನು ನೋಡಿದ್ದಾಗಿಯೂ ನಿಮ್ಮ ಮನಸ್ಸು ಬದಲಾಗದಿದ್ದರೆ, ಆ ನಿಮ್ಮ ವಿಶ್ವಮಾನವ ಮೆದುಳು ಕೆಟ್ಟು ಕೆರಹಿಡಿದು ಬಹಳ ವರ್ಷಗಳೇ ಆಗಿ ಹೋಗಿವೆ ಎಂದು ತೀರ್ಮಾನಕ್ಕೆ ಬರಬೇಕೆಂದು ಮತ್ತೊಮ್ಮೆ ವಿನಂತಿ !!!
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಹಾಗೆ ಸ್ವಲ್ಪ ಗಮನಿಸಿ, ಹಿಂದುಸ್ತಾನಿ ಸಂಗೀತ ಗೋಷ್ಠಿಗಳಲ್ಲಿ, ದೇಶಭಕ್ತಿ ಪಠಿಸುವ ಸಭೆ ಸಮಾರಂಭಗಳಲ್ಲಿ, ಯುನಿವರ್ಸಿಟಿ ಕ್ಯಾಂಪಸ್ ಗಳಲ್ಲಿ, ತಮ್ಮ ಜಾತಿಗೆ ನೇತು ಹಾಕಿಕೊಂಡಿರುವ ಮಠ ಮಂದಿರಗಳಲ್ಲಿ, ತಮ್ಮ ಜಾತಿಯವರೇ ಸೇರುವ ಹೋಟೆಲ್, ಕ್ಲಬ್ ಗಳಲ್ಲಿ, ತಮ್ಮ ಮಕ್ಕಳಿಗೆ ತಮ್ಮ ಜಾತಿಯಲ್ಲೇ ಜಾತಿ ಕನ್ನಡಕದ ಮೂಲಕ ಹುಡುಕಿ ಮದುವೆ ಮಾಡುವ ಫ್ಯಾಮಿಲಿಗಳಲ್ಲಿ, ರಾತ್ರಿ ಟಿವಿಯಲ್ಲಿ ಬರುವ ಧಾರವಾಹಿಗಳಲ್ಲಿ ಇನ್ನೂ ಇತ್ಯಾದಿ ಎಲ್ಲಾ ಕಡೆಯೂ ಕೇಳಿಸುವ ಒಂದೇ ಮಾತು… ಜಾತಿಗೀತಿ ಅನ್ನೋದೆಲ್ಲ ಯಾವ್ದು ಇಲ್ಲ, ಮನುಷ್ಯರೆಲ್ಲ ಒಂದೇ! ಈ ಮೀಸಲಾತಿಯಿಂದ ಜಾತಿ ಜಾಸ್ತಿ ಆಯ್ತಾ ಇದೆ. ಈ ಮೀಸಲಾತಿನ ಮೊದ್ಲು ತೆಗೆದುಹಾಕುದ್ರೆ ಅವತ್ತು ಜಾತಿ ಕೊನೆ ಆಯ್ತದೆ…. ಈ ಮಾತನ್ನು ಭಾರತದ ಶೇಕಡ 90ರಷ್ಟು ಜನ ಮಗ್ಗಿ ಪುಸ್ತಕದ ತರ ಬಾಯಿ ಪಾಠ ಮಾಡ್ಕೊಂಡ್ ಮಾತಾಡೋದ್ನ ನಾವ್ ನಿತ್ಯ ಕೇಳುತ್ತಾನೆ ಇರ್ತೀವಿ…
ಭಾರತದ ಬಹುತೇಕ ಮುಂದುವರೆದ ನಗರ ಪ್ರದೇಶಗಳಲ್ಲಿ ತುಂಬಾ ಜನ ತಮ್ಮ ಮನೆ ಮುಂದಿನ ಗೇಟ್ ಗೆ “ಓನ್ಲಿ ವೆಜ್” ಅಂತ ದಪ್ಪದಾಗಿ ಬೋರ್ಡ್ ಹಾಕಿಕೊಂಡು; ಜಾತಿಗೀತಿ ಅನ್ನೋದೆಲ್ಲ ಯಾವ್ದು ಇಲ್ಲ, ಮನುಷ್ಯರೆಲ್ಲ ಒಂದೇ! ಅಂತ ತಮ್ಮದೇ ಬುದ್ಧಿಯ ಪಕ್ಕದ ಮನೆಯವರ ಜೊತೆ ಮಾತಾಡೋದ್ನ ದಿನ ನೋಡ್ತಾನೆ ಇರ್ತೀವಿ… ಆ ಫಿಲಾಸಫಿ ಕೇಳೋಕೆ ಎಷ್ಟು ಚೆನ್ನಾಗಿರುತ್ತೆ ಅಂದ್ರೆ, ಅಂಬೇಡ್ಕರ್ ಬುದ್ಧ ಈತರದ ಚಳುವಳಿಯ ತೇವ ಯಾವ್ದು ಇಲ್ದೇನೆ, ಬರೀ ಈ ಕ್ರಿಕೆಟ್ ಧಾರಾವಾಹಿ ಕಾಮಿಡಿ ಕಿಲಾಡಿಗಳನ್ನ ನೋಡ್ಕೊಂಡು ತಿರುಗಾಡೊ ಜನಕ್ಕೆ ನಿಜ ಅನ್ನಿಸಿಬಿಡುತ್ತೆ !

ಜಾತಿ ಬಗ್ಗೆ ಮಾತಾಡಿದ್ರೆ ಜಾತಿ ಜಾಸ್ತಿ ಆಯ್ತದೆ, ಅನ್ನೋ ಮಹಾಪಂಡಿತರ ಈ ಟೀಮ್ ಏನ್ ಕಮ್ಮಿ ಇಲ್ಲ. ಜಾತಿ ಬಗ್ಗೆ ಮಾತಾಡೋದನ್ನ ನಿಲ್ಸ್ಬಿಟ್ರೆ ಜಾತಿ ಹೋಗ್ಬಿಡುತ್ತೆ, ಈ ಎಸ್ಸಿ ಎಸ್ಟಿಗಳು ಜಾತಿ ಬಗ್ಗೆ ಮಾತಾಡಿ ಮಾತಾಡಿ ಜಾತಿನ ಜಾಸ್ತಿ ಮಾಡ್ತಾವ್ರೆ, ಮೊದ್ಲು ಜಾತಿ ಬಗ್ಗೆ ಮಾತಾಡೋದನ್ನ ನಿಲ್ಸ್ಬೇಕು ಅಂತ ಉಪದೇಶ ನೀಡುವ ಇವರು, ಸಂಜೆ ಆದ್ಮೇಲೆ ತಮ್ ತಮ್ ಜಾತಿ ಅವರನ್ನೆಲ್ಲ ಒಂದು ಕಡೆ ಸೇರ್ಕೊಂಡು ಜಾತಿಯ ಹೆಸರಲ್ಲಿ ಲೇಔಟ್ ಗಳನ್ನು ನಿರ್ಮಾಣ ಮಾಡಲು ಸಭೆ ನಡೆಸುತ್ತಾರೆ… ಆ ಸಭೆಯಲ್ಲಿ ಕೊನೆಗೊಂದ್ ತೀರ್ಮಾನಕ್ಕೆ ಬರ್ತಾರೆ, ನಮ್ ಲೇಔಟ್ ಗೆ ಯಾರನ್ನ ಬೇಕಾದರೂ ಸೇರಿಸಿಕೊಳ್ಳೋಣ ಅಭ್ಯಂತರವಿಲ್ಲ ಆದರೆ ಎಸ್ಸಿ ಎಸ್ಟಿಗಳನ್ನು ಹೊರತುಪಡಿಸಿ ಅಂತ ಷರಾ ಬರೆದು ಬಿಡ್ತಾರೆ.
ಜಾತಿ ಎಲ್ಲಿದೆ ಅನ್ನೋರು ಮೊದಲು ಹೋಗೋದು ತಮ್ಮ ಜಾತಿ ಬೋರ್ಡ್ ಇರುವ ಕಡೆಗಿನ ಹೋಟೆಲ್ಗಳಿಗೆ. ಆ ಹೋಟೆಲಲ್ಲಿ ಊಟ ಮಾಡ್ತಾ ಮಾಡ್ತಾ ತಮ್ಮಗಳ ಮಕ್ಕಳಿಗೆ ವಿವಾಹ ಸಂಬಂಧ ಕುದುರಿಸಿ ಬಿಡ್ತಾರೆ, ಮದ್ವೇಲಿ ಅಡಿಗೆ ಮಾಡುವ ಭಟ್ರುನೂ ನಮ್ಮೋನೆ ಆಗ್ಬೇಕು ಅಂತ ಹಠ ಹಿಡಿತಾರೆ. ಆಮೇಲೆ ಅದನ್ನೆಲ್ಲ ಮುಗಿಸಿಕೊಂಡು ವಾಪಸ್ ಮನೆಗೆ ಹೋಗುವಾಗ ರಸ್ತೆಯ ಪುಟ್ಪಾತ್ ಮೇಲೆ ಮಲಗಿರುವ ಜನಗಳ್ನ ನೋಡ್ಕೊಂಡು ಈ ಜಾತಿ ಜನಗಳ್ ಕಥೆನೇ ಇಷ್ಟು, ಇವರಿಂದಲೇ ಇವತ್ತು ಜಾತಿ ಜಾಸ್ತಿ ಆಯ್ತಾ ಅದೆ ಅಂತ ಗಂಭೀರವಾಗಿ ಮಾತಾಡ್ಕೋತಾರೆ…!!! ಆಮೇಲೆ ಒಂದ್ ಸತ್ಯ ಹೇಳಬೇಕು ಅಂದ್ರೆ ಇಂಡಿಯಾದ ಜಗತ್ತು ನಡಿತಾ ಇರೋದೆ ಹಿಂಗೇನೆ ?
ಕೊನೆಯ ಮಾತು: “ಜಾತಿ ಎಲ್ಲಿದೆ” ಅನ್ನೋರ್ನ ಮೊದ್ಲು ಕರೆದು ಅವರ ಮೆದುಳನ್ನು ಬಿಚ್ಚಿ ಬಾಬಾಸಾಹೇಬರ ಚಿಂತನೆಗಳಿಂದ ರಿಪೇರಿ ಮಾಡಬೇಕಿದೆ?
– ಡಾ. ಸುರೇಶ ಗೌತಮ್, ಸಾಮಾಜಿಕ ಹೋರಾಟಗಾರರು




