ನಟ ಕಮಲ ಹಾಸನ್ ಅವರೇ ಪ್ರೀತಿಯಿಂದಲೇ ಕ್ಷಮೆ ಕೇಳಿ: ಸಿ.ಎಂ.ನರಸಿಂಹಮೂರ್ತಿ 

11 months ago

ಚಾಮರಾಜನಗರ: ಕನ್ನಡ ಭಾಷೆ ಕುರಿತು ಹಗುರವಾಗಿ ಮಾತನಾಡಿರುವ ನಟ ಕಮಲ ಹಾಸನ್ ಅವರು ಪ್ರೀತಿಯಿಂದಲೇ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಅಂತರರಾಷ್ಟ್ರೀಯ ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕನ್ನಡ ಭಾಷೆ ಕುರಿತ ನನ್ನ ಹೇಳಿಕೆಗೆ ಅದರ ಮೇಲೆ ನನಗಿರುವ ಪ್ರೀತಿಯೇ ಕಾರಣ ಎಂದು ಹೇಳಿಕೆ ನೀಡಿರುವ ನಟ ಕಮಲ ಹಾಸನ್ ಅವರು ಭಾರತೀಯ ಚಲನಚಿತ್ರ ರಂಗದ ಜನಪ್ರಿಯ ನಟರು. ಅವರ ಮೇಲಿನ ಪ್ರೀತಿಯಿಂದಲೇ ಈ ಮಾತನ್ನು ಹೇಳುತ್ತಿದ್ದೇವೆ ಎಂದಿದ್ದಾರೆ.

ಕನ್ನಡದ ನೆಲ, ಜಲ, ಭಾಷೆ ವಿಚಾರದಲ್ಲಿ ಯಾರೇ ಹಗುರವಾಗಿ ಮಾತನಾಡುವುದನ್ನು ಕನ್ನಡಿಗರು ಎಂದೂ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದಿದ್ದಾರೆ. 

ಕಮಲಹಾಸನ್ ಅವರು, ಕನ್ನಡ ಭಾಷೆಯ ಉಗಮದ ಬಗ್ಗೆ ನೀಡಿದ ಈ ಹೇಳಿಕೆಯು ಕನ್ನಡಿಗರಿಗೆ ನೋವನ್ನುಂಟು ಮಾಡಿದೆ. ಅವರು ಈ ಕೂಡಲೇ ಕನ್ನಡಿಗರ ಬಳಿ ಕ್ಷಮೆಯಾಚಿಸುವ ಜೊತೆಗೆ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply