ಕ್ಷೇತ್ರ ಮಟ್ಟದಲ್ಲಿನ ಅಧಿಕಾರಿ ಸಿಬ್ಬಂದಿಗಳು ಕಂದಾಯ ಇಲಾಖೆ ಸೈನಿಕರು
ಧಾರವಾಡ: ಕಂದಾಯ ಇಲಾಖೆಗೆ ಸಾವಿರಾರು ವರ್ಷಗಳ ಇತಿಹಾಸ, ಪರಂಪರೆ ಇದೆ. ಬ್ರಿಟಿಷ್ ಕಾಲದಲ್ಲಿ ಕಂದಾಯ ಇಲಾಖೆಗೆ ಶಿಸ್ತು, ನಿಯಮಾವಳಿ, ಪ್ರೋಟೋಕಾಲ್ ರೂಪಿಸಲಾಯಿತು. ಇಂತಹ ಮಹತ್ವದ ಇಲಾಖೆಗೆ ಕ್ಷೇತ್ರಮಟ್ಟದಲ್ಲಿ ಕೆಲಸ ಮಾಡುವ ಗ್ರಾಮ ಆಡಳಿತಾಧಿಕಾರಿಗಳು ಸೇರಿದಂತೆ ಎಲ್ಲ ಸಿಬ್ಬಂದಿ, ಅಧಿಕಾರಿಗಳು ಕಂದಾಯ ಇಲಾಖೆಯ ಸೈನಿಕರಿದ್ದಂತೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ನೌಕರರಿಗೆ ಕಾಲಮಿತಿ ಬಡ್ತಿ ಆದೇಶ ಪತ್ರಗಳನ್ನು ವಿತರಿಸಿ, ಮಾತನಾಡಿದರು.
ಕಂದಾಯ ಇಲಾಖೆಗೆ ಇಡೀ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಸ್ಥಾನವಿದ್ದು, ಮಾತೃ ಇಲಾಖೆ ಆಗಿದೆ. ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಕ್ಷೇಮ, ಸಂತೋಷ ಮುಖ್ಯವಾಗಿದೆ. ಎಲ್ಲರೂ ಸಂತೋಷದಿಂದ ಕೆಲಸ ಮಾಡಿದರೆ ನಿಷ್ಪಕ್ಷಪಾತವಾಗಿ, ತ್ವರಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ಬೇಡಿಕೆಗಳಲ್ಲಿ ಜಿಲ್ಲಾ ಹಂತದ ಪರಿಹರಿಸುವ ಪ್ರಕರಣಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡಲಾಗುತ್ತದೆ ಎಂದರು.
ಕಳೆದ 10, 20, 30 ವರ್ಷಗಳಿಂದ ಬಾಕಿ ಉಳಿದಿದ್ದ ಕಾಲಮಿತಿ ಬಡ್ತಿ ಆದೇಶಗಳನ್ನು ಪರಿಶೀಲಿಸಿ, 10 ವರ್ಷಗಳ 30, 15 ವರ್ಷಗಳ 20, 25 ವರ್ಷಗಳ 1, 30 ವರ್ಷಗಳ ಒಂದು ಪ್ರಕರಣ ಸೇರಿ ಎಸ್.ಡಿ.ಎ., ಎಫ್.ಡಿ.ಎ., ವಿ.ಎ ಮತ್ತು ಗ್ರೂಪ್ ಡಿ ಯ ಒಟ್ಟು 62 ಜನರಿಗೆ ಕಾಲಮಿತಿ ಮುಂಬಡ್ತಿ ನೀಡಿ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬರುವ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 10 ವರ್ಷ ಕಾಲಮಿತಿ ಬಡ್ತಿಗೆ ಬರುವ ಪ್ರಕರಣಗಳನ್ನು ತಕ್ಷಣ ವಿಲೇವಾರಿ ಮಾಡಲಾಗುತ್ತದೆ ಎಂದರು.
ಕಂದಾಯ ಭವನ ನಿರ್ಮಾಣ, ಕ್ರೀಡಾಕೂಟ ಆಯೋಜನೆ, ಕಂದಾಯ ದಿನಾಚರಣೆಗೆ ಅಗತ್ಯ ಅನುದಾನ, ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲು ಅಗತ್ಯ ಕ್ರಮ ವಹಿಸಲಾಗುತ್ತದೆ. ಕುಟುಂಬ ಜೀವನ ಮತ್ತು ವೃತ್ತಿಯನ್ನು ತೃಪ್ತಿಯಿಂದ ಮಾಡಬೇಕು. ಯಾವುದೇ ಭ್ರಷ್ಟಾಚಾರ, ಪಕ್ಷಪಾತ, ನಿಧಾನ ಗತಿ ಅನುಸರಿಸದೇ ನಿಷ್ಪಕ್ಷಪಾತವಾಗಿ ಜನ ಹಿತಕ್ಕಾಗಿ ಸರಕಾರದ ನಿಯಮಗಳ ಪ್ರಕಾರ ಕರ್ತವ್ಯ ನಿರ್ವಹಿಸಬೇಕೆಂದು ಕರೆ ನೀಡಿದರು.
ಕಂದಾಯ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ ಹಟ್ಟಿಯವರ ಮಾತನಾಡಿ, ಸಂಘದ ಪರವಾಗಿ ಜಿಲ್ಲಾಧಿಕಾರಿಗಳನ್ನು ಅಭಿನಂದಿಸಿದರು. ಸರಕಾರದ ಎಲ್ಲ ಯೋಜನೆಗಳನ್ನು ನಿಯಮಾನುಸಾರ ಅನುಷ್ಠಾನಗೊಳಿಸಿ, ಜಿಲ್ಲಾಡಳಿತಕ್ಕೆ ಉತ್ತಮ ಹೆಸರು ಕೀರ್ತಿ ತರುವುದಾಗಿ ಸಿಬ್ಬಂದಿಗಳ ಪರವಾಗಿ ಭರವಸೆ ನೀಡಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಸಚಿನ ಮಳಗಿ, ಕಂದಾಯ ಇಲಾಖೆ ನೌಕರ ಸೈಯದ್ ಬನ್ನಿಮಟ್ಟಿ, ಸಹನಾ ಪೂಜಾರಿ, ಮಂಜುನಾಥ ಬಾಗೋಡಿ, ಜಯಶ್ರೀ ಕಟ್ಟಿಮನಿ ಅವರಿಗೆ ಜಿಲ್ಲಾಧಿಕಾರಿಗಳು ಸಾಂಕೇತಿಕವಾಗಿ ಆದೇಶ ಪತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕಂದಾಯ ನೌಕರರ ಸಂಘದ ಪರವಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ನಾಸೀರ ಅಮರಗೋಳ, ಪದಾಧಿಕಾರಿ ಪ್ರವೀಣ ಕುಲಕರ್ಣಿ, ಸರಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ, ಹಿರಿಯ ಉಪಾಧ್ಯಕ್ಷ ಡಾ.ಸುರೇಶ ಹಿರೇಮಠ, ನಿರ್ದೇಶಕ ಮಹೇಶ ನಾಗವ್ವನವರ, ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ವಿರೇಶ ಪಡೆಸೂರ, ತಾಲೂಕು ಅಧ್ಯಕ್ಷ ಪರಮಾನಂದ ದಡ್ಡಿನವರ, ಶಿರಸ್ತೆದಾರ ಮಂಜುನಾಥ ಗೊಳಪ್ಪನವರ, ಪರೀಕ್ಷಿತ ಲಾಲ ಬೇಗ, ಕಂದಾಯ ನೌಕರರ ಸಂಘದ ಧಾರವಾಡ ತಾಲೂಕಾ ಅಧ್ಯಕ್ಷ ರಮೇಶ ಬಂಡಿ, ಸಹಾಯಕ ನಿರ್ದೇಶಕ ರಾಜಶೇಖರ ಕಂಠೆಪ್ಪಗೌಡರ, ಜಿಲ್ಲಾಧಿಕಾರಿಗಳ ಆಪ್ತಸಹಾಯಕರಾದ ಸಾಗರ ಪಡ್ನಿಸ್, ದರ್ಶನ ಎಸ್.ಅರಳಲೆಮಠ, ವಿನಾಯಕಸ್ವಾಮಿ ಬಿಸಳಳ್ಳಿ, ಭವಾನಿ ಗರುಡ್, ಸವಿತಾ ಬಳಗಾನೂರ ಸೇರಿದಂತೆ ಇತರ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿ ಹಾಜರಿದ್ದರು.




