ಬಾಬಾ ಸಾಹೇಬರ ಅಧ್ಯಯನ ಹೇಗಿತ್ತೆಂದರೆ ಅವರು ಏಕ ಕಾಲಕ್ಕೆ ಹಲವು ವಿಷಯಗಳ ಬಗ್ಗೆ ಚಿಂತಿಸಬಲ್ಲವರಾಗಿದ್ದರು. ವಿದೇಶಿ ನೆಲದಲ್ಲಿ ಹಲ ಬಗೆಯ ನೀರಾವರಿ ಯೋಜನೆಗಳಿಗೆ ತಮ್ಮ ಸಲಹೆಯನ್ನು ನೀಡಿದ್ದ ಬಾಬಾ ಸಾಹೇಬರ ಅಪಾರವಾದ ಅನುಭವವನ್ನು ಭಾರತದಲ್ಲಿದ್ದ ಬ್ರಿಟಿಷ್ ಪ್ರಭುತ್ವವು ಚೆನ್ನಾಗಿ ಅರಿತಿತ್ತು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
1945ರಲ್ಲಿ ಎರಡನೆ ಮಹಾಯುದ್ಧದ ನಂತರ ಈ ದೇಶದ ಕೃಷಿ, ಕೈಗಾರಿಕೆ, ಆರ್ಥಿಕ ಸ್ಥಿತಿ, ಪುನರ್ವಸತಿ ಮತ್ತು ಸೈನಿಕರ ಕಲ್ಯಾಣಕ್ಕಾಗಿ ‘ಪುನರುಜ್ಜೀವನ ಸಮಿತಿ ಸಭೆ’ ಬ್ರಿಟಿಷ್ ಗವರ್ನರ್ ಜನರಲ್ರಿಂದ ರಚಿಸಲ್ಪಟ್ಟಿತು. ಅಂಬೇಡ್ಕರ್ ಆ ಸಮಿತಿಯ ಸದಸ್ಯರಾಗಿದ್ದರು ಮತ್ತು ಅವರಿಗೆ ‘ನೀರಾವರಿ ಮತ್ತು ವಿದ್ಯುಚ್ಛಕ್ತಿ ನೀತಿ ನಿರೂ ಪಣಾ ಸಮಿತಿ’ಯ ಜವಾಬ್ದಾರಿಯನ್ನು ವಹಿಸಲಾಯಿತು.
ಆಸಕ್ತಿದಾಯಕ ವಿಷಯವೇನೆಂದರೆ ಆ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಅದ್ಭುತವಾದ ಸಾಧನೆ ಮಾಡಿದ್ದಾರೆ. 1942ರಿಂದ 1946ರ ವರೆಗೆ ಗವರ್ನರ್ ಜನರಲ್ರವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ಯಾಬಿನೆಟ್ ಮಂತ್ರಿಯ ಸ್ಥಾನ ಪಡೆದಿದ್ದ ಅವರಿಗೆ ಕಾರ್ಮಿಕ, ನೀರಾವರಿ ಮತ್ತು ವಿದ್ಯುಚ್ಛಕ್ತಿ ಇಲಾಖೆಗಳನ್ನು ವಹಿಸಲಾಗಿತ್ತು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅಂಬೇಡ್ಕರ್ರವರು ಮಾಡಿದ ಸಾಧನೆ ಬಹುತೇಕ ಜನರಿಗೆ ಗೊತ್ತಿಲ್ಲ!
ಅಥವಾ ಗೊತ್ತಾಗಲು ಬಿಟ್ಟಿಲ್ಲ. ಕುತೂಹಲಕಾರಿ ವಿಷಯವೆಂದರೆ ಈ ಅವಧಿಯಲ್ಲಿಯೇ ಅವರು ಪ್ರಸಿದ್ಧ ದಾಮೋದರ್ ಕಣಿವೆ ಯೋಜನೆ, ಹಿರಾ ಕುಡ್ ಯೋಜನೆ ಮತ್ತು ಸೋನ್ ಕಣಿವೆ ಯೋಜನೆ ಜಾರಿಗೊಳಿಸಿದ್ದು ಮತ್ತು ಇಂತಹ ಬೃಹತ್ ನೀರಾವರಿ ಯೋಜನೆ, ವಿದ್ಯುತ್ ಯೋಜನೆಗಳನ್ನು ಗಮನ ದಲ್ಲಿಟ್ಟುಕೊಂಡು ಅವರು 1944ರಲ್ಲೆ ‘ಕೇಂದ್ರೀಯ ಜಲವಿದ್ಯುತ್ ಮತ್ತು ನೀರಾವರಿ ಆಯೋಗ’ವನ್ನು ಸ್ಥಾಪಿಸಿದ್ದು.
ಇವತ್ತು ನಮ್ಮ ಮನೆಗಳೇನಾದರೂ ಬೆಳಗುತ್ತಿದ್ದರೆ, ನಮ್ಮ ಹೊಲಗಳೇನಾದರೂ ಹಸುರಿನಿಂದ ಕಂಗೊಳಿಸುತ್ತಿದ್ದರೆ ಅದು ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಮಾಡಿದ ಅದ್ಭುತ ಸಾಧನೆಯ ಫಲವಲ್ಲದೆ ಬೇರೇನೂ ಅಲ್ಲ.
ಇಂತಹ ವ್ಯಕ್ತಿಗೆ ಪದವಿ ಪುರಸ್ಕಾರಗಳ ನಂತರವೂ ಸಹ ಅಪಮಾನಗಳು ತಪ್ಪಲಿಲ್ಲ. ಅದು ಅತಿವೃಷ್ಠಿ ಉಂಟುಮಾಡುತ್ತಿದ್ದ ದಾಮೋದರ್ ನೀರಾವರಿ ನದಿಯ ಯೋಜನೆ ಕುರಿತು ಚರ್ಚಿಸುವ ಸಂದರ್ಭ. ಆಗ ಬ್ರಿಟಿಷ್ ಪ್ರಭುತ್ವದ ಅಡಿ ಕೆಲಸ ಮಾಡುತ್ತಿದ್ದ ಒಬ್ಬ ಇಂಜಿನಿಯರ್ ಜೊತೆ ಯೋಜನೆಯ ರೂಪುರೇಷೆಗಳ ಬಗ್ಗೆ ಚರ್ಚಿಸಲು ಬಾಬಾಸಾಹೇಬರು ನಿರ್ಧರಿಸಿ ಅವರಿಗೆ ಭೇಟಿ ಮಾಡಲು ಸೂಚಿಸುತ್ತಾರೆ.
ಆಗ ಈ ಮಾತು ಕೇಳಿದ ಆ ಇಂಜಿನಿಯರ್ ” ಏನು ಒಬ್ಬ ಕೆಳಜಾತಿಯವನ ಬಳಿ, ನಾನು ಚರ್ಚಿಸುವುದೇ” ಎಂದು, ಬಾಬಾ ಸಾಹೇಬರನ್ನು ಭೇಟಿ ಮಾಡಲು ಆತ ನಿರಾಕರಿಸುತ್ತಾನೆ. ಆಗ ಈ ವಿಷಯ ಪ್ರಭುತ್ವದ ಗಮನಕ್ಕೂ ಹೋಗಿ, ಆ ಇಂಜಿನಿಯರ್ ನನ್ನು ತರಾಟೆಗೆ ತೆಗೆದುಕೊಂಡ ಮೇಲೆ ಆತ ಬಾಬಾಸಾಹೇಬರನ್ನು ನೋಡಲು ಬರುತ್ತಾನೆ.
ಆಗ ಬಾಬಾ ಸಾಹೇಬರು ಕೋಪದಿಂದ “ನೋಡಯ್ಯಾ.. ಇಂಗ್ಲೆಂಡ್ ಮತ್ತು ಅಮೇರಿಕಾದಿಂದ ನಿನಗಿಂತ ಉತ್ತಮವಾದ ಇಂಜಿನಿಯರ್ ಗಳನ್ನು ಕರೆದುಕೊಂಡು ಬಂದು ಇಲ್ಲಿ ಕೆಲಸ ಮಾಡಿಸುವಷ್ಟು ಸಾಮರ್ಥ್ಯ ನನಗಿದೆ, ಆದರೆ ನಾನು ಭಾರತೀಯರೇ ಈ ಕೆಲಸ ಮಾಡುವಂತೆ ಬಯಸುತ್ತಿದ್ದೇನೆ” ಎಂದು ಹೇಳಿದಾಗ ಆಗ ಆತ ತಲೆ ತಗ್ಗಿಸಿ ಬಾಬಾಸಾಹೇಬರ ಬಳಿ ಆತ ಕ್ಷಮೆಯಾಚಿಸಿ ಅವರೊಂದಿಗೆ ಕೆಲಸ ಮಾಡಲು ತೊಡಗುತ್ತಾನೆ.
– ಡಾ. ಎಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ



