ಬೆಂಗಳೂರು ನಗರದ ನಾಗರಿಕರ ಆಸ್ತಿಗಳಿಗೆ ಈ ಖಾತಾ ನೀಡುತ್ತಿರುವ ಕಾರ್ಯಕ್ರಮ ಉತ್ತಮವಾದದ್ದು ಮತ್ತು ಇದರಿಂದ ಹಲವಾರು ರೀತಿಯ ಅಕ್ರಮಗಳು ಕೊನೆಗೊಳ್ಳುತ್ತದೆ. ಇದೇ ಸಂದರ್ಭದಲ್ಲಿ ನಾಗರಿಕರು ಮತ್ತಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಬಿಬಿಎಂಪಿ ವತಿಯಿಂದ ನಾಗರೀಕರ ಆಸ್ತಿಗಳ ವಿಭಜನೆ ಮಾಡಿಕೊಡುತ್ತಿಲ್ಲ. ಇದರಿಂದಾಗಿ ಪಿತ್ರಾರ್ಜಿತವಾಗಿ ಬಂದ ಆಸ್ತಿಗಳನ್ನು ಭಾಗವಾಗಿ ಹಂಚಿಕೊಂಡಿರುವ ಸಹೋದರ ಸಂಬಂಧಿಗಳಲ್ಲಿ, ತಮ್ಮ ಆಸ್ತಿಗಳಿಗೆ ಪ್ರತ್ಯೇಕ ಖಾತೆಯನ್ನ ಮಾಡಿಕೊಳ್ಳಲಾಗದೆ. ಕಚೇರಿಗೆ ಅಲೆಯುತ್ತಿದ್ದಾರೆ. ಅವರ ಆಸ್ತಿಗಳಿಗೆ ಪ್ರತ್ಯೇಕವಾದಂತಹ ಖಾತೆ ಆಗದಿದ್ದರೆ ಅವರು ಕಟ್ಟಡ ನಿರ್ಮಿಸಲು, ನಕ್ಷೆ ಮಂಜೂರಾತಿಯನ್ನು ಪಡೆದುಕೊಳ್ಳಲು ಮತ್ತು ಬ್ಯಾಂಕುಗಳಲ್ಲಿ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ. ಆದುದರಿಂದ ಬಿಬಿಎಂಪಿ ಆಯುಕ್ತರು ಖಾತೆ ವಿಭಜನೆಯ ಬಗ್ಗೆಯೂ ಗಮನವನ್ನು ಹರಿಸಬೇಕಾಗಿದೆ.
ಬೆಂಗಳೂರು ನಗರದಲ್ಲಿ ಅನೇಕ ಉದ್ಯಮಿಗಳು ಹಲವಾರು ಆಸ್ತಿಗಳನ್ನ ಖರೀದಿಸಿ ಆ ಆಸ್ತಿಗಳನ್ನು ಒಗ್ಗೂಡಿಸಿ ನಂತರ ವಸತಿ ಸಮುಚ್ಚಯಗಳನ್ನು ನಿರ್ಮಿಸಿ ಮಾರಾಟ ಮಾಡುವಂತಹ ವ್ಯವಹಾರವನ್ನು ನಡೆಸುತ್ತಾರೆ. ಈಗ ಬಿಬಿಎಂಪಿಯಲ್ಲಿ ಆಸ್ತಿಗಳ ಒಗ್ಗೂಡಿಸುವ ಯೋಜನೆ ನಡೆಸುತ್ತಿಲ್ಲ. ಇದರಿಂದಾಗಿ ಕಟ್ಟಡ ನಿರ್ಮಿಸುವ ಉದ್ಯಮಿಗಳಿಗೆ ಮತ್ತು ಸಂಸ್ಥೆಗಳಿಗೆ ತೊಂದರೆಯಾಗಿದೆ. ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ತಮ್ಮ ವ್ಯವಹಾರಗಳಿಗೆ ಆರ್ಥಿಕ ಹಿಂಜರಿತ ಆಗುವುದರ ಜೊತೆಗೆ, ಸಾಕಷ್ಟು ಉದ್ಯೋಗ ಕಳೆದುಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರು ಖಾತೆಗಳನ್ನು ಒಗ್ಗೂಡಿಸುವ ವಿಚಾರದಲ್ಲಿಯೂ ಗಮನವನ್ನು ಹರಿಸಬೇಕಾಗಿದೆ.
ಬೆಂಗಳೂರು ನಗರದಲ್ಲಿ ಲಕ್ಷಾಂತರ ಆಸ್ತಿಗಳಿಗೆ ಬಿ ಖಾತೆಯನ್ನು ಪಡೆದುಕೊಂಡು ಕಂದಾಯವನ್ನು ಪಾವತಿಸುತ್ತಿದ್ದಾರೆ. ಬಿ ಖಾತೆಯ ಆಸ್ತಿಗಳಿಗೆ ನಕ್ಷೆ ಮಂಜೂರಾತಿ ನೀಡುವುದಿಲ್ಲ. ಇದರಿಂದಾಗಿ ಅವರು ಅನಿವಾರ್ಯವಾಗಿ ತಮ್ಮ ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಬಿಬಿಎಂಪಿ ಅಧಿಕಾರಿಗಳು ದೂರುಗಳು ಬಂದ ಹಿನ್ನೆಲೆಯಲ್ಲಿ ಇವರ ಮೇಲೆ ಕ್ರಮ ಜರುಗಿಸಲು ಮುಂದಾಗುತ್ತಾರೆ. ಇದು ಒಂದು ದೊಡ್ಡ ಸಮಸ್ಯೆಯಾಗಿದೆ.
1995ರಲ್ಲಿ ಅಂದು ಮುಖ್ಯಮಂತ್ರಿಗಳಾಗಿದ್ದ ಎಚ್ ಡಿ ದೇವೇಗೌಡರು ಬೆಂಗಳೂರು ನಗರದ ಸಹಸ್ರಾರು ರೆವೆನ್ಯೂ ನಿವೇಶನಗಳಿಗೆ ಅಭಿವೃದ್ಧಿ ಶುಲ್ಕವನ್ನು ಪಾವತಿಸಿಕೊಂಡು ಖಾತೆಯನ್ನು ಮಾಡಿಕೊಟ್ಟರು. ಇದರಿಂದಾಗಿ ಸಹಸ್ರಾರು ಮಂದಿ ತಮ್ಮ ನಿವೇಶನಗಳಲ್ಲಿ ಮನೆಯನ್ನ ಕಟ್ಟಿಕೊಂಡು ನೆಮ್ಮದಿಯಿಂದ ಬದುಕನ್ನು ಸಾಗಿಸುತ್ತಿದ್ದಾರೆ. ಇಂತಹ ಒಂದು ಯೋಜನೆ ಕಳೆದ 30 ವರ್ಷದಲ್ಲಿ ಸಾಧ್ಯವಾಗಿರುವುದಿಲ್ಲ. ಈ ವಿಚಾರದಲ್ಲಿ ಇರುವಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಬಿಬಿಎಂಪಿಯಲ್ಲಿರುವ ಕಾನೂನು ಕೋಶದ ಅಧಿಕಾರಿಗಳು ಕ್ರಮ ಜರುಗಿಸದ ಕಾರಣದಿಂದಾಗಿ, ಬಿಬಿಎಂಪಿಯಲ್ಲಿ ಬಿ ಖಾತೆ ಹೊಂದಿರುವ ನಾಗರಿಕರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಅವರು ಮನೆ ಕಟ್ಟುತ್ತಾರೆ ಅಧಿಕಾರಿಗಳು ನೋಟಿಸ್ ನೀಡುತ್ತಾರೆ. ದೂರುಗಳು ಬರುತ್ತದೆ ಒಂದು ರೀತಿಯಲ್ಲಿ ಇದೊಂದು ಅನೇಕ ಅಕ್ರಮಗಳಿಗೆ ದಾರಿಯಾಗಿದೆ. ಈ ಹಿನ್ನಲೆಯಲ್ಲಿ ಬಿಬಿಎಂಪಿ ಆಯುಕ್ತರು ಬಿ ಖಾತೆ ಹೊಂದಿರುವ ನಾಗರಿಕರಿಗೆ ಷರತ್ತು ವಿಧಿಸಿ ನಕ್ಷೆಯನ್ನ ಮಂಜೂರಾತು ಮಾಡಿಕೊಡಿ. ಇಲ್ಲದಿದ್ದರೆ ಆದಷ್ಟು ಬೇಗನೆ ನ್ಯಾಯಾಲಯದಲ್ಲಿ ಪ್ರಕರಣವನ್ನು ಇತ್ಯರ್ಥ ಪಡಿಸಿ ಅಭಿವೃದ್ಧಿ ಶುಲ್ಕವನ್ನು ಪಡೆದುಕೊಂಡು ಅವರಿಗೂ ಸಹ ಏ ಖಾತೆ ನೀಡುವ ನಿಟ್ಟಿನಲ್ಲಿ ತುರ್ತು ಗಮನವನ್ನು ಹರಿಸಿ.
ಬೆಂಗಳೂರು ನಗರದಲ್ಲಿ ಬಿಡಿಎ ವತಿಯಿಂದ ಪಡೆದುಕೊಂಡಿರುವ ನಿವೇಶನಗಳು, ಬಿಡಿಎ ಅನುಮೋದಿತ ಬಡಾವಣೆಗಳಿಂದ ಪಡೆದುಕೊಂಡಿರುವ ನಿವೇಶನಗಳು, ಗೃಹ ಮಂಡಳಿ ವತಿಯಿಂದ ಪಡೆದುಕೊಂಡಿರುವ ನಿವೇಶನಗಳು, ಅಭಿವೃದ್ಧಿ ಶುಲ್ಕವನ್ನು ಪಾವತಿ ಮಾಡಿ ಸಕ್ರಮಗೊಳಿಸಿಕೊಂಡಿರುವ ನಿವೇಶನಗಳು, ಇವುಗಳ ಎಲ್ಲಾ ಸಂಖ್ಯೆಗಿಂತ ರೆವೆನ್ಯೂ ನಿವೇಶನಗಳ ಸಂಖ್ಯೆಯೇ ಅಧಿಕವಾಗಿದೆ. ಇವರು ಸಹ ಪ್ರತಿ ವರ್ಷವೂ ಕಂದಾಯವನ್ನು ಕಟ್ಟುತ್ತಾರೆ. ಆದರೆ ಅವರ ಆಸ್ತಿಗಳಿಗೆ ಯಾವುದೇ ರೀತಿಯ ಸೌಕರ್ಯ ಸೌಲಭ್ಯಗಳು ದೊರೆಯುತ್ತಿಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




