ಸಂತ ಶ್ರೀ ಸೇವಾಲಾಲ್ ಅವರ ಜಯಂತಿಯನ್ನು ಆಚರಣೆ

2 years ago

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ  ಬಂಜಾರರ ಕುಲಗುರು ಸಂತ ಶ್ರೀ ಸೇವಾಲಾಲ್ ಅವರ ಜಯಂತಿಯನ್ನು ಆಚರಿಸಲಾಯಿತು. ಜಯಂತಿಯ  ಕಲಾತಂಡಗಳ ಮೆರವಣಿಗೆಗೆ  ʻಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿʼ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಹಾಗೂ ಸಮುದಾಯದ ಮುಖಂಡರಾದ ಕರಿಯನಾಯಕ್, ಡಾ.ಪರಮೇಶ್ವರ್ ನಾಯಕ್, ಎಸ್.ಆರ್, ರಾಜನಾಯಕ್ ಸಿಂಗಟಗೆರೆ ಮತ್ತು ಮುಂತಾದ ಚಿಂತಕರು ಹಾಗೂ ಕಲಾವಿದರು ಉಪಸ್ಥಿತರಿದ್ದರು.

Leave a Reply