ಎಲ್ಲ ಸಮುದಾಯದವರು ಸಹಕಾರ ನೀಡಿದ್ದರಿಂದ 9 ಬಾರಿ ಶಾಸಕನಾಗಿದ್ದೇನೆ: ಆರ್ ವಿ ದೇಶಪಾಂಡೆ

1 year ago

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ವಿಪ್ರೋತ್ಸವ-2024

ಸಾಧಕರಿಗೆ ಭಾರ್ಗವ ಭೂಷಣ ಪ್ರಶಸ್ತಿ ಪ್ರದಾನ

ಬೆಂಗಳೂರು: ಗಾಯನ ಸಮಾಜದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ(ರಿ)ವತಿಯಿಂದ ವಿಪ್ರೋತ್ಸವ-2024ಕಾರ್ಯಕ್ರಮ ಮತ್ತು ಸಾಧಕರಿಗೆ ಭಾರ್ಗವ ಭೂಷಣ ಪ್ರಶಸ್ತಿ ಸಮಾರಂಭ ಆಯೋಜಿಸಲಾಗಿತ್ತು.

ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಚಿವ, ಶಾಸಕ ಆರ್.ವಿ.ದೇಶಪಾಂಡೆ, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಅಧ್ಯಕ್ಷ ಡಾ.ಗೋವಿಂದ ಕುಲಕರ್ಣಿ, ಶಾಸಕ ಸಿ.ಕೆ.ರಾಮಮೂರ್ತಿ, ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಆಸೆಗೋಡು ಜಯಸಿಂಹ, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಷ್ಟ್ರೀಯ ಕಾರ್ಯದರ್ಶಿ ಗಿರೀಶ್ ನಿಲಗುಂದ, ರಾಷ್ಟ್ರೀಯ ಉಪಾಧ್ಯಕ್ಷ ಡಾ.ಸುಬ್ರಮಣ್ಯ ಶರ್ಮ,  ಟಿ.ರಮಣಚಾರಿ, ರಾಜ್ಯಾಧ್ಯಕ್ಷ ಜೆ.ಆರ್.ಪ್ರದೀಪ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಇದೇ ವೇಲೆ ಮಾತನಾಡಿದ ಆರ್.ವಿ.ದೇಶಪಾಂಡೆ, ಬ್ರಾಹ್ಮಣರಲ್ಲಿ ಸಂಘಟನೆ ಇಲ್ಲ, ಸಂಘಟನೆಯ ಕೊರತೆ ಬ್ರಾಹ್ಮಣರಲ್ಲಿ ಇದೆ. ರಾಮಕೃಷ್ಣಹೆಗಡೆಯಿಂದ ಸಿದ್ದರಾಮಯ್ಯರವರೆಗೆ 9 ಮುಖ್ಯಮಂತ್ರಿಗಳ ಕೆಳಗೆ ಕೆಲಸ ಮಾಡಿದ್ದೇನೆ. ಬ್ರಾಹ್ಮಣ ಯುವಕರು ಮುಂದೆ ಬರುತ್ತಿಲ್ಲ, ಸಮುದಾಯದಿಂದ ದೂರ ಉಳಿದಿದ್ದಾರೆ. ತಂದೆ, ತಾಯಿಂದಿರು ಮಕ್ಕಳನ್ನು ಕರೆತರಬೇಕು ಎಂದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ಬ್ರಾಹ್ಮಣರ ಕೊಡುಗೆ ಇದೆ. ಬುದ್ದಿವಂತ ಜನರು ಇದ್ದಾರೆ. ನನ್ನ ಕ್ಷೇತ್ರದಲ್ಲಿ 2000 ಬ್ರಾಹ್ಮಣ ಮತದಾರರು ಇದ್ದಾರೆ. ಆದರೂ ಎಲ್ಲ ಸಮುದಾಯದವರು ಸಹಕಾರ ನೀಡಿದ ಕಾರಣದಿಂದ 9 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದರು.

ಬ್ರಾಹ್ಮಣರು ಹೃದಯವೈಶಾಲ್ಯ ಉಳ್ಳವರು, ಸಂಘಟಿತರಾಗಿ.ಜೀವನದಲ್ಲಿ ಸಮಾಜಕ್ಕೆ ಒಳ್ಳೆಯ ಮಾಡುವವರು, ಮಾರ್ಗದರ್ಶಕರು, ಉತ್ತಮ ಕೆಲಸ ಮಾಡುವವರನ್ನ ಗುರುತಿಸಿ ಸನ್ಮಾನ ಮಾಡುವುದು ಒಳ್ಳೆಯದು ಎಂದರು.

ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ನಾನು ವಿಧಾನಸಭೆಯಲ್ಲಿ ಬ್ರಾಹ್ಮಣರಿಗೆ ಬೈಯಬೇಡಿ ಎಂದು ಹೇಳಿದ್ದೆ ಮತ್ತು ಎಲ್ಲ ಜಾತಿ ಸಮುದಾಯದವರನ್ನ ಪ್ರೀತಿಸಬೇಕು. ನ್ಯಾಯಬದ್ದವಾಗಿ, ಜಾತ್ಯತೀತವಾಗಿ ಕೆಲಸ ಮಾಡಬೇಕು, ಎಲ್ಲ ಪಕ್ಷದವರು ನನ್ನ ಸ್ನೇಹಿತರು. ಜನರು ಆದಾಯದ ಸ್ವಲ್ಪ ಭಾಗವನ್ನು ಸಮಾಜಸೇವೆಗೆ ಉಪಯೋಗ ಮಾಡಬೇಕು ಎಂದರು.

ಶಾಲೆ, ದೇವಸ್ಥಾನ ಮತ್ತು ಸಮುದಾಯ ಭವನಗಳನ್ನು ನಮ್ಮ ಹಿರಿಯರು ತಮ್ಮ ಸ್ವಂತವೆಚ್ಚದಲ್ಲಿ ಕಟ್ಟಿದ್ದಾರೆ. ಅದನ್ನ ಉಳಿಸುವ ಕಾರ್ಯವಾಗಬೇಕು. ವಿದ್ಯಾವಂತ ಮಕ್ಕಳು ಇಂದು ತಂದೆ, ತಾಯಿಯನ್ನ ಗೌರವದಿಂದ ನೋಡುವುದಿಲ್ಲ ಎಂದರು.

ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಮೊದಲು ತಂದಿದ್ದು ನಮ್ಮ ರಾಜ್ಯ. ಅಧಿಕಾರ ಬಂದಾಗ ಜನರಿಗೆ ಸಹಾಯ ಮಾಡಬೇಕು ಎಂಬ ಜವಾಬ್ದಾರಿ ನಮ್ಮದು. 100 ಹೊಲಿಗೆ ಯಂತ್ರವನ್ನು ಉಚಿತವಾಗಿ ನಮ್ಮ ಸಂಸ್ಥೆಯಿಂದ ನೀಡಲಾಗುವುದು ಎಂದರು.

ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ಬ್ರಾಹ್ಮಣ ಸಮುದಾಯದ ಯುವಕರು ಸಂಘಟಿತರಾಗಬೇಕು. ಹಳ್ಳಿಯಲ್ಲಿರುವ ಬ್ರಾಹ್ಮಣರು ನಗರ ಪ್ರದೇಶ ಮತ್ತು ವಿದೇಶದಲ್ಲಿ ಇದ್ದಾರೆ. ಹಳ್ಳಿಗಳಿಂದ ಬ್ರಾಹ್ಮಣರು ದೂರವಾಗಿದ್ದಾರೆ. ಬ್ರಾಹ್ಮಣ ವಿರುದ್ದ ಟೀಕೆ ಮಾಡುವವರು ವಿರುದ್ದ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು.

ಕಳೆದ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ 10 ಬ್ರಾಹ್ಮಣರಿಗೆ ಟಿಕೇಟು ಕೊಡಿ ಎಂದು ಒತ್ತಾಯಿಸಿ ಪಕ್ಷ ಟಿಕೇಟು ನೀಡಲು ಮುಂದಾದರು ಬ್ರಾಹ್ಮಣ ಸಮುದಾಯದವರು ಚುನಾವಣೆಗೆ ಸ್ಪರ್ಧೆ ಮಾಡಲು ಮುಂದೆ ಬರಲಿಲ್ಲ. ಬ್ರಾಹ್ಮಣ ಸಮುದಾಯ ಉಳಿಯಬೇಕಾದರೆ ಸಂಘಟಿತರಾಗಬೇಕು ಎಂದರು.

ಸಮಾರಂಭದಲ್ಲಿ ವಿಪ್ರ ಮಹಿಳಾ ಭಜನಾ ಮಂಡಳಿ ವತಿಯಿಂದ ಭಕ್ತಿಸಾರ ಹಾಗೂ ವಿದುಷಿ ಮೇಘ ಶಿವಕುಮಾರ್ ರವರಿಂದ ದಾಸವಾಣಿ ಹಾಗೂ   ಸಭಾ ಕಾರ್ಯಕ್ರಮ ಭಾರ್ಗವ ಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿತು.

ಭಾರ್ಗವ ಭೂಷಣ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಟ ಶ್ರೀಧರ್, ಹಿರಿಯ ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ, ಪತ್ರಕರ್ತರಾದ ರವಿಹೆಗಡೆ, ವೈದ್ಯರಾದ ಡಾ.ಬಿ.ಎಸ್.ಶ್ರೀನಾಥ್, ಡಾ.ಸುಧೀರ್ ಹೆಗಡೆ, ಜಯತೀರ್ಥ ವಿದ್ಯಾಪೀಠ ಪ್ರಾಂಶುಪಾಲರಾದ ಪಂಡಿತ್ ಸತ್ಯಧ್ಯಾನ ಆಚಾರ್ಯ ಕಟ್ಟಿ ಮತ್ತು ಖ್ಯಾತಿ ಉದ್ಯಮಿ ಕಾಂತಿ ಸ್ವೀಟ್ಸ್ ಮಾಲೀಕ ಶೈಲೇಂದ್ರ ಶರ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Leave a Reply