ಕಡಲೆಕಾಯಿ ಪರಿಷೆಯನ್ನು ಸುಂಕರಹಿತ ಮಾಡಿದ ರಾಮಲಿಂಗಾರೆಡ್ಡಿ

1 year ago

ಶ್ರೀ ರಾಮಲಿಂಗಾರೆಡ್ಡಿರವರಿಗೆ ಧನ್ಯವಾದಗಳು.

ನಗರದ ಐತಿಹಾಸಿಕ ಕಡಲೆಕಾಯಿ ಪರಿಷೆ ಈ ಬಾರಿ ಸುಂಕ ರಹಿತ ಪರಿಷೆಯನ್ನಾಗಿ ಬದಲಾಯಿಸಿದ ಶ್ರೀ ರಾಮಲಿಂಗಾರೆಡ್ಡಿ ಅವರಿಗೆ ಸಂಸ್ಕೃತಿ ಮತ್ತು ಇತಿಹಾಸವನ್ನು ಪ್ರೀತಿಸುವ ಎಲ್ಲಾ ನಾಗರಿಕರ ಪರವಾಗಿ ಧನ್ಯವಾದಗಳು.

ಪ್ರತಿ ವರ್ಷವೂ ಸುಂಕದ ಹೆಸರಿನಲ್ಲಿ ವ್ಯಾಪಾರಕ್ಕೆ ಬರುವಂತಹ ನೂರಾರು ಮಂದಿಗೆ ಸಾಕಷ್ಟು ತೊಂದರೆಗಳಾಗುತ್ತಿತ್ತು, ಇದನ್ನು ಮನಗಂಡು ಮಾನವೀಯತೆಯಿಂದ ಮಾನ್ಯ ಸಚಿವರು, ಸುಂಕ ರಹಿತ ಕಡಲೆಯನ್ನ ಘೋಷಣೆ ಮಾಡಿರುವುದು, ಅವರ ಮಾನವೀಯತೆ ಮತ್ತು ಸ್ಪಂದನಶೀಲತೆ ತೋರಿಸುತ್ತದೆ.

ಮುಜರಾಯಿ ಇಲಾಖೆಯ ಸಚಿವರಾಗಿ ಕರ್ನಾಟಕ ರಾಜ್ಯದಲ್ಲಿ ಯಾವುದೇ ಸರ್ಕಾರದಲ್ಲೂ ಭಕ್ತರಿಗೆ ಮತ್ತು ಅರ್ಚಕರಿಗೆ ಇಷ್ಟೊಂದು ಸೌಲಭ್ಯ ಸೌಕರ್ಯಗಳನ್ನು ಯಾರು ಕಲ್ಪಿಸಿ ಕೊಟ್ಟಿರಲಿಲ್ಲ. ಈಗ  ಕಾಶಿಯಾತ್ರೆಗೆ 5000, ಮಾನಸ ಸರೋವರ ಯಾತ್ರೆಗೆ 30,000, ಜಮ್ಮುವಿನಲ್ಲಿರುವ ವೈಷ್ಣೋ ದೇವಿ ಯಾತ್ರೆಗೆ 5000, ಛಾರಧಮ್ ಯಾತ್ರೆಗೆ, ಇಪ್ಪತ್ತು ಸಾವಿರ ರೂಪಾಯಿಗಳ ಸಹಾಯಧನವನ್ನು ಘೋಷಣೆ ಮಾಡಿರುತ್ತಾರೆ.

ಈಗಾಗಲೇ ಅರ್ಚಕರಿಗೆ ಆರೋಗ್ಯ ವಿಮೆ, ವೃತ್ತಿಯ ಸಂದರ್ಭದಲ್ಲಿ ನಿಧನರಾದರೆ ಎರಡು ಲಕ್ಷ ರೂಪಾಯಿಗಳ ಪರಿಹಾರದ ಮೊತ್ತ, ಅವರ ಮಕ್ಕಳ ವೈದ್ಯಕೀಯ, ತಾಂತ್ರಿಕ ಮತ್ತು ಇತರೆ ಉನ್ನತ ಶಿಕ್ಷಣಕ್ಕೆ ಸಹಾಯಧನ ಇವುಗಳನ್ನು ಘೋಷಣೆ ಮಾಡಿದ್ದಾರೆ.  ದೇವಾಲಯಗಳ ಅರ್ಚಕರಿಗೆ ವಸತಿ ಸೌಲಭ್ಯವನ್ನು ಕಲ್ಪಿಸುವ ಯೋಜನೆಯನ್ನು ರೂಪಿಸಿದ್ದಾರೆ. ಇವುಗಳ ಜೊತೆಗೆ ಭಕ್ತರಿಗಾಗಿ ದೇವಾಲಯಗಳಲ್ಲಿ ಹಿರಿಯ ನಾಗರಿಕರಿಗೆ ಶೀಘ್ರ ದರ್ಶನ, ತಾಯಂದಿರು ಮಕ್ಕಳಿಗೆ ಹಾಲುಣಿಸಲುಆರೈಕೆ ಕೇಂದ್ರಗಳು, ತಿರುಪತಿ, ಅಯೋಧ್ಯೆ, ಶಿರಡಿ, ಕಾಶಿ, ಮುಂತಾದಂತಹ ಪ್ರಮುಖ ಸ್ಥಳಗಳಲ್ಲಿ ವಸತಿ ಸೌಕರ್ಯಗಳ ಮತ್ತಷ್ಟು ಹೆಚ್ಚು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನವನ್ನು ಮಾಡುತ್ತಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಭಕ್ತರಿಗೆ ಮತ್ತು ಅರ್ಚಕರಿಗೆ ಸೌಕರ್ಯ , ಸೌಲಭ್ಯಗಳಿಗಾಗಿ,  ಶ್ರೀ ರಾಮಲಿಂಗಾರೆಡ್ಡಿರವರು ಸಾಕಷ್ಟು ಕಾರ್ಯಕ್ರಮಗಳ ಮಹಾಪೂರವನ್ನು ಹರಿಸಿದ್ದಾರೆ. ಇಚ್ಛಾಶಕ್ತಿ ಇದ್ದಲ್ಲಿ ಯಾವುದೇ ಖಾತೆಯನ್ನ ಕೊಟ್ಟರೂ ಅದಕ್ಕೆ ಮಹತ್ವವನ್ನ ತಂದು ಕೊಡಬಹುದು ಎಂಬುದನ್ನ ಶ್ರೀ ರಾಮಲಿಂಗಾರೆಡ್ಡಿರವರು ಸಾಬೀತುಗೊಳಿಸಿದ್ದಾರೆ.

ಜೊತೆಗೆ ಸಾರಿಗೆ ಇಲಾಖೆಯಲ್ಲಿ ಇವರು ಹತ್ತಾರು ಕಾರ್ಯಕ್ರಮಗಳನ್ನ ವಿನೂತನವಾಗಿ ಘೋಷಿಸಿ, ಶಕ್ತಿ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದು ಸಾರಿಗೆ ಇಲಾಖೆಗೂ ಸಹ ಹೆಚ್ಚಿನ ಮಹತ್ವವನ್ನು ತಂದುಕೊಟ್ಟಿದ್ದಾರೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply