ಬೆಂಬಲ ಬೆಲೆ ಯೋಜನೆಯಡಿ ಉದ್ದಿನ ಕಾಳು ಹಾಗೂ ಸೋಯಾಬಿನ್ ಖರೀದಿಗೆ ರಾಜ್ಯ ಸರ್ಕಾರ ಆದೇಶ: ಪ್ರಿಯಾಂಕ್ ಖರ್ಗೆ
2024- 25 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಉದ್ದಿನ ಕಾಳು ಹಾಗೂ ಸೋಯಾಬಿನ್ ಖರೀದಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕಲಬುರಗಿ ಜಿಲ್ಲೆಯ ರೈತರು ಯೋಜನೆಯ ಲಾಭ ಪಡೆದುಕೊಳ್ಳಬೇಕಾಗಿ ಈ ಮೂಲಕ ಕೋರುತ್ತೇನೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರೈತರು ಉದ್ದಿನ ಬೇಳೆ ಹಾಗೂ ಸೋಯಾಬಿನ್ ಬೆಳೆಗಳನ್ನು ನಿಗದಿಪಡಿಸಲಾದ ಈ ಕೆಳಗಿನ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ.
ಕಲಬುರಗಿ- ಮಹಾಗಾಂವ್, ದೇವರ ದಾಸಿಮಯ್ಯ ರೈತ ಉತ್ಪಾದಕರ ಕಂಪನಿ ಕಮಲಾಪುರ, ಗ್ರಾಮೀಣ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಕಮಲಾಪುರ
ಆಳಂದ – ಪಡಸಾವಳಗಿ, ಹಿರೋಳಿ, ಮನ್ನಳ್ಳಿ, ಕಜೂರಿ, ಯಳಸಂಗಿ, ಕವಲಗಾ, ಕಿಣ್ಣಿ ಸುಲ್ತಾನ, ಮಡಿಕಿ, ಹೋದಲೂರು ನಿರುಡಗಿ, ಬೋಧನ ಸರಸಂಬಾ, ತಡಕಲ್
ಚಿತ್ತಾಪುರ – ಕಾಳಗಿ, ಟೆಂಗಳಿ, ನೀಲಕಂಠ ಕಾಳೇಶ್ವರ ರೈತ ಉತ್ಪಾದಕರ ಸಂಸ್ಥೆ ಕಾಳಗಿ
ಚಿಂಚೋಳಿ- ಚಿಂಚೋಳಿ, ಸಾಲೆಬಿರನಳ್ಳಿ ಸುಲೇಪೇಟ್, ಚಿಮ್ಮನಚೋಡ್, ಕೋಡ್ಲಿ ಶಾದಿಪುರ
ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಉದ್ದಿನ ಕಾಳು ಹಾಗೂ ಸೋಯಾಬಿನ್ ಖರೀದಿ ಮಾಡುವ ಉದ್ದೇಶದಿಂದ ಸರ್ಕಾರದ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತವನ್ನು ನೋಡೆಲ್ ಏಜೆನ್ಸಿಯನ್ನಾಗಿ ನೇಮಿಸಿದೆ.
ಈ ಹಿನ್ನಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಪರಿಣಿತ ಹೊಂದಿದ 29 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಅಥವಾ ರೈತ ಉತ್ಪಾದಕ ಸಂಘಗಳನ್ನು ಗುರುತಿಸಲಾಗಿದೆ. ಆದ್ದರಿಂದ ತಕ್ಷಣ ರೈತರು ನೋಂದಣಿ ಕಾರ್ಯವನ್ನು ಮಾಡಿಕೊಳ್ಳಬೇಕು. ಈ ಪ್ರಕ್ರಿಯೆಗೆ ಸೆಪ್ಟೆಂಬರ್ 7ರಿಂದ ಅಕ್ಟೋಬರ್ 20 ರವರೆಗೆ ನಿಗದಿಪಡಿಸಲಾಗಿದ್ದು ಸೆಪ್ಟೆಂಬರ್ 7 ರಿಂದ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಖರೀದಿ ಮಾಡಲಾಗುವುದು.
ಜಿಲ್ಲೆಯ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸುತ್ತೇನೆ.
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ




