ಬೆಂಗಳೂರು: ಪೊಲೀಸ್ ಹುದ್ದೆ ನೇಮಕಾತಿಗೆ ನಡೆಯುತ್ತಿರುವ ಪರೀಕ್ಷೆ ಬರೆಯಲು ನಿಗದಿಪಡಿಸಿರುವ ವಯೋಮಿತಿ ಸಡಿಲಗೊಳಿಸುವಂತೆ ಗೃಹ ಸಚಿವ ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲು ಆಗಮಿಸಿದ ಯುವಕರ ಮೇಲೆ ಪೊಲೀಸರು ದರ್ಪ ತೋರಿಸಿದ್ದಾರೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಪರಮೇಶ್ವರ್ ಅವರ ನಿವಾಸದೆದುರು ಆಗಮಿಸಿದ ಪಿಎಎಸ್ಐ ಹುದ್ದೆ ಆಕಾಂಕ್ಷಿಗಳು ಹಾಗೂ ಪೊಲೀಸ್ ಪೇದೆ ಹುದ್ದೆ ನೇಮಕಾತಿಗೆ ವಯೋಮಿತಿ ಸಡಿಲಿಕೆಗೆ ಮನವಿ ಸಲ್ಲಿಸಲು ಆಗಮಿಸಿದವರನ್ನು ಕೆಲವು ಪೊಲೀಸ್ ಅಧಿಕಾರಿಗಳು ಬಲವಂತವಾಗಿ ವಶಕ್ಕೆ ಪಡೆದು ಕರೆದೊಯ್ದರು. ಈ ವೇಳೆ ಕೆಲವರ ಮೇಲೆ ಹಲ್ಲೆ ನಡೆಸಿದ್ದೂ ಕಂಡುಬಂದಿತು. ಇದರಿಂದ ಕುಪಿತಗೊಂಡ ಕೆಲವು ಆಕಾಂಕ್ಷಿಗಳು ಸಚಿವರ ನಿವಾಸದ ಮುಂದೆ ಧರಣಿಗೆ ಮುಂದಾದರು. ತಕ್ಷಣವೇ ಅವರನ್ನೆಲ್ಲ ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ಹೊರಗಡೆ ಕೊಂಡೊಯ್ದರು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವ ಪರಮೇಶ್ವರ್, ತಕ್ಷಣ ಭದ್ರತಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ತಮ್ಮ ಭೇಟಿಗೆ ಬರುವ ಯಾವುದೇ ನಾಗರಿಕರ ಜೊತೆ ಅನುಚಿತವಾಗಿ ವರ್ತಿಸಿದಂತೆ ತಾಕೀತು ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ನಿವಾಸದ ಬಳಿ ಯಾವುದೇ ಅರ್ಜಿಗಳನ್ನು ನೀಡಲು ಬಂದವರೊಂದಿಗೆ ನಾನೇ ಮಾತನಾಡುತ್ತೇನೆ, ಅರ್ಜಿಗಳನ್ನು ಪಡೆದುಕೊಂಡು ಸಮಯವಿದ್ದರೆ ಅದರ ಮೇಲೆ ಸೂಕ್ತ ನಿರ್ದೇಶನಗಳನ್ನು ಬರೆದು ರವಾನೆ ಮಾಡುತ್ತೇನೆ. ಸಮಯ ಇಲ್ಲದೇ ಇದ್ದರೆ ಅರ್ಜಿ ಪಡೆದು ನಂತರ ಪರಿಶೀಲಿಸಲಾಗುವುದು ಎಂದರು.



