2027ರವರೆಗೆ ಎಲ್ಲಾ ಇಲಾಖೆಯ ನೇಮಕಾತಿಗಳಲ್ಲೂ ವಯೋಮಿತಿ ಸಡಿಲಿಕೆ: ಜಿ ಪರಮೇಶ್ವರ್ 

7 months ago

ಬೆಂಗಳೂರು: ಪೊಲೀಸ್ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ನೆರೆಯ ರಾಜ್ಯಗಳು ಸೇರಿದಂತೆ ದೇಶದ ವಿವಿಧೆಡೆ ಪೊಲೀಸ್ ನೇಮಕಾತಿಗೆ ಅನುಸರಿಸುವ ಮಾರ್ಗಗಳನ್ನು ಪರಿಶೀಲಿಸುತ್ತಿರುವ ಗೃಹ ಇಲಾಖೆ ಪೊಲೀಸ್ ನೇಮಕಾತಿಗೆ ವಯೋಮಿತಿ ಹೆಚ್ಚಳ ಮಾಡಲು ಸಿದ್ಧತೆ ನಡೆಸಿದೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಗೃಹಸಚಿವ ಡಾ. ಜಿ ಪರಮೇಶ್ವರ್, ಒಳ ಮೀಸಲಾತಿ ಕಾರಣಕ್ಕಾಗಿ ನೇಮಕಾತಿಗಳು ನಡೆಯದೇ ಬಹಳಷ್ಟು ಮಂದಿ ಅವಕಾಶ ವಂಚಿತರಾಗುತ್ತಿದ್ದರು. ಅಂತವರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಅವಧಿಗೆ ಸೀಮಿತಗೊಂಡಂತೆ 2027ರವರೆಗೆ ಎಲ್ಲಾ ಇಲಾಖೆಯ ನೇಮಕಾತಿಗಳಲ್ಲೂ ವಯೋಮಿತಿ ಸಡಿಲಿಸಿದ್ದಾರೆ ಎಂದರು.

ಪೊಲೀಸ್‌‍ ಇಲಾಖೆಯಲ್ಲಿ ಶಾಶ್ವತವಾಗಿ ವಯೋಮಿತಿ ಸಡಿಲಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೇರೆಬೇರೆ ರಾಜ್ಯಗಳಲ್ಲಿರುವ ವಯೋಮಿತಿಯ ಮಾಹಿತಿಯನ್ನು ಪಡೆಯಲಾಗಿದೆ. ಹಲವು ರಾಜ್ಯಗಳಲ್ಲಿ 27,30,33 ವರ್ಷಗಳವರೆಗೂ ವಯೋಮಿತಿ ಸಡಿಲಿಕೆಯಿದೆ. ನಮಲ್ಲೂ ಕಾನ್ಸ್ಟೇಬಲ್‌ ಮತ್ತು ಪೊಲೀಸ್‌‍ ಸಬ್‌ಇನ್ಸ್ ಪೆಕ್ಟರ್‌ ಹುದ್ದೆಗಳಿಗೆ ಶಾಶ್ವತವಾಗಿ ವಯೋಮಿತಿ ಸಡಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು.

Leave a Reply