ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಕಾಂಗ್ರೆಸ್ ಬಡವರ ಪರ ಸದಾ ಚಿಂತನೆ ಮಾಡುವ ಕಾಂಗ್ರೆಸ್ ಪಕ್ಷ. ವಿಶ್ವದ ಬಲಿಷ್ಠ ಮಹಿಳಾ ನಾಯಕಿ ಎಂಬ ಕೀರ್ತಿಗಳಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿರವರ 104ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರ ಸಾಧನೆ, ಹೋರಾಟ ನಡೆದು ಬಂದ ಅಪೂರ್ವ ಘಟಾನವಳಿಗಳನ್ನು ಛಾಯಾಚಿತ್ರ ಪ್ರದರ್ಶನವನ್ನು ಅಖಿಲ ಭಾರತ ಯುವ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿದೆ ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ಸಮಿತಿ ರಾಷ್ಟೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದರು.
ಅಖಿಲ ಭಾರತ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನ ಚರಿತ್ರೆ ಆಧರಿಸಿದ ಛಾಯಾಚಿತ್ರ ಪ್ರದರ್ಶನವನ್ನು ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದೆ. ಇಲ್ಲಿಗೆ ಭೇಟಿ ನೀಡಿ ಮಾತಾಡಿದ ಅವರು, ಇಂದಿರಾ ಗಾಂಧಿ ಬಾಲ್ಯ ದಿನದಿಂದ ಮತ್ತು 16 ವರ್ಷಗಳ ಕಾಲ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಅವರ ಸಾಧನೆಗಳನ್ನು ಇಂದಿನ ಯುವಕ, ಯುವತಿಯರಿಗೆ ತಲುಪಲಿ ಎಂಬ ಉದ್ದೇಶದಿಂದ ‘ಭಾರತದ ಇಂದಿರಾ ಛಾಯಾಚಿತ್ರ ಪ್ರದರ್ಶನ’ ಏರ್ಪಡಿಸಲಾಗಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಭಾರತದ ಇಂದಿರಾ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗುತ್ತಿದೆ ಎಂದರು.
ಇಂದಿರಾ ಗಾಂಧಿಯವರ ಹೋರಾಟ ಇಂದಿನ ಯುವಕರಿಗೆ ಮಾರ್ಗದರ್ಶವಾಗಲಿ ಮತ್ತು ಯುವ ಸಮೂಹದ ಸಹಕಾರದಿಂದ ದೇಶ ಕಟ್ಟೋಣ ಎಂದು ಕರೆ ನೀಡಿದರು.
ಕೆ.ಪಿ.ಸಿ.ಸಿ. ಮಾಜಿ ಅಧ್ಯಕ್ಷ, ಶಾಸಕ ದಿನೇಶ್ ಗುಂಡೂರಾವ್, ಯುವ ಕಾಂಗ್ರೆಸ್ ಮುಖಂಡದ ವಿನಯ ಕಾರ್ತಿಕ್ ಛಾಯಾಚಿತ್ರ ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿದರು.



