ಕಾರ್ಮಿಕರ ಹಿತರಕ್ಷಣೆ ಮತ್ತು ಹಕ್ಕುಗಳು ಮತ್ತು ಸರ್ಕಾರದ ಸೌಲಭ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ
ಬೆಂಗಳೂರು: ರಾಜಾಜಿನಗರದ ಶ್ರೀರಾಮಮಂದಿರ ಆಟದ ಮೈದಾನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಮತ್ತು ಅಖಿಲ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣ ವೇದಿಕೆ ವತಿಯಿಂದ ರೈತರು ಮತ್ತು ಕಟ್ಟಡ ಕಾರ್ಮಿಕರು ಮತ್ತು 103 ವಲಯಕ್ಕೆ ಸೇರುವ ಅಸಂಘಟಿತ ಕಾರ್ಮಿಕರಿಗಾಗಿ ಜನಜಾಗೃತಿ ಸಮಾವೇಶ ಆಯೋಜಿಸಲಾಗಿತ್ತು.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಕನ್ನಡಪರ ಹೋರಾಟಗಾರ ಪಾಲನೇತ್ರ, ಅಂಬೇಡ್ಕರ್ ಮಾನವ ಹಕ್ಕುಗಳ ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ಕ್ರಾಂತಿರಾಜು, ಕೆ.ಆರ್.ಜಿ.ಎಸ್. ಕಾರ್ಮಿಕ ಸಂಘಟನೆ ಅಧ್ಯಕ್ಷ ಬಿ.ದೇವರಾಜ್, ವೈಭವ ಕರ್ನಾಟಕ ಸಂಘಟನೆ ಅಧ್ಯಕ್ಷ ವೆಂಕಟೇಶ್ ಗೌಡ, ಕಾರ್ಮಿಕ ಹಿತರಕ್ಷಣ ವೇದಿಕೆ ಅಧ್ಯಕ್ಷ ಡಾ.ಎಂ. ಮಹೇಶ್, ಮಹಿಳಾ ಅಧ್ಯಕ್ಷೆ ಶೈಲಜ ದೀಪ ಬೆಳಗಿಸಿ ಸಮಾವೇಶ ಉದ್ಘಾಟನೆ ಮಾಡಿದರು.
ನೂರಾರು ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು. ನಂತರ ಆಯುಷ್ಮಾನ್ ಭಾರತ್ ಮತ್ತು ಇ-ಶ್ರಮ್ ಕಾರ್ಡ್ ನೋಂದಾಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕರ ಹಕ್ಕು ಮತ್ತು ಯೋಜನೆಗಳ ಮಾಹಿತಿ ನೀಡಲಾಯಿತು.
ಇ.ಎಸ್.ಐ.ಮತ್ತು ಪಿಂಚಣಿ ಸೌಲಭ್ಯ ಮತ್ತು ಗ್ರಾಚ್ಯುಟಿ ಹಾಗೂ ಬೋನಸ್ ಸೌಲಭ್ಯಗಳನ್ನು ಪಡೆದುಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಮಿಕರ ಇಲಾಖೆಯಲ್ಲಿ ನೋಂದಣಿ ಮಾಡಲು ಇರುವ ಸಮಸ್ಯೆಗಳು ಮತ್ತು ಇಲಾಖೆ ನಿಧಾನಗತಿ ಕೆಲಸದಿಂದ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆ, ಇಲಾಖೆಯಲ್ಲಿ ಭ್ರಷ್ಟಾಚಾರ ವಿರುದ್ಧ ಸಂಘಟನೆ ಮೂಲಕ ಹೋರಾಟ ಮಾಡುವುದು. ಅಂದೇ ದುಡಿದು ಅಂದೇ ಜೀವನ ಬಂಡಿ ಸಾಗಿಸುವ ಕಾರ್ಮಿಕರಿಗೆ ನೂರೆಂಟು ಸಂಕಷ್ಟಗಳು ಇದೆ. ರೈತ ಮತ್ತು ಕಾರ್ಮಿಕ ಎರಡು ಕಣ್ಣುಗಳು ಇದ್ದಂತೆ, ಅವರು ಚನ್ನಾಗಿದ್ದರೆ ದೇಶ ಅಭಿವೃದ್ಧಿ ಸಾಧ್ಯ. ಕಾರ್ಮಿಕರಿಗೆ ಬಸ್ ಪಾಸ್ ಸೌಲಭ್ಯ, ಕಾರ್ಮಿಕರಿಗೆ ಕನಿಷ್ಟ ವೇತನ ಮತ್ತು ವೈದ್ಯಕೀಯ ಚಿಕಿತ್ಯೆ ಮರುಪಾವತಿ ಕಾರ್ಮಿಕರಿಗೆ ಸಿಗುವ ಸೌಲಭ್ಯ ಕುರಿತು ಅರಿವು ಮೂಡಿಸಲಾಯಿತು.
ಕನ್ನಡ ಹೋರಾಟಗಾರ ನಟರಾಜ್ ಬೊಮ್ಮಸಂದ್ರ, ಕಾರ್ಮಿಕರ ಪರಿಷತ್ತು ಅಧ್ಯಕ್ಷ ರವಿಶೆಟ್ಟಿ ಬೈಂದೂರು, ಕಾರ್ಮಿಕ ಸಂಘಟನೆಯ ಮುಖಂಡರುಗಳಾದ ಬೆಟ್ಟಸ್ವಾಮಿಗೌಡ, ಸಂತೋಷ್, ಶಿವಕುಮಾರ್, ಸುನೀಲ್, ಕೃಷ್ಣೆಗೌಡ, ಈಶ್ವರಪ್ಪ, ಗಿರಿಜಮ್ಮರವರು, ರಂಗಸ್ವಾಮಿ, ದೇವೇಂದ್ರಪ್ಪ, ಓಲೇಕಾರ್ ಪಾಲ್ಗೊಂಡಿದ್ದರು.
ಕಾರ್ಮಿಕರಿಗೆ ಜಾಗೃತಿ ಮೂಡಿಸಲು ನಾಗರಬಾವಿ ವೃತ್ತದಿಂದ ಆರಂಭವಾಗಿ ರಾಜಾಜಿನಗರ ಸ್ಟಾರ್ ಬಜಾರ್ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿಗೆ ಪೂಜೆ ಸಲ್ಲಿಸಿ, ರಾಮಮಂದಿರದ ಸಮಾವೇಶಕ್ಕೆ ಆಗಮಿಸಿದರು.




