ದೇಶದ ಸಂಪತ್ತಾದ ಕಾರ್ಮಿಕರ ಸಂಕಷ್ಟಗಳ ನಿವಾರಣೆಗೆ ಸರ್ಕಾರ ಬದ್ಧ: ವಿ.ಸೋಮಣ್ಣ

4 years ago

ಬೆಂಗಳೂರು: ಕಟ್ಟಡ ಕಾರ್ಮಿಕರು, ಇನ್ನಿತರೆ ಕಟ್ಟಡಗಳ ಕಾರ್ಮಿಕರಿಗೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಮತ್ತು ವಸತಿ ಇಲಾಖೆ ಯೋಜನೆಗಳನ್ನು ಕೊಡಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಬೆಂಗಳೂರಿನಿಂದ ಹೊರಟಿರುವ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಸಂಘಟನೆ ಒಕ್ಕೂಟ ವತಿಯಿಂದ ಕಾರ್ಮಿಕರಿಗೆ ಸಂಕಷ್ಟಕ್ಕೆ ಮತ್ತು ಉಪಯೋಗಕ್ಕೆ ರಾಜ್ಯಾದ್ಯಂತ ಕಾರ್ಮಿಕರ ರಥಕ್ಕೆ ಚಾಲನೆ ನೀಡಿ ಮತಾಡಿದ ಅವರು, ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಮತ್ತು ಕಾರ್ಮಿಕರಿಗೆ ವಸತಿ ಇಲಾಖೆಯಿಂದ ಸುಲಭ ಸಾಲ ಸೌಲಭ್ಯದ ಮೂಲಕ ವಸತಿ ಕಲ್ಪಿಲಾಗುವುದು ಎಂದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಾಸವಾಗಿರುವ ಕಟ್ಟಡ ನಿರ್ಮಾಣ ಕಾರ್ಮಿಕರ ಅರ್ಹ ಫಲಾನುಭವಿಗಳನ್ನು ಗುರುತಿಸಿ ಒಂಟಿ ಮನೆ ಯೋಜನೆ ಮೂಲಕ ಮನೆ ಕಟ್ಟಲು ಅನುದಾನ ನೀಡಲಾಗಿದೆ. ಹಕ್ಕು ಪತ್ರ ಇಲ್ಲದೇ 35 ವರ್ಷಗಳಿಂದ ವಾಸವಾಗಿದ್ದ ಹಲವಾರು ಕಟ್ಟಡ ಕಾರ್ಮಿಕರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 5,600 ಅಸಂಘಟಿತ ಕಾರ್ಮಿಕರಿಗೆ ಮತ್ತು 2,500 ಕಟ್ಟಡ ಕಾರ್ಮಿಕರಿಗೆ ಲೇಬರ್ ಕಾರ್ಡ್ ಮಾಡಿಕೊಡಲಾಗಿದೆ. ಈ ಮೂಲಕ ಕೇಂದ್ರ  ಮತ್ತು ರಾಜ್ಯ ಸರ್ಕಾರದ ಯೋಜನೆ, ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಕಾರ್ಮಿಕ ಈ ದೇಶದ ಸಂಪತ್ತು, ಕಾರ್ಮಿಕರ ಸಂಕಷ್ಟಗಳ ನಿವಾರಣೆಗೆ ಸರ್ಕಾರ ಬದ್ದವಾಗಿ ಕೆಲಸ ಮಾಡುತ್ತಿದೆ ಎಂದರು.

ಗೋವಿಂದರಾಜನಗರ ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ವಾಗೇಶ್, ಶ್ರೀಧರ್ ಮತ್ತು ಕರ್ನಾಟಕ ರಾಜ್ಯ ನಿವೃತ್ತ ಅಧಿಕಾರಿ ಮತ್ತು ನೌಕರರ ಸಂಘದ ಉಪಾಧ್ಯಕ್ಷ ಡಾ.ಎಂ.ಸೋಮಶೇಖರ್, ಬಿ.ಜೆ.ಪಿ. ಮುಖಂಡ ರಾಜಪ್ಪ ಹಾಗೂ ಕಾರ್ಮಿಕರ ಸಂಘದ ಅಧ್ಯಕ್ಷ ದೇವರಾಜ್ ಮೊದಲಾದವರು ಹಾಜರಿದ್ದರು.

Leave a Reply