ಶಿಕ್ಷಣ ಸಚಿವರೇ ಇವರ ಮೇಲೆ ಕ್ರಮ ಕೈಗೊಳ್ಳಿ

2 years ago

ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ದಿನಗಳಂದು ಎಲ್ಲ ಸರ್ಕಾರಿ ಕಾರ್ಯಕ್ರಮಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಮಹಾತ್ಮ ಗಾಂಧೀಜಿ ಮತ್ತು ಡಾ‌ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇಟ್ಟು ಗೌರವವನ್ನು ಸಲ್ಲಿಸಬೇಕೆಂಬ ಆದೇಶವನ್ನು ಹೊರಡಿಸಿರುತ್ತಾರೆ. ದುರಂತವೆಂದರೆ ಬಹಳಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಗೌರವವನ್ನು ಅರ್ಪಿಸುವಂತಹ ಕೆಲಸವನ್ನು ಮಾಡಿರುವುದಿಲ್ಲ. ಜೊತೆಗೆ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ವೇಷ ಭೂಷಣ ಸ್ಪರ್ಧೆಯಲ್ಲೂ ಸಹ ಮಹಾತ್ಮಾ ಗಾಂಧೀಜಿಯವರ ನಿರ್ಲಕ್ಷಿಸಿರುತ್ತಾರೆ.

ಬಹಳಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಅದರಲ್ಲೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ನಡವಳಿಕೆಗಳು ನಡೆಯುತ್ತಿದೆ. ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೇಳುವವರು ಕೇಳುವವರೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ  ಕಾರ್ಯಕ್ರಮದ ಭಾವಚಿತ್ರವನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿ ಕೊಡುವಂತಹ ಸುತ್ತೋಲೆಯನ್ನು ಹೊರಡಿಸಿ, ಯಾವ ಶಾಲೆಯವರು ಅಥವಾ ಸರ್ಕಾರಿ ಸಂಸ್ಥೆಯವರು ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಳವಡಿಸಿ ಗೌರವ ನೀಡದಿದ್ದರೆ ಅಂತಹ ಸಂಸ್ಥೆಗಳ ಮೇಲೆ ಕ್ರಮವನ್ನ ಕೈಗೊಳ್ಳುವ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಿ.

ಮಕ್ಕಳ ಮನಸ್ಸಿನಲ್ಲಿ ಗಾಂಧೀಜಿಯವರ ಬಗ್ಗೆ ಕೆಟ್ಟ ಭಾವನೆಯನ್ನು ತುಂಬುವಂತಹ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ಜೊತೆಗೆ ಅಂಬೇಡ್ಕರ್ ಅವರಿಗೂ ಸಹ ಅಪಮಾನ ಮಾಡುವಂತ ಪ್ರಸಂಗಗಳು ನಡೆಯುತ್ತಲೇ ಇದೆ. 78ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿಯೂ ಸಹ ಅನೇಕರ ಮನಸ್ಸುಗಳು ಬದಲಾಗಿರುವುದಿಲ್ಲ. ಅವರಲ್ಲಿ ಸಮಾನತೆ, ಸದ್ಭಾವನೆ, ಮಾನವೀಯತೆ, ಇವುಗಳ ಅಲ್ಪಜ್ಞಾನವು ಇಲ್ಲದಿರುವುದು ನೋವಿನ ಸಂಗತಿಯಾಗಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply