ಬೆಂಗಳೂರಿನ ಅನೇಕ ಸಭಾಂಗಣಗಳಲ್ಲಿ ಪ್ರತಿದಿನವೂ ಸಾಂಸ್ಕೃತಿಕವಾಗಿ, ಸಾಹಿತ್ಯ, ನಾಟಕ, ವಿಚಾರಗೋಷ್ಠಿಗಳು, ಪುಸ್ತಕ ಬಿಡುಗಡೆ ಸಮಾರಂಭ, ಅನೇಕರ ಹುಟ್ಟುಹಬ್ಬದ ಕಾರ್ಯಕ್ರಮ, ಶ್ರದ್ಧಾಂಜಲಿ ಸಭೆಗಳು, ಅಭಿನಂದನೆ ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇಂತಹ ಸಂದರ್ಭದಲ್ಲಿ ಆಸಕ್ತ ಪ್ರೇಕ್ಷಕರು ಮತ್ತು ಆಹ್ವಾನಿಕರು ಸಭಾಂಗಣದಲ್ಲಿ ತುಂಬಿರುತ್ತಾರೆ. ತಮ್ಮ ಮನಸ್ಸಿಗೆ ಒಪ್ಪುವ ಮತ್ತು ತಮ್ಮ ಹಿತೈಷಿಗಳು ಸಂಘಟಿಸುವ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಾರೆ. ಇವರ ಜೊತೆಯಲ್ಲಿ ಒಂದಷ್ಟು ಮಂದಿ ನಗರದಲ್ಲಿ ಇಂದು ಕಾರ್ಯಕ್ರಮವನ್ನು ಗಮನಿಸಿ ಬರುವಂತಹ ಆಸಕ್ತರು ಇದ್ದಾರೆ.
ಇದರ ಹೊರತಾಗಿ ಕಾರ್ಯಕ್ರಮಗಳನ್ನು ಅವಲಂಬಿಸಿಯೇ ತಮ್ಮ ಬದುಕನ್ನ ರೂಪಿಸಿಕೊಂಡಿರುವ ವಿಶೇಷವಾಗಿ ಹಸಿವನ್ನ ನೀಗಿಸಿಕೊಳ್ಳುವ ಕೆಲವರು ನಗರದಲ್ಲಿದ್ದು, ಕಾರ್ಯಕ್ರಮದ ರಾಯಭಾರಿಗಳು ಎನ್ನುವ ರೀತಿಯಲ್ಲಿ ಉಪಸ್ಥಿತರಿರುವ ಮಂದಿಯು ಸಭಾಂಗಣದಲ್ಲಿ ಕೊನೆಯ ಆಸನಗಳಲ್ಲಿ ವಿಜೃಂಭಿಸಿರುತ್ತಾರೆ.
ದಿನಪತ್ರಿಕೆ ಒಂದನ್ನ ಕೊಂಡು ಅದರಲ್ಲಿರುವ ಕಾರ್ಯಕ್ರಮಗಳ ವಿವರವನ್ನು ಓದಿ ಆಯ್ದ ಕಾರ್ಯಕ್ರಮಗಳಲ್ಲಿ ಮಾತ್ರವೇ ಇವರು ಭಾಗವಹಿಸುತ್ತಾರೆ. ಇವರು ಬಹುತೇಕ ಸಂದರ್ಭಗಳಲ್ಲಿ ತಿಂಡಿ ಸಾಲಿನಲ್ಲಿ ನಿಂತು ಕಾರ್ಯಕ್ರಮದ ಆರಂಭದಲ್ಲಿ ಕೆಲವು ನಿಮಿಷಗಳ ಕಾಲ ಉಪಸ್ಥಿತರಿದ್ದು, ಮಿಂಚಿನಂತೆ ಮಾಯವಾಗುತ್ತಾರೆ. ಇವರಲ್ಲಿ ಕೆಲವರು ಮಾತ್ರ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಭಾಗವಹಿಸುತ್ತಾರೆ.
ಇವರಿಂದ ಎಷ್ಟೋ ವೇಳೆ ಕಾರ್ಯಕ್ರಮದ ಸಂಘಟಕರಿಗೆ ಪ್ರೇಕ್ಷಕರ ಕೊರತೆಯೂ ನೀಗುತ್ತದೆ. ಇವರು ತಿಳಿದಿರುವಷ್ಟು ವಿಚಾರವನ್ನು ಬೇರೆ ಯಾರೂ ತಿಳಿದಿರುವುದಿಲ್ಲ. ಕಾರ್ಯಕ್ರಮದ ಸಂಘಟಕರು ಯಾರು? ಆ ಸಂಘಟನೆಯ ಶಕ್ತಿ ಏನು? ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಖ್ಯ ಅತಿಥಿಗಳ ಹಿನ್ನೆಲೆಯೇನು? ಯಾರ ಭಾಷಣ ಚೆನ್ನಾಗಿರುತ್ತೆ, ಯಾರು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಮಾಡುತ್ತಾರೆ ಮತ್ತು ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ಸೂಕ್ತವಾದ ರೀತಿಯಲ್ಲಿ ಮಾಡುವ ಸಂಘಟಕರು ಯಾರು? ಎನ್ನುವ ವಿಚಾರ ಇವರಿಗೆ ತಿಳಿದಿರುತ್ತದೆ.
ಇವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಲವು ಮಂದಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕಗಳನ್ನ ಪಡೆದುಕೊಂಡು ಓದುವ ಆಸಕ್ತಿಯನ್ನು ಬೆಳೆಸಿಕೊಂಡು ನಂತರ ಪುಸ್ತಕಗಳನ್ನ ಮಾರಾಟವನ್ನು ಮಾಡುತ್ತಾರೆ. ಈ ರೀತಿಯಲ್ಲಿ ಬರುವ ಕೆಲವರು ತುಂಬಾ ಆಸಕ್ತಿಯನ್ನ ಹೊಂದಿ ನಿಜಕ್ಕೂ ಇವರು ಸಾಂಸ್ಕೃತಿಕ ಕ್ಷೇತ್ರದ ವಿಚಾರದಲ್ಲಿ ಸಾಕಷ್ಟು ಮಾಹಿತಿಯನ್ನು ಪಡೆದುಕೊಳ್ಳುವ ಮತ್ತು ಯಾರಿಗಾದರೂ ಒಂದಷ್ಟು ವಿಚಾರವನ್ನು ಹೇಳುವ ಮಟ್ಟಕ್ಕೆ ಬುದ್ಧಿವಂತರಾಗಿರುತ್ತಾರೆ.
ಬೆಂಗಳೂರು ನಗರದಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಹಸಿವನ್ನು ನೀಗಿಸಿಕೊಂಡು ಜೊತೆಗೆ ಒಂದಷ್ಟು ಜ್ಞಾನವನ್ನು ಪಡೆದುಕೊಂಡು ತಮ್ಮ ತಮ್ಮಲ್ಲಿಯೇ ಇವುಗಳನ್ನು ಚರ್ಚೆ ಮಾಡುತ್ತಾ ತಮ್ಮದೇ ಆದ ಒಂದು ಸಂಘಟನೆಯನ್ನು ಇವರು ನಿರ್ಮಿಸಿಕೊಂಡಿದ್ದಾರೆ. ಇವರಿಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವಂತಹ ಮನಸ್ಸು ಇರುತ್ತದೆ.
ಬೆಂಗಳೂರು ನಗರದಲ್ಲಿ ಯಾವ ರೀತಿಯಲ್ಲೂ ಬೇಕಾದರೂ ತಮ್ಮ ಸಮಯವನ್ನು ಚಟುವಟಿಕೆಯಿಂದ ಇರುತ್ತಾ ಜೊತೆಗೆ ಹಸಿವನ್ನು ನೀಗಿಸಿಕೊಳ್ಳಬಹುದು ಎನ್ನುವುದನ್ನು ನಗರದಲ್ಲಿ ಇಂದು ಕಾರ್ಯಕ್ರಮದ ರಾಯಭಾರಿಗಳಾದ ಇವರು ತೋರಿಸಿಕೊಟ್ಟಿದ್ದಾರೆ.
ಇವರು ಉಚಿತ ಪ್ರವೇಶದ ಕಾರ್ಯಕ್ರಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಎಷ್ಟೋ ವೇಳೆ ತಿಂಡಿಯ ಸರತಿಯ ಸಾಲಿನಲ್ಲಿ ನಿಂತಿರುವಂತಹ ಜನರ ಸಂಖ್ಯೆಯನ್ನು ಗಮನಿಸಿ ಕಾರ್ಯಕ್ರಮದ ಆಯೋಜಕರಿಗೆ ಸಭಾಂಗಣ ತುಂಬುತ್ತದೆ ಎಂಬ ವಿಶ್ವಾಸದಲ್ಲಿರುತ್ತಾರೆ. ಆದರೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಸಭಾಂಗಣದಲ್ಲಿ ತಿಂಡಿಯ ಸಾಲಿನಲ್ಲಿದ್ದ ಅನೇಕ ಮಂದಿ ಕಾಣಸಿಗುವುದಿಲ್ಲ. ಹೀಗಾಗಿ ಅನೇಕ ಸಂಘಟಕರು ಕಾರ್ಯಕ್ರಮದ ನಂತರ ತಿಂಡಿ ಮತ್ತು ಊಟವನ್ನು ನೀಡುವ ಬುದ್ಧಿವಂತಿಕೆ ಪ್ರದರ್ಶಿಸುತ್ತಾರೆ.
ರವೀಂದ್ರ ಕಲಾಕ್ಷೇತ್ರ, ಪುಟ್ಟಣ್ಣ ಚಟ್ಟಿ ಸಭಾಂಗಣ ,ಕನ್ನಡ ಸಾಹಿತ್ಯ ಪರಿಷತ್ತು, ನಯನ ಸಭಾಂಗಣ ಮತ್ತು ಕುವೆಂಪು ಕಲಾಕ್ಷೇತ್ರದಲ್ಲಿ ಇವರ ಸಂಚಾರವಿರುತ್ತದೆ. ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿ ಇವರು ಓಡಾಡುತ್ತಿರುತ್ತಾರೆ. ಇವರು ಆರೋಗ್ಯವಂತರು ಇದ್ದಾರೆ. ಜೊತೆಗೆ ಹೊಟ್ಟೆ ತುಂಬಾ ತಿಂದು ಅದೆಷ್ಟೋ ಬಾರಿ ಸಭಾಂಗಣಗಳಲ್ಲಿ ಸುಖದ ನಿದ್ರೆಯಲ್ಲಿ ಇರುತ್ತಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




