ಅವನು ಮೊದಲಿನಿಂದಲೂ ಧರ್ಮ ಮತ್ತು ಜಾತಿಯ ವಿಚಾರದಲ್ಲಿ ಹೆಚ್ಚು ಮಾತನಾಡುತ್ತಿದ್ದ. ತಾನೇ ಶ್ರೇಷ್ಠ ಎಂಬ ಅಹಂಕಾರವು ಅವನಲ್ಲಿತ್ತು. ಹೀಗೆ ಬದುಕು ಸಾಗುತ್ತಿರುವ ಸಂದರ್ಭದಲ್ಲಿ ಅವನಿಗೆ ಗಂಭೀರವಾದಂತಹ ಕಾಯಿಲೆ ಬಂದಿತು. ಅವನನ್ನು ಆಸ್ಪತ್ರೆಗೆ ಸೇರಿಸಬೇಕಿತ್ತು, ಈ ವೇಳೆಯಲ್ಲಿ ಆಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವ್ಯವಸ್ಥೆಯನ್ನ ಮಾಡುವ ಸಂದರ್ಭದಲ್ಲಿ ವಾಹನದ ಚಾಲಕನ ಹೆಸರನ್ನು ಸಹಜವಾಗಿ ಕೇಳಿದೆ. ಆಗ ಅವನು ರಶೀದ್ ಎಂದು ಹೇಳಿದ. ನಾನು ಕೂಡಲೇ ಸ್ನೇಹಿತನಿಗೆ ಅವನು ಬೇರೆ ಧರ್ಮದವನು ನೋಡು ಮನಸ್ಸಿಲ್ಲದಿದ್ದರೆ ಬೇಡ ಎಂದು ಕೇಳಿದೆ. ಕಾಯಿಲೆಯಿಂದ ತುಂಬಾ ನರಳುತ್ತಿದ್ದ ಅವನು ಈಗ ಆ ಮಾತು ಬೇಡ ಎಂದ.
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
ಇವನನ್ನು ಆಸ್ಪತ್ರೆಗೆ ಸೇರಿಸಿದೆ ಇವನಿಗೆ 5 ಬಾಟಲ್ ರಕ್ತ ಬೇಕಿತ್ತು. ಈ ಸಂದರ್ಭದಲ್ಲಿ ಇವನ ಹತ್ತಿರದ ಬಂಧುಗಳು ರಕ್ತ ಕೊಡಬೇಕು ಎಂದು ಹೇಳುತ್ತಿದ್ದಂತೆ ಮಾಯವಾದರು. ಕೊನೆಗೆ ಸ್ನೇಹಿತರು ಮತ್ತು ಬ್ಲಡ್ ಬ್ಯಾಂಕಿನಲ್ಲಿ ರಕ್ತವನ್ನು ಸಂಗ್ರಹಿಸಿ ಕೊಡುವಂತಹ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಬೇರೆ ಬೇರೆ ಜಾತಿಯ ಜನರ ಯುವಕರು ರಕ್ತವನ್ನು ಕೊಡಲು ಬಂದಿದ್ದರು. ಆಗ ನಾನು ಮತ್ತೊಮ್ಮೆ ಇವರಿಗೆ ಕೇಳಿದೆ, ಇವರು ನಿಮ್ಮ ಜಾತಿಯವರಲ್ಲ ಯೋಚನೆ ಮಾಡಿ ನೋಡು. ಆಮೇಲೆ ಬೇಜಾರು ಮಾಡಿಕೊಳ್ಳಬೇಡ. ನಿನ್ನ ದೇಹಕ್ಕೆ ಇವರ ರಕ್ತ ಸೇರಿಕೊಂಡು ಬಿಡುತ್ತದೆ ಎಂದೆ. ಅದಕ್ಕೆ ಅವನು ಆಗಲು ಈಗ ಮಾತು ಬೇಡ ಎಂದ.
ಹಾಸಿಗೆ ಮೇಲೆ ನರಳುತ್ತಿದ್ದ ಇವನ ಸೇವೆಯನ್ನು ಮಾಡಲು ಬಂದಂತಹ ಮಹಿಳೆಯರ ಹೆಸರು ಕೇಳಿದೆ. ಆಗಲು ಇವನಿಗೆ ನೋಡು ಇವರು ನಿಮ್ಮವರಲ್ಲವೇನೋ ಎನಿಸುತ್ತದೆ ಎಂದೆ. ಆಗಲು ಅವನು ಈಗ ಮಾತು ಬೇಡ ಎಂದ.
ಇವರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡುವ ವೈದ್ಯರು ಸಹ ಅನ್ಯ ಧರ್ಮಕ್ಕೆ ಸೇರಿದ್ದರು. ಆಗ ನಾನು ಅಂತಿಮವಾಗಿ ನಿನಗೆ ಶಸ್ತ್ರಚಿಕಿತ್ಸೆ ಮಾಡುವವರು ಇಂತಹ ಹೆಸರಿನವರು ಎಂದೆ. ಆಗಲು ಅವನು ಈಗ ಮಾತು ಬೇಡ ಎಂದ.
ಇವರಿಗೆ ಪ್ರತಿದಿನವೂ ಆರೈಕೆ ಮಾಡುತ್ತಿದ್ದ ನರ್ನಸ್ ಗಳ ಹೆಗಲಲ್ಲಿ ಶಿಲುಬೆ ಕಾಣಿಸುತ್ತಿತ್ತು. ಆಗ ನಾನು ಅಂತಿಮವಾಗಿ ನೋಡು ಇವರು ಸಹ ನಿಮ್ಮವರಲ್ಲ ಎಂದೆ. ಆಗ ಅವನು ನನ್ನನ್ನು ನೋಡುತ್ತಾ ತನ್ನ ಎರಡು ಕೈಗಳನ್ನ ಮುಗಿದು ಕಣ್ಣಿನಿಂದ ನೀರು ಸುರಿಸಿದ.
ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದು ಚೇತರಿಸಿಕೊಂಡ ಅವನು ಈಗ ಮೊದಲಿನಂತಿರಲಿಲ್ಲ. ಸಂಪೂರ್ಣವಾಗಿ ಬದಲಾಗಿದ್ದ. ಸಂಕಷ್ಟದ ಸಮಯದಲ್ಲಿ ಅವನ ನೆರವಿಗೆ ನಿಂತ ಜನಗಳ ಮುಖಗಳು ಅವರ ಮುಂದೆ ಬಂದು ಅವನಿಗೂ ಅನಿಸಿತು ಎಲ್ಲಕ್ಕಿಂತ ಮಾನವ ಧರ್ಮವೇ ದೊಡ್ಡದು ಎಂದು, ಸಂಕಷ್ಟದ ಸಮಯದಲ್ಲಿ ಯಾವುದು ನೆರವಿಗೆ ಬರುವುದೆಲ್ಲವೆಂಬ ಸತ್ಯ ಅರಿವಾಯಿತು.
– ಕೆ ಎಸ್ ನಾಗರಾಜ್, ಬೆಂಗಳೂರು




