ಬಳ್ಳಾರಿ: ನಗರದ ರಾಬರ್ಟ್ ಬ್ರೂಸ್‍ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಆಫ್ರಿಕಾದಲ್ಲಿ ಸಿಕ್ಕ ಹಳೆ ಶಿಲಾಯುಗದ ಕಲ್ಲಿನ ಆಕರಗಳನ್ನು 3ಡಿ ಮಾದರಿಯಲ್ಲಿ ತಯಾರಿಸಿದ ತದ್ರೂಪ ಆಕರಗಳಾಗಿ ಸಾರ್ವಜನಿಕರ ವೀಕ್ಷಣೆಗಾಗಿ ಪ್ರದರ್ಶನಕ್ಕೆ ಇರಿಸಲಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಈ 3ಡಿ ಮಾದರಿ ಆಕರಗಳು ಬೋನಕ್ಲೋನ್ಸ್ ಎಂಬ ಅಮೆರಿಕನ್ ಕಂಪನಿಯಿಂದ ಖ್ಯಾತ ಪ್ರಾಗೈತಿಹಾಸ ತಜ್ಞ ಪ್ರೊ.ರವಿ ಕೋರಿಶೆಟ್ಟರ್ ಅವರು ಖರೀದಿಸಿ ವಸ್ತು ಸಂಗ್ರಹಾಲಯಕ್ಕೆ ನೀಡಿದ್ದಾರೆ.

ವಸ್ತು ಸಂಗ್ರಹಾಲಯದ ನಿರ್ವಹಣಾ ಸಮಿತಿಯ ಸದಸ್ಯರುಗಳಾದ ಸಂತೋಷ್ ಮಾರ್ಟಿನ್ ಹಾಗೂ ಎಂ.ಅಹಿರಾಜ ಅವರು ಈ 3ಡಿ ಮಾದರಿಯ ಆಕರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಅವರಿಗೆ ನೀಡಿ ಪ್ರದರ್ಶನಕ್ಕೆ ಇರಿಸಲಾಯಿತು.
‘ಈ ವಸ್ತು ಸಂಗ್ರಹಾಲಯದಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ಸಿಕ್ಕ 15 ತಲೆಬುರುಡೆಗಳ ತದ್ರೂಪನ್ನು ಪ್ರದರ್ಶನಕ್ಕಿರಿಸಿರುವುದು ಒಂದು ವಿಶೇಷ. ಜನರು, ಪ್ರಮುಖವಾಗಿ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ವಸ್ತು ಸಂಗ್ರಹಾಲಯದಲ್ಲಿ ಪ್ರದಶನಕ್ಕಿರಿಸಿದ ವಿಶೇಷ ವಸ್ತುಗಳನ್ನು ವೀಕ್ಷಿಸಬೇಕು ಮತ್ತು ಸಾರ್ವಜನಿಕರೂ ವೀಕ್ಷಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಅಭಿಪ್ರಾಯಪಟ್ಟರು.




