ಈ ಪುಸ್ತಕದಲ್ಲಿ ಖಲೀಲ್ ಗಿಬ್ರಾನ್ ಜೀವಿಸಿದ್ದಾರೆ

2 years ago

ಒಂದು ಜೀವಂತ ಪುಸ್ತಕ

ಬಾರ್ಬರಾ ಯಂಗ್ ಬರೆದಿರೋ ಈ ಪುಸ್ತಕದಲ್ಲಿ ಖಲೀಲ್ ಗಿಬ್ರಾನ್ ಜೀವಿಸಿದ್ದಾರೆ… ನಮ್ಮೊಂದಿಗೆ ಜೀವಿಸುತ್ತಾರೆ.

ಸದ್ಯ ನನ್ನ ಕೈಲಿರೋ ಅತ್ಯಂತ ಜೀವಂತ ಪುಸ್ತಕ ವಿದು. ಇಡೀ ದಿನ ಜಪ್ಪು ಹಾಕಿ ಕೂತು ಈಗ 172 ನೇ ಪೇಜಿಗೆ ಬಂದಿರುವೆ.

ಈ ಪುಸ್ತಕ ನನಗೆ ಕೊಟ್ಟ ಜೀವಂತಿಕೆಯನ್ನ ನನ್ನಿಬ್ಬರು ಆಪ್ತರೊಂದಿಗೆ ಮಾತಾಡಿ ಹಂಚಿಕೊಂಡೆ.

Sandhya Rani ಯವರ ಕ್ಲಾಸಿಕ್ ವರ್ಕ್ ಇದು. ಬಾರ್ಬರಾಳ ಬರಹದ ಎತ್ತರ ಆಳ ವಿಸ್ತಾರ ಮತ್ತು ನಿರಂತರತೆಗೆ ಸಮನಾಗಿ ನಿಂತು ಒಂದು ಭಾಷಾ ಲೋಕದಲ್ಲಿ ಜೀವಂತವಾಗಿರುವ ಕೃತಿಯನ್ನ ಅದೇ ಜೀವಂತಿಕೆಯಿಂದ ಮತ್ತೊಂದು ಭಾಷಾಲೋಕದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡೋದು ಸುಲಭದ ಕೆಲಸವಲ್ಲ.

ಗದ್ಯಕ್ಕೆ ಬಹಳಷ್ಟು ಅಂಕಗಳನ್ನ ಕೊಡಬಹುದಾದರೂ ಮಧ್ಯದ ಪದ್ಯಗಳಲ್ಲಿ ಸಮಾಧಾನ ಎನ್ನುವಷ್ಟು ಮಾತ್ರ.

ಈ ಪುಸ್ತಕ ನನ್ನೊಳಗೆ ಹುಟ್ಟಿಸಿರುವ ಬೆರಗು ಜೀವಂತಿಕೆ ಮತ್ತು ಯಾರ ಕೈಗೆ ಸಿಕ್ಕರೂ ಅವರನ್ನ ಮತ್ತಷ್ಟು ಮನುಷ್ಯರಾಗಿಸುವ ಈ ಪುಸ್ತಕ ದ ಮಾಂತ್ರಿಕತೆಗೆ ನಾನು ಮನಸೋತಿದ್ದೇನೆ.

ಈ ಪುಸ್ತಕ ಬಂದು ವರುಷವಾದರೂ ನಮ್ಮ ವಿದ್ವತ್ ವಲಯ ಮತ್ತು ಓದುಗ ವಲಯ ಅಷ್ಟು ಉತ್ಸಾಹದಿಂದ ಈ ಪುಸ್ತಕವನ್ನ ಬರಮಾಡಿಕೊಂಡಿಲ್ಲ.

ಇದು ಕಥಾಕಥಿತ ಅಕಾಡೆಮಿಕ್ ಆದ ಸಂಶೋಧನೆಯೂ ಅಲ್ಲ, ವಿಮರ್ಶೆಯೂ ಅಲ್ಲ, ಪದ್ಯ ಪ್ರಬಂಧ ಕಥನವೂ ಅಲ್ಲ, ಸ್ವಕಥನ ಜೀವನ ಚರಿತ್ರೆಯೂ ಅಲ್ಲ. ಹಾಗಾಗಿ ಯಾವುದೋ ಒಂದು ಚೌಕಟ್ಟಿನ ಬರಹ ಬಯಸೋ ನಮ್ಮ ಮಂದಿಗೆ ಈ ಪುಸ್ತಕ ರುಚಿಸಲಿಲ್ಲವಾ? ಗೊತ್ತಿಲ್ಲ.

ಇದು ಗಿಬ್ರಾನ್ ಖಲೀಲ್ ಗಿಬ್ರಾನ್ ನ ನೆರಳಿನ ನೆರಳು. ಈ ನೆರಳಿನ ನೆರಳಿಗೆ ಇಷ್ಟೊಂದು ಅಂತಃಶಕ್ತಿ ಇರಬೇಕಾದರೆ ಮೂಲ ಜೀವಕ್ಕೆ ಅದೆಷ್ಟು ಸತ್ವವಿರಬೇಕು.

ವಿವರವಾಗಿ ಬರೆಯುವೆ.

ನನ್ನ ಸ್ನೇಹಿತರು, ಬಂಧುಬಳಗ, ಅತ್ಯಾಪ್ತರು ಈ ಪುಸ್ತಕ ಓದಲೇಬೇಕು. ನೀವು ಓದಿ ಮುಗಿಸಿದ ಮೇಲೆ ನಾವೇ ಇದ್ದಲ್ಲಿಂದಲೇ ಒಂದು ಸಮಯ ನಿಗದಿಮಾಡಿಕೊಂಡು ಕ್ಲಬ್ ಹೌಸಿನಲ್ಲಿ ಚರ್ಚಿಸೋಣ. ಅಥವಾ ಯಾರಾದರೂ ಆಯೋಜಿಸಿದರೆ ಹೇಳಿ. ನಾನೂ ಪಾಲುದಾರನಾಗುವೆ.

Nudi Pustaka  ಈ ಪುಸ್ತಕ ಜನಾರ್ಪಣೆ ಮಾಡಿದ್ದಾರೆ. ಪುಸ್ತಕ ಕ್ಕೆ ನುಡಿ ಪುಸ್ತಕ ರಂಗನಾಥರನ್ನ ಸಂಪರ್ಕಿಸಿ.

ಈ ಪುಸ್ತಕ ದ ಬಗ್ಗೆ ನಾವು ಮಾತನಾಡದೇ ಹೋದರೆ ಯಾರಿಗೇನೂ ನಷ್ಟವಿಲ್ಲ, ಕನ್ನಡಕ್ಕೆ ಕಾಲಕ್ಕೆ ಮತ್ತು ನಮ್ಮ ಸಮೃದ್ಧ ಸಹೃದಯಿ ಮನುಷ್ಯಕುಲಕ್ಕೆ ನಷ್ಟವಷ್ಟೇ.

– ವೀರಣ್ಣ ಮಡಿವಾಳರ, ಕವಿಗಳು

Leave a Reply