ಐಎನ್ಎ ರಾಮರಾವ್ ಅಪ್ರತಿಮ ದೇಶಪ್ರೇಮಿ: ವೆಂಕಟ ನಾಗಪ್ಪ ಶೆಟ್ಟಿ

2 years ago

ಚಾಮರಾಜನಗರ: ಐಎನ್ಎ ರಾಮರಾವ್ ಅವರು ಸುಭಾಷ್ ಚಂದ್ರ ಬೋಸ್ ಅವರ ಪ್ರೀತಿಯ ಶಿಷ್ಯರಾಗಿ ಅಪ್ರತಿಮ ದೇಶಪ್ರೇಮಿಯಾಗಿದ್ದರು ಎಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೆಂಕಟ ನಾಗಪ್ಪ ಶೆಟ್ಟಿ ಹೇಳಿದರು.

ಭಾರತ ಸೇವಾದಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಐಎನ್ಎ ರಾಮರಾವ್ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಸ್ತಿನ ಸಿಪಾಯಿ ಆಗಿದ್ದ ಐಎನ್ಎ ರಾಮರಾವ್ ಅವರು ತಮ್ಮ ಕೊನೆಯ ದಿನಗಳನ್ನು ಭಾರತ ಸೇವಾದಳದ ಕಚೇರಿಯಲ್ಲಿಯೇ ಕಳೆದು ಜೀವನ ತ್ಯಾಗ ಮಾಡಿದರು ಎಂದರು.

ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಸ್ವಾತಂತ್ರ್ಯ ಸೇನಾನಿ ಐಎನ್ಎ ರಾಮರಾವ್ ಅವರ ದೇಶಭಕ್ತಿ, ರಾಷ್ಟ್ರ ಪ್ರೇಮ, ಶಿಸ್ತು ಮತ್ತು ಆದರ್ಶಗಳನ್ನು ಇಂದಿನ ಯುವ ಜನತೆ ಮೈಗೂಡಿಸಿಕೊಳ್ಳಬೇಕು. ಮಾರ್ಚ್ 27 ಐಎನ್ಎ ರಾಮರಾವ್ ಅವರ ಹುಟ್ಟುಹಬ್ಬವನ್ನು ಭಾರತ ಸೇವಾದಳದ ವತಿಯಿಂದ ವಿಶೇಷವಾಗಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಭಾರತ ಸೇವಾದಳದ ತಾಲೂಕು ಕಾರ್ಯದರ್ಶಿ ನಾಗರಾಜು , ಕೋಶಾಧ್ಯಕ್ಷ ಪ್ರಸಾದ್ ಭಾಗವಹಿಸಿದ್ದರು. ಭಾರತ ಸೇವಾದಳದ ಸಂಘಟಕ ಅರುಣ್ ಕಾರ್ಯಕ್ರಮ ನಿರ್ವಹಿಸಿದರು. ಸರ್ವಧರ್ಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Leave a Reply